ಬಿಗ್ ಬಾಸ್ ಸೀಸನ್ 11 ರ 9 ನೆ ವಾರದ ಕಿಚ್ಚ ಪಂಚಾಯ್ತಿಯಲ್ಲಿ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ನೊಮಿನೇಟ್ ಆಗಿದ್ದ 7 ಸ್ಪರ್ಧಿಗಳಲ್ಲಿ ಶನಿವಾರ ಎಪಿಸೋಡ್ ನಲ್ಲಿ ಗೋಲ್ಡ್ ಸುರೇಶ್ ಹಾಗೂ ತ್ರಿವಿಕ್ರಮ್ ಅವರು ಸೇವ್ ಆಗಿದ್ದು ಇನ್ನುಳಿದ ಸ್ಪರ್ಧಿಗಳಾದ ಶಿಶಿರ್, ಐಶ್ವರ್ಯ, ಶೋಭಾ ಶೆಟ್ಟಿ, ಚೈತ್ರ ಕುಂದಾಪುರ, ಹಾಗೂ ಭವ್ಯ ಅವರನ್ನ ಸೇಫ್ ಆಗಿರಲಿಲ್ಲ.ಆದರೆ ಇಂದು ಭಾನುವಾರದ ಸಂಚಿಕೆಯಲ್ಲಿ ಮೊದಲು ಭವ್ಯ ಅವರು ಸೇವ್ ಆಗಿರುತ್ತಾರೆ, ಎರಡನೆಯದಾಗಿ ಶೋಭಾ ಶೆಟ್ಟಿ ಹಾಗೂ ಮೂರನೆಯದಾಗಿ ಚೈತ್ರ ಅವರು ಸೇಫ್ ಆಗಿದ್ದು ಡೇಂಜರ್ ಜೋನ್ ನಲ್ಲಿ ಈಗ ಶಿಶಿರ್ ಹಾಗೂ ಐಶ್ವರ್ಯ ಅವರು ಇದ್ದು ಇವರಿಬ್ಬರಲ್ಲಿ ಈ ವಾರ ಒಬ್ಬರು ಮನೆಗೆ ಹೋಗಬೇಕಿತ್ತು , ಆದರೆ ಇದರ ಮದ್ಯ ಶೋಭಾ ಶೆಟ್ಟಿ ಅವರು ತಾನು ಮನೆಯಿಂದ ಹೊರಗೆ ಹೋಗುತ್ತೇನೆ ಎಂದು ಕೇಳಿಕೊಂಡಿದ್ದಾರೆ.
ಐಶ್ವರ್ಯ ಹಾಗೂ ಶೋಭಾ ಶೆಟ್ಟಿ ಇವರಲ್ಲಿ ಬಿಗ್ ಬಾಸ್ ಮನೆಯಿಂದ ಹೊರ ಬಂದ ಸ್ಪರ್ಧಿ ಯಾರು? biggboss Season 11 9th week Elimination, BBK11, Bigg Boss Kannada
ಶೋಭಾ ಶೆಟ್ಟಿ ಮನೆಯಿಂದ ಹೊರಗೆ ಹೋಗ್ತಾರಾ.?
ಶೋಭಾ ಶೆಟ್ಟಿ ಅವರು ಸೇಫ್ ಆಗಿದ್ದರು ಸಹ ತಾನು ಬಿಗ್ ಬಾಸ್ ಮನೆಯಿಂದ ಹೊರ ಹೋಗುತ್ತೇನೆ ಎನ್ನುವ ಮಾತನ್ನ ಆಡಿದ್ದಾರೆ, ಹೌದು ಶೋಭಾ ಶೆಟ್ಟಿ ಅವರಿಗೆ ಆಟವಾಡಲು ಆಗುತ್ತಿಲ್ಲವಂತೆ ಹಾಗೆ ಜನರ ಎಕ್ಸಪೆಕ್ಟೇಷನ್ ಗೆ ತಕ್ಕ ಹಾಗೆ ನನಗೆ ಆಡಲು ಆಗುತ್ತಿಲ್ಲ. ನಾನು ಮನೆಗೆ ಹೋಗುತ್ತೇನೆ ಎಂದು ಭಾನುವಾರದ ಕಿಚ್ಚನ ಪಂಚಾಯ್ತಿಯಲ್ಲಿ ಶೋಭಾ ಶೆಟ್ಟಿ ಅವರು ಕೇಳಿಕೊಂಡಿದ್ದಾರೆ. ಇದಕ್ಕೆ ಗರಂ ಆದ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಮನೆ ಬಾಗಿಲನ್ನು ಓಪನ್ ಮಾಡಿಸಿದ್ದಾರೆ, ಇದರಿಂದಾಗಿ ಶೋಭಾ ಶೆಟ್ಟಿ ಅವರು ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗಬಹುದು ಎಂದು ಹೇಳಲಾಗುತ್ತಿದೆ. ಇನ್ನು ಇದು ಬಿಗ್ ಬಾಸ್ TRP ಹೆಚ್ಚಿಸಲು ಸಹ ಈ ರೀತಿ ಮಾಡಿರಬಹುದು ಎಂದು ಹೇಳಲಾಗುತ್ತಿದೆ.
ನಿಜವಾಗಿ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದು ಯಾರು ಐಶ್ವರ್ಯ or ಶೋಭಾ ಶೆಟ್ಟಿ:
ಬಿಗ್ ಬಾಸ್ ಸೀಸನ್ 11 ರ 9 ನೇ ವಾರದಲ್ಲಿ ಶಿಶಿರ್ ಹಾಗೂ ಐಶ್ವರ್ಯ ಅವರು ಡೇಂಜರ್ ಜೋನ್ ನಲ್ಲಿ ಇದ್ದು ವೋಟಿಂಗ್ ಹಾಗೂ ಬಿಗ್ ಬೋಸ್ ನ ಆಟ ಎಲ್ಲವನ್ನೂ ನೋಡಿದರೆ ಐಶ್ವರ್ಯ ಅವರು ಬಿಗ್ ಬೋಸ್ ಮನೆಯಿಂದ ಹೊರ ಬರಬೇಕಿತ್ತು ಆದರೆ ಈಗ ಶೋಭಾ ಶೆಟ್ಟಿ ಅವರು ಸ್ವತಃ ತಾವೇ ಬಿಗ್ ಬೋಸ್ ಮನೆಯಿಂದ ಹೊರ ಹೋಗುತ್ತೇನೆ ಎಂದು ಹೇಳಿದ ಕಾರಣ ಈ ವಾರ ಶೋಭಾ ಶೆಟ್ಟಿ ಅವರು ಬಿಗ್ ಬೋಸ್ ಮನೆಯಿಂದ ಹೊರ ಹೋಗಿರುತ್ತಾರೆ.
ಐಶ್ವರ್ಯ ಹಾಗೂ ಶೋಭಾ ಶೆಟ್ಟಿ ಇವರಲ್ಲಿ ಬಿಗ್ ಬಾಸ್ ಮನೆಯಿಂದ ಹೊರ ಬಂದ ಸ್ಪರ್ಧಿ ಯಾರು? biggboss Season 11 9th week Elimination, BBK11, Bigg Boss Kannada, Kiccha Sudeep