ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 11 ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಇದೀಗ ಬಿಗ್ ಬಾಸ್ ನ ಬಗ್ಗೆ ಕೆಲವು ಅಪ್ಡೇಟ್ ಗಳು ಬಂದಿದೆ.
ಯಾವಾಗ ಬಿಗ್ ಬಾಸ್ ಆರಂಭವಾಗಲಿದೆ? ಬಿಗ್ ಬಾಸ್ ಪ್ರೋಮೋ ಯಾವಾಗ ಬರುತ್ತೆ? ಈ ಬಾರಿಯ ಬಿಗ್ ಬಾಸ್ ನಿರೂಪಣೆ ಯಾರು ಮಾಡ್ತಾರೆ? ಕಿಚ್ಚ ಸುದೀಪ್ ರವರೆ ಮಾಡ್ತಾರೆ ಅನ್ನೋದಿಕ್ಕೆ ದಾಖಲೆಗಳು ಏನೇನು? ಅಂತಾ ಕಂಪ್ಲೀಟ್ ಮಾಹಿತಿ ಇದೀಗ ನೋಡೋಣ.
ಬಿಗ್ ಬಾಸ್ ಯಾವಾಗ ಆರಂಭ ಆಗುತ್ತೆ?
ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ ಕೂಡ ಒಂದು. ಕನ್ನಡದಲ್ಲಿ ಅತೀ ಹೆಚ್ಚು TRP ಯನ್ನ ತಂದು ಕೊಡುವ ಶೋ ಇದಾಗಿದೆ. ಇನ್ನು ಹಿಂದಿನ ಸೀಸನ್ ನಲ್ಲಿ ಅಂದರೇ ಬಿಗ್ ಬಾಸ್ ಸೀಸನ್ 10ರಲ್ಲಿ ಬಿಗ್ ಬಾಸ್ ತಂಡ ಅತೀ ಹೆಚ್ಚು TRP ಯನ್ನ ತಂದು ಕೊಟ್ಟು ಸಾಧನೆಯನ್ನ ಮಾಡಿತ್ತು. ಬಿಗ್ ಬಾಸ್ ತಂಡ 10 ಟಿವಿ ಸೀಜನ್ ಗಳು, 1 OTT ಸೀಸನ್ ಹಾಗೂ 1 ಮಿನಿ ಸೀಜನ್ ಅನ್ನು ಮುಗಿಸಿರುವ ಬಿಗ್ ಬಾಸ್ ತಂಡ 11ನೇ ಸೀಸನ್ ಗೆ ಬಾರಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇನ್ನು ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 11 ಯಾವಾಗ ಆರಂಭ ಆಗುತ್ತೆ ಅನ್ನೊದನ್ನ ನೋಡಿದ್ರೆ ಸೆಪ್ಟೆಂಬರ್ 29ರಿಂದ ಬಿಗ್ ಬಾಸ್ ಶೋ ನಡೆಯಲಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ.
ಪ್ರೋಮೋ ಯಾವಾಗ ಬರುತ್ತೆ?
ಒಂದು ಕಡೆ ಬಿಗ್ ಬಾಸ್ ತಂಡ ಮನೆ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿದೆ, ಇನ್ನೊಂದು ಕಡೆ ಬಿಗ್ ಬಾಸ್ ತಂಡ ಪ್ರೋಮೋ ಶೂಟ್ ಗೆ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿದೆ .ಈ ಸಲದ Bigg Boss ಕಾರ್ಯಕ್ರಮ ನಡೆಸಲು ಭರ್ಜರಿ ತಯಾರಿ ನಡೆಯುತ್ತಿದ್ದು, 300 ಕ್ಕೂ ಹೆಚ್ಚು ತಂತ್ರಜ್ಞರೊಂದಿಗೆ ದೊಡ್ಮನೆ ತಯಾರಿಯಾಗುತ್ತಿದೆ. ಈಗ ಬಂದಿರುವ ಮಾಹಿತಿಗಳ ಪ್ರಕಾರ ಸೆಪ್ಟೆಂಬರ್ 6ರಂದು ಪ್ರೋಮೋ ಶೂಟಿಂಗ್ ನಡೆಯುತ್ತಿದೆ. ಇನ್ನು ಪ್ರೋಮೋ ಯಾವಾಗ ಬಿಡುಗಡೆ ಆಗಲಿದೆ ಅನ್ನೊದನ್ನ ನೋಡುವುದಾದರೆ ಸೆಪ್ಟೆಂಬರ್ 14ರಂದು ಪ್ರೋಮೋ ಬರಲಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ.
ಈ ಸಲದ ನಿರೂಪಕರು ಯಾರು?
ಈ ಸಲದ ಬಿಗ್ ಬಾಸ್ ನಿರೂಪಕರು ಬದಲಾಗುತ್ತಾರೆ ಎನ್ನುವ ಸುದ್ಧಿ ಈ ಹಿಂದೆ ಎಲ್ಲಾ ಕಡೆ ಕೇಳಿ ಬರುತ್ತಾ ಇತ್ತು. ಯಾಕಂದ್ರೆ ಬಿಗ್ ಬಾಸ್ ತಂಡ ಕಿಚ್ಚ ಸುದೀಪ್ ರವರ ಜೊತೆ 10 ವರ್ಷಗಳ ಒಪ್ಪಂದ ಮಾಡಿಕೊಂಡಿತ್ತು. ಇನ್ನು ಹಿಂದಿನ ಸೀಸನ್ ನಲ್ಲಿ ಅಂದ್ರೆ ಬಿಗ್ ಬಾಸ್ 10ನೇ ಸೀಸನ್ ಗೆ ಆ ಒಪ್ಪಂದ ಮುಗಿದಿತ್ತು. ಆದ್ದರಿಂದ ಈ ಸಲದ ನಿರೂಪಣೆ ಬದಲಾಗುತ್ತಿದ್ದಾರೆ, ಕಿಚ್ಚ ಸುದೀಪ್ ಬಿಗ್ ಬಾಸ್ ನಿರೂಪಣೆ ಮಾಡೋದಿಲ್ಲ ಎನ್ನುವ ಸುದ್ಧಿ ಎಲ್ಲೆಡೆ ಕೇಳಿ ಬರುತ್ತಿತ್ತು.
ಬಿಗ್ ಬಾಸ್ ಕಾರ್ಯಕ್ರಮದ 10 ಸೀಸನ್‌ಗಳನ್ನು ನಿರೂಪಣೆ ಮಾಡಿ ಯಶಸ್ವಿಯಾಗಿರುವ ಸುದೀಪ್, 11ನೇ ಆವೃತ್ತಿಯಲ್ಲಿ ಕಾಣಿಸಿಕೊಳ್ಳಲ್ಲ ಎನ್ನುವ ಮಾತುಗಳು ಕೇಳಿ ಬಂದಿದೆ. ಆದರೆ ಕಲರ್ಸ್ ಕನ್ನಡ ವಾಹಿನಿಯು ಬಿಗ್ ಬಾಸ್ Logo ವನ್ನ Released ಮಾಡಿದೆ. ತಮ್ಮ official page ನಲ್ಲಿ #kicchasudeep ಮಾಡಿರುವ ಕಾರಣ ಈ ಬಾರಿ ಕೂಡ ಕಿಚ್ಚ ಸುದೀಪ್ ರವರೆ ಬಿಗ್ ಬಾಸ್ ನ ನಿರೂಪಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.
- ಬಿಗ್ ಬಾಸ್ ಕನ್ನಡ ಸೀಸನ್ 11 ಸೆಪ್ಟೆಂಬರ್ 29 ರಿಂದ ಆರಂಭವಾಗುತ್ತಿದೆ.
- ಬಿಗ್ ಬಾಸ್ ಕನ್ನಡ ಸೀಸನ್ 11ರ ಪ್ರೋಮೋ ಸೆಪ್ಟೆಂಬರ್ 14ರಂದು ರಿಲೀಸ್ ಆಗಲಿದೆ.
- ಬಿಗ್ ಬಾಸ್ ಕನ್ನಡ ಸೀಸನ್ 11ರ ನಿರೂಪಣೆ ಕಿಚ್ಚ ಸುದೀಪ್ ರವರೆ ಮಾಡಲಿದ್ದಾರೆ.
ಕಿಚ್ಚ ಸುದೀಪ್ ರವರನ್ನ ಬಿಟ್ಟು ಇನ್ನೊಬ್ಬರು ಬಿಗ್ ಬಾಸ್ ನ ನಿರೂಪಣೆ ಮಾಡಲು ಸಾದ್ಯವಿಲ್ಲ. ಅವರನ್ನು ಯಾರ್ ಹತ್ರ ಕೂಡ beat ಮಾಡಲು ಸಾದ್ಯವಿಲ್ಲ. ಇನ್ನು ಬಿಗ್ ಬಾಸ್ ತಂಡ ಕೂಡ ಕಿಚ್ಚ ಸುದೀಪ್ ರವರನ್ನ ಕೈ ಬಿಡಲು ಸಾಧ್ಯವಿಲ್ಲ.
ಇನ್ನು ಇದರ ಬಗ್ಗೆ ನಿಮ್ಮ ಅಭಿಪ್ರಾಯ ಹಾಗು ಅನಿಸಿಕೆಯನ್ನು ಕಾಮೆಂಟ್ ಮಾಡಿ ತಿಳಿಸಿ.
ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.
ಧನ್ಯವಾದಗಳು..!