ನಮಸ್ಕಾರ ಸ್ನೇಹಿತರೇ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಇದೆ ಫೆಬ್ರವರಿ 1 ರಿಂದ ಸಂಜೆ 7:30 ರಿಂದ 9 ಗಂಟೆಯ ವರೆಗೆ ಬಾಯ್ಸ್ vs ಗರ್ಲ್ಸ್ ಎನ್ನುವ ಶೋ ಪ್ರಸರವಾಗುತ್ತಿದ್ದು , ಇದರಲ್ಲಿ ಶ್ರುತಿ ಹಾಗೂ ತಾರಾ ಅವರು ಜಜಸ್ ಗಳಾಗಿದ್ದು , ಅನುಪಮಾ ಗೌಡ ಅವರು ಈ ಶೋ ನ ನಿರೂಪಕರಾಗಿರುತ್ತಾರೆ ಹಾಗೆ ಈ ರಿಯಾಲಿಟಿ ಶೋ ನಲ್ಲಿ ಒಟ್ಟು 24 ಸ್ಪರ್ದಿಗಳಿದ್ದು ಆ ಸ್ಪರ್ಧಿಗಳು ಯಾರು ಎಂದು ನೋಡೋಣ ಬನ್ನಿ
ಕಲರ್ಸ್ ಕನ್ನಡ ವಾಹಿನಿಯ Boys VS Girls ರಿಯಾಲಿಟಿ ಶೋ ಸ್ಪರ್ಧಿಗಳು, Boys VS Girls Contestant, Colors kannada New Reality Show, BBK11, Kiccha Sudeep
Boys VS Girls ರಿಯಾಲಿಟಿ ಶೋ ನ 24 ಸ್ಪರ್ಧಿಗಳು ಇವರೇ ನೋಡಿ :
ಬಾಯ್ಸ್ ಟೀಮ್ ನಲ್ಲಿ ಒಟ್ಟು 12 ಸ್ಪರ್ಧಿಗಳು ಹಾಗೂ ಗರ್ಲ್ಸ್ ಟೀಮ್ ನಲ್ಲಿ ಒಟ್ಟು 12 ಸ್ಪರ್ಧಿಗಳಿದ್ದು ಆ ಸ್ಪರ್ಧಿಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ
ಬಾಯ್ಸ್ ಟೀಮ್ ನಲ್ಲಿ:
ವಿನಯ್ ಗೌಡ: ಬಿಗ್ ಬಾಸ್ ಸೀಸನ್ 10ರ ಸ್ಪರ್ದಿಯಾಗಿದ್ದ ವಿನಯ್ ಗೌಡ ಅವರು ಹರ ಹರ ಮಹಾದೇವ ಸೀರಿಯಲ್ ಮೂಲಕ ಖ್ಯಾತಿ ಗಳಿಸಿದವರು ಈ ಬಳಿಕ ಕೆಲವು ಸೀರಿಯಲ್ ಹಾಗೂ ಸಿನಿಮಾದಲ್ಲಿ ಸಹ ಅಭಿನಯಿಸಿರುತ್ತಾರೆ, ಇನ್ನು ಬಾಯ್ಸ್ vs ಗರ್ಲ್ಸ್ ಎನ್ನುವ ಈ ರಿಯಾಲಿಟಿ ಶೋ ನಲ್ಲಿ ವಿನಯ್ ಅವರು ಬಾಯ್ಸ್ ಟೀಮ್ ನ ಟೀಮ್ ಲೀಡರ್ ಆಗಿರುತ್ತಾರೆ.
ಮಂಜು ಪಾವಗಡ: ಮಜಾ ಭಾರತ ರಿಯಾಲಿಟಿ ಶೋ ಮೂಲಕ ಗುರುತಿಸಿಕೊಂಡ ಮಂಜು ಅವರು ನಂತರ ಬಿಗ್ ಬಾಸ್ ಸೀಸನ್ 8 ರ ವಿನ್ನರ್ ಆಗುವ ಮೂಲಕ ಇನ್ನಷ್ಟು ಗುರುತಿಸಿಕೊಂಡಿದ್ದಾರೆ.
ವಿವೇಕ್ ಸಿಂಹ: ಜನುಮದ ಜೋಡಿ, ಮತ್ತೆ ವಸಂತ, ವಿದಾತ್ರು, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಇನ್ನು ಮುಂತಾದ ಸಿನಿಮಾ, ಸೀರಿಯಲ್ ಹಾಗೂ ರಿಯಾಲಿಟಿ ಶೋ ಗಳ ಮೂಲಕ ಗುರುತಿಸಿಕೊಂಡಿರುವ ವಿವೇಕ್ ಸಿಂಹ ಅವರು ಸಹ ಈ ಶೋ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಹನುಮಂತ: ಬಿಗ್ ಬಾಸ್ ಸೀಸನ್ 11 ರ ವಿನ್ನರ್ ಆಗಿರುವ ಹನುಮಂತ ಅವರು ಸರಿಗಮಪ ಮೂಲಕ ಖ್ಯಾತಿಗಳಿಸಿರುತ್ತಾರೆ.
ಸೂರಜ್: ಕಾಮಿಡಿ ಕಿಲಾಡಿಗಳು ಶೋ ಮೂಲಕ ಜನರನ್ನ ನಗಿಸುವ ಮೂಲಕ ಗುರುತಿಸಿಕೊಂಡಿರುವ ಸೂರಜ್ ಅವರು ಸದ್ಯ ಬ್ರಹ್ಮಗಂಟು ಸೇರಿಯಲ್ ನಲ್ಲಿ ಸಹ ನಟಿಸಿರುತ್ತಾರೆ ಹಾಗೆ ಕೆಲವು ಶಾರ್ಟ್ ಮೂವೀ ಗಳಲಿ ಸಹ ನಟಿಸಿರುತ್ತಾರೆ.
ರಕ್ಷಿತ್: ಪದ್ಮಾವತಿ, ಕನ್ನಡತಿ ಸೀರಿಯಲ್ ಗಳ ಮೂಲಕ ಗುರುತಿಸಿಕೊಂಡಿರುವ ರಕ್ಷಿತ್ ಅವರು ಡ್ಯಾನ್ಸ್ ಡ್ಯಾನ್ಸ್ ರಿಯಾಲಿಟಿ ಶೋ ಹಾಗೂ ಅಮ್ಮು ಎನ್ನುವ ಸಿನಿಮಾದಲ್ಲಿ ಸಹ ನಟಿಸಿರುತ್ತಾರೆ.
ರಜತ್: ರಾಜಾ ರಾಣಿ 2 , ಸೂಪರ್ ಜೋಡಿ, ಪ್ಯಾಟೆ ಹುಡ್ಗೀರ್ ಹಳ್ಳೀ ಲೈಫು ಸೀಸನ್ 3 ಇನ್ನು ಮುಂತಾದ ರಿಯಾಲಿಟಿ ಶೋ ಗಳ ಮೂಲಕ ಹಾಗೂ ಕೆಲವು ಕಾಂಟ್ರವರ್ಸಿ ಸ್ಟಾಟ್ಮೆನ್ ಗಳನ್ನ ನೀಡುವ ಮೂಲಕ ಸುದ್ದಿಯಲ್ಲಿದ್ದ ರಜತ್ ಅವರು ಸದ್ಯ ಬಿಗ್ ಬಾಸ್ ಸೀಸನ್ 11 ರ ಸ್ಪರ್ಧಿಯಾಗಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು ರಜತ್ ಅವರು ನಂತರ ಬಿಗ್ ಬಾಸ್ ಸೀಸನ್ 11 ರ 3rd ರನ್ನರ್ ಅಪ್ ಸಹ ಆಗಿರುತ್ತಾರೆ.
ವಿಶ್ವಾಸ್: ಕಾಮಿಡಿ ಕಿಲಾಡಿಗಳು ಶೋ ಮೂಲಕ ಗುರುತಿಸಿಕೊಂಡಿರುವ ವಿಶ್ವಾಸ್ ಅವರು ಈಗ ಬಾಯ್ಸ್ vs ಗರ್ಲ್ಸ್ ಶೋ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ
ಪ್ರಶಾಂತ್: Talented ಕಲಾವಿದ ಎನ್ನುವ ಯೂಟ್ಯೂಬ್ ಚಾನೆಲ್ ಮೂಲಕ ಗುರುತಿಸಿಕೊಂಡಿದ್ದ ಪ್ರಶಾಂತ್ ಅವರಿಗೆ ನಂತರ ಅವಕಾಶ ಸಿಕ್ಕಿದ್ದು ಗಿಚ್ಚಿ ಗಿಲಿ ಗಿಲಿ ಎನ್ನುವ ಶೋ ನಲ್ಲಿ ..ಗಿಚ್ಚಿ ಗಿಲಿ ಗಿಲಿ ಶೋ ನ ಮೂಲಕ ಗುರುತಿಸಿಕೊಂಡಿರುವ ಇವರು ಈಗ ಬಾಯ್ಸ್ vs ಗರ್ಲ್ಸ್ ಶೋ ನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಸ್ನೇಹಿತ್: ನಮ್ಮನೆ ಯುವರಾಣಿ ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಸ್ನೇಹಿತ್ ಅವರಿಗೆ ನಂತರ ಅವಕಾಶ ಸಿಕ್ಕಿದ್ದು ಬಿಗ್ ಬಾಸ್ ಸೀಸನ್ 10 ರಲ್ಲಿ.ಬಿಗ್ ಬಾಸ್ ಮೂಲಕ ಇನ್ನಷ್ಟು ಗುರುತಿಸಿಕೊಂಡ ಇವರು ಈಗ ಬಾಯ್ಸ್ vs ಗರ್ಲ್ಸ್ ಶೋ ನ ಸ್ಪರ್ಧಿಯಾಗಿ ಇರಲಿದ್ದಾರೆ.
ಲಾಯರ್ ಜಗದೀಶ್: ವೃತ್ತಿ ಯಲ್ಲಿ ಲಾಯರ್ ಆಗಿರುವ ಜಗದೀಶ್ ಅವರು ಕಾಂಟ್ರವರ್ಸಿ ಗಳ ಮೂಲಕವೇ ಗುರುತಿಸಿಕೊಂಡಿದ್ದು, ಬಿಗ್ ಬಾಸ್ ಸೀಸನ್ 11 ಕ್ಕೆ ಎಂಟ್ರಿ ಕೊಡುವ ಮೂಲಕ ಇನ್ನಷ್ಟು ಹೆಚ್ಚು ಖ್ಯಾತಿ ಗಳಿಸಿದ್ದು ಈಗ ಬಾಯ್ಸ್ vs ಗರ್ಲ್ಸ್ ಶೋ ನ ಮೂಲಕ ಇನ್ನಷ್ಟು ದುಲೆಬ್ಬಿಸಲಿದ್ದಾರೆ.
ಧನರಾಜ್: ಧನರಾಜ್ ಯೂಟ್ಯೂಬ್ ಚಾನೆಲ್ ಮೂಲಕ ಗುರುತಿಸಿಕೊಂಡಿದ್ದ ಧನರಾಜ್ ಅವರು ನಂತರ ಗಿಚ್ಚಿ ಗಿಲಿ ಗಿಲಿ ಶೋ ನಲ್ಲಿ ಸಹ ಕಾಣಿಸಿಕೊಂಡಿದ್ದು , ಈ ಬಳಿಕ ಬಿಗ್ ಬಾಸ್ ಸೀಸನ್ 11 ರಲ್ಲಿ ಧನರಾಜ್ ಹಾಗೂ ಹನುಮಂತ ಅವರ ಜೋಡಿ ನೋಡಿ ಜನ ಮೆಚ್ಚಿದ್ದು ಈಗ ಇವರು ಬಾಯ್ಸ್ vs ಗರ್ಲ್ಸ್ ಶೋ ನಲ್ಲಿ ಸಹ ಕಾಣಿಸಿಕೊಳ್ಳಲಿದ್ದಾರೆ.
Recent Post:
Mokshita Pai Marriage , ಮೊಕ್ಷಿತಾ ಪೈ ಮದುವೆ ಆಗೋ ಹುಡುಗ, Mokshita Pai, BBK11
Railway Recruitment 2025, ರೈಲ್ವೆ ಇಲಾಖೆಯ ಹುದ್ದೆಗೆ ಅರ್ಜಿ ಆಹ್ವಾನ, 620+ Post out for PMBI Recruitment
ಇನ್ನು ಗರ್ಲ್ಸ್ ಟೀಮ್ ನಲ್ಲಿ ಯಾರೆಲ್ಲಾ ಇದ್ದಾರೆ ಎಂದು ನೋಡೋದದ್ರೆ
ಶುಭಾ ಪೂಂಜಾ: ಜಾಕ್ಪಾಟ್ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಶುಭ ಅವರು ನಂತರ ಚಂಡ, ಮೊಗ್ಗಿನ ಮನಸ್ಸು, ಅಂಜದಿರು, ತಾಕತ್ ಇನ್ನು ಮುಂತಾದ ಕನ್ನಡ ಹಾಗೂ ತಮಿಳು ಸಿನೆಮಾ ದಲ್ಲಿ ಅಭಿನಯಿಸುವ ಮೂಲಕ ಗುರುತಿಸಿಕೊಂಡಿರುವ ಇವರು ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಸಹ ಕೊಟ್ಟಿದ್ದರು.
ಕೋಳಿ ರಮ್ಯಾ: ಪ್ಯಾಟೆ ಹುಡ್ಗೀರ್ ಹಳ್ಳೀ ಲೈಫು ರಿಯಾಲಿಟಿ ಶೋ ಮೂಲಕ ಗುರುತಿಸಿಕೊಂಡಿದ್ದ ರಮ್ಯಾ ಅವರು ಆ ಶೋ ನಲ್ಲಿ ಅತಿ ಹೆಚ್ಚು ಕೋಳಿ ಗಳನ್ನ ಹಿಡಿಯುವ ಮೂಲಕ ಕೋಳಿ ರಮ್ಯಾ ಎಂದೇ ಫೇಮಸ್ ಆಗುತ್ತಾರೆ ಈ ಬಳಿಕ ತೆಲುಗು ಸಿರಿಯಲ್ ಅತ್ತ ಮುಖ ಮಾಡಿದ್ದ ಇವರು ಈಗ ಬಾಯ್ಸ್ vs ಗರ್ಲ್ಸ್ ಎನ್ನುವ ಟಿವಿ ಶೋ ನ ಮೂಲಕ ಮತ್ತೆ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಐಶ್ವರ್ಯ ಸಿಂಧೋಗಿ: ಪುಟ್ಟಗೌರಿ ಮದುವೆ , ಶಾಂಭವಿ, ನಮ್ಮ ಲಚ್ಚಿ, ನಾಗಿಣಿ 2 ಇನ್ನು ಮುಂತಾದ ಕನ್ನಡ ಹಾಗೂ ತೆಲುಗು ಸೀರಿಯಲ್ ಗಳಲ್ಲಿ ನಟಿಸುವ ಮೂಲಕ ಗುರುತಿಸಿಕೊಂಡಿರುವ ಐಶ್ವರ್ಯ ಅವರು ಮೊದಲು ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದು ಸಿನಿಮಾದ ಮೂಲಕ ಆದರೆ ಸೀರಿಯಲ್ ಗಳಲ್ಲಿ ಸಿಕ್ಕಷ್ಟು ಖ್ಯಾತಿ ಅವರಿಗೆ ಸಿನಿಮಾದಲ್ಲಿ ಸಿಕ್ಕಿಲ್ಲ
ಸ್ಪಂದನ: ಗೃಹಪ್ರವೇಶ ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಸ್ಪಂದನ ನಂತರ ಕರಿಮಣಿ ಎನ್ನುವ ಸೀರಿಯಲ್ ನಲ್ಲಿ ಸಹ ನಟಿಸಿರುತ್ತಾರೆ.
ಚೈತ್ರ ಕುಂದಾಪುರ: ಹಿಂದೂ ಪರ ಹೋರಾಟಗಾರ್ತಿ ಆಗಿರುವ ಚೈತ್ರ ಅವರು ರಾಜಕೀಯದಲ್ಲಿ ತೊಡಗಿದ್ದು ಇವರು ಕೆಲವು ಆರೋಪದ ಮೇಲೆ ಜೈಲಿಗೆ ಸಹ ಹೋಗಿ ಬಂದಿರುತ್ತಾರೆ.ಈ ಬಳಿಕ ಬಿಗ್ ಬಾಸ್ ಸೀಸನ್ 11 ರ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಮೂಲಕ ಇನ್ನಷ್ಟು ಹೆಚ್ಚು ಖ್ಯಾತಿಗಳಿಸಿರುತ್ತಾರೆ.
ಸ್ಪೂರ್ತಿ: ಪ್ಯಾಟೆ ಹುಡ್ಗೀರ್ ಹಳ್ಳೀ ಲೈಫು ರಿಯಾಲಿಟಿ ಶೋ ಮೂಲಕ ಗುರುತಿಕೊಂಡಿರುವ ಸ್ಪೂರ್ತಿ ಅವರು ನಂತರ ಬಿಗ್ ಬಾಸ್ OTT ಸೀಸನ್ 01 ರ ಸ್ಪರ್ಧಿ ಆಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು
ಐಶ್ವರ್ಯಾ ಸಾಲಿಮಠ: ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿರುವ ಐಶ್ವರ್ಯ ಅವರು ನಂತರ ಸೇವಂತಿ, ರಾಮಾಚಾರಿ ಸೀರಿಯಲ್ ನಲ್ಲಿ ಸಹ ನಟಿಸಿರುತ್ತಾರೆ.
ಪ್ರಿಯಾ ಸೌದಿ: ಯೂಟ್ಯೂಬ್ ರ್ ಆಗಿರುವ ಪ್ರಿಯಾ ಸೌದಿ ಅವರು opposite house ಕುಮುದಾ, ನಾಟಿ ಅತ್ತೆ ಐಟಿ ಸೊಸೆ ಇನ್ನು ಮುಂತಾದ ಶಾರ್ಟ್ ಮೂವೀ ಗಳಲ್ಲಿ ಇವರು ನಟಿಸಿರುತ್ತಾರೆ.
ಚಂದನ ಗೌಡ: ಅಮೃತ ಧಾರೆ ಸೀರಿಯಲ್ ಮೂಲಕ ಗುರುತಿಸಿಕೊಂಡಿರುವ ಚಂದನ ಗೌಡ ಅವರು ಸಹ ಬಾಯ್ಸ್ vs ಗರ್ಲ್ಸ್ ಶೋ ನಲ್ಲಿ ಇರಲಿದ್ದಾರೆ.
ನಿವೇದಿತಾ ಗೌಡ: ಬಿಗ್ ಬಾಸ್ ಸೀಸನ್ 05 ರ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ನಿವೇದಿತಾ ಗೌಡ ಅವರು ಬಿಗ್ ಬಾಸ್ ಮೂಲಕ ಖ್ಯಾತಿ ಗಳಿಸಿದ್ದು, ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಾರವಾಗುತ್ತಿದ್ದ ಗಿಚ್ಚಿ ಗಿಲಿ ಗಿಲಿ ಶೋ ನಲ್ಲಿ ಸಹ ಕಾಣಿಸಿಕೊಂಡಿದ್ದರು.
ಶೋಭಾ ಶೆಟ್ಟಿ: ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದ ಶೋಭಾ ಶೆಟ್ಟಿ ಅವರು ನಂತರ ತೆಲುಗು ಸೀರಿಯಲ್ ಅತ್ತ ಮುಖ ಮಾಡಿದ್ದು.ಸದ್ಯ ಬಿಗ್ ಬಾಸ್ ಸೀಸನ್ 11 ರಲ್ಲಿ ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಗೆ ಸಹ ಎಂಟ್ರಿ ಕೊಡುವ ಮೂಲಕ ಕನ್ನಡಕ್ಕೆ ಮರಳಿ ಬಂದಿರುತ್ತಾರೆ.
ಭವ್ಯ ಗೌಡ: ಗೀತಾ ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಭವ್ಯ ಗೌಡ ಅವರು, ಬಿಗ್ ಬಾಸ್ ಸೀಸನ್ 11 ರ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಮೂಲಕ ಟಾಪ್ 6 ಸ್ಪರ್ಧಿ ಗಳಲ್ಲಿ ಒಬ್ಬರಾಗಿದ್ದ ಇವರು ಈಗ ಬಾಯ್ಸ್ vs ಗರ್ಲ್ಸ್ ಶೋ ನಲ್ಲಿ ಸಹ ಕಾಣಿಸಿಕೊಳ್ಳಲಿದ್ದಾರೆ.
ಆದ್ದರಿಂದ ಇವೆಲ್ಲ ಬಾಯ್ಸ್ vs ಗರ್ಲ್ಸ್ ಶೋ ಗೆ ಎಂಟ್ರಿ ಕೊಟ್ಟಿರುವ ಸ್ಪರ್ಧಿಗಳು. ಇವರುಗಳಲ್ಲಿ ನಿಮ್ಮ ಫೇವರೆಟ್ ಸ್ಪರ್ಧಿ ಯಾರು ಅಂತ ಕಮೆಂಟ್ ಮಾಡಿ.
ಕಲರ್ಸ್ ಕನ್ನಡ ವಾಹಿನಿಯ Boys VS Girls ರಿಯಾಲಿಟಿ ಶೋ ಸ್ಪರ್ಧಿಗಳು, Boys VS Girls Contestant, Colors kannada New Reality Show, BBK11, Kiccha Sudeep