ಬಿಗ್ ಬಾಸ್ ಸೀಸನ್ 11 ಆರಂಭ, Bigg Boss 11 Contestants List, ಯಾವೆಲ್ಲ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ ಗೊತ್ತೆ.? Bigg Boss 11 Update, BBK11
ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ season 11 ಆರಂಭವಾಗುತ್ತಿದ್ದು, ಈ ಬಾರಿಯ ಬಿಗ್ ಬಾಸ್ ಸ್ಪರ್ಧಿಗಳ ಹೆಸರು ರಿವೀಲ್ ಆಗಿದೆ, 10 ವರ್ಷದಿಂದ ಒಂದು ಲೆಕ್ಕ, ಈಗಿಂದ ಬೇರೇನೆ ಲೆಕ್ಕ ಎಂಬಂತೆ ಈ ಬಾರಿ ಬಿಗ್ ಬಾಸ್ ತುಂಬಾ ಸ್ಪೆಷಲ್ ಆಗಿದ್ದು, ಹಲವು ಕ್ಷೇತ್ರಗಳಿಂದ Contestants ಗಳು ಈ ಬಾರಿಯ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಹೌದು ಈ ಬಾರಿ ಬಿಗ್ ಬಾಸ್ ಮನೆಗೆ ಯಾವೆಲ್ಲ ಸ್ಪರ್ಧಿಗಳು ಹೋಗುತ್ತಿದ್ದಾರೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
Bigg Boss Kannada, Bigg Boss 11 Contestant List, Bigg Boss 11 Update, BBK11, Kiccha Sudeep, ಬಿಗ್ ಬಾಸ್ ಸೀಸನ್ 11 ಆರಂಭ, ಯಾವೆಲ್ಲ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ ಗೊತ್ತೆ?
ಬಿಗ್ ಬಾಸ್ ಆರಂಭ :
ಬಿಗ್ ಬಾಸ್ ಸೀಸನ್ 11 ಇದೆ ಸೆಪ್ಟೆಂಬರ್ 29 ರಿಂದ ಆರಂಭವಾಗಿದ್ದು, ಈ ಬಾರಿ ಬಿಗ್ ಬಾಸ್ ಮನೆಗೆ ಒಟ್ಟು 17 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಬಾಸ್ ಸೀಸನ್ 11 ಪ್ರತಿದಿನ ಅಂದರೆ ಸೋಮವಾರದಿಂದ ಶುಕ್ರವಾರ ರಾತ್ರಿ 9:30 ಗಂಟೆಗೆ ಆರಂಭವಾಗಿ 11 ಗಂಟೆಯವರೆಗೆ ಪ್ರಸಾರವಾಗಲಿದೆ. ಇನ್ನು ಶನಿವಾರದಂದು ವಾರದ ಕಥೆ ಕಿಚ್ಚನ ಜೊತೆ 9 ಗಂಟೆಗೆ ಪ್ರಸಾರ ವಾಗಲಿದ್ದು, ಭಾನುವಾರದಂದು Sunday with Sudeep ರಾತ್ರಿ 9 ಯಿಂದ 11 ಗಂಟೆಯ ವರೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿಗಳು (Bigg Boss Season 11 Contestants):
ಬಿಗ್ ಬಾಸ್ 11ಕ್ಕೇ ಒಟ್ಟು 17 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದು ಆ ಸ್ಪರ್ಧಿಗಳು ಯಾರ್ಯಾರು ಅನ್ನೊದನ್ನ ಈ ಕೆಳಗೆ ನೋಡೋಣ.
- Gowthami jhadhav
- Jagadeesh
- Chaitra kundapur
- Gold Suresh
- Ranjith Kumar
- Mokshita Pai
- Ugram Manju
- Aishwarya
- Thukali Manasa
- Hamsa
- Trivikram
- Shishir
- Dharma keerthiraj
- Anusha Rai
- Dhanraj acharya
- Yamuna shrinidhi
- Bhavya Gowda
Bigg Boss Kannada: ಬಿಗ್ ಬಾಸ್ ಆರಂಭಕ್ಕೆ ಮುಹೂರ್ತ ಫಿಕ್ಸ್ , ಯಾವೆಲ್ಲ ಸ್ಪರ್ಧಿಗಳು ಈ ಬಾರಿಯ ಬಿಗ್ ಬಾಸ್ ಸೀಸನ್ 11 ರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಗೊತ್ತೇ.? Biggboss season 11, BBK1
ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್, 30,000 ದಿಂದ 50,000 ವರೆಗೆ ಸಿಗಲಿದೆ, Good news For all Karnataka Womens, ಅರ್ಜಿ ಸಲ್ಲಿಸಿದ್ರೆ ಮಾತ್ರ ಸಿಗಲಿದೆ, Government New Scheme.
- ಧನರಾಜ್ ಆಚಾರ್: ಯೂಟ್ಯೂಬರ್ ಆಗಿರುವ ಧನರಾಜ್ ಆಚಾರ್ ಅವರು ಸದ್ಯ ಗಿಚ್ಚಿ ಗಿಲಿಗಿಲಿ ಶೋ ನಲ್ಲಿ ಸಹ ಕಾಣಿಸಿಕೊಂಡಿದ್ದು ಈಗ ಇವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
- ಭವ್ಯ ಗೌಡ: ಗೀತಾ ಧಾರಾವಾಹಿಯಲ್ಲಿ ಅಭಿನಯಿಸುವ ಮೂಲಕ ಖ್ಯಾತಿಗಳಿಸಿರುವ ಭವ್ಯ ಗೌಡ ಅವರು ಸದ್ಯ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
- ಲಾಯರ್ ಜಗದೀಶ್: ಬೆಂಗಳೂರಿನ ಅತ್ಯುತ್ತಮ ವಿಚ್ಛೇದನ ವಕೀಲರಾಗಿರುವ ಇವರು ಈಗ ಬಿಗ್ ಬಾಸ್ ನ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
- ಚೈತ್ರ ಕುಂದಾಪುರ: ಹಿಂದೂ ಪರ ಹೋರಾಟಗಾರ್ತಿ ಹಾಗೂ ಮಾಜಿ ನಿರೂಪಕಿ ಸಹ ಆಗಿರುವ ಚೈತ್ರ ಈಗ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
- ಗೋಲ್ಡ್ ಸುರೇಶ್: ಸದಾ 2 ಕೋಟಿಗೂ ಅಧಿಕ ಬೆಲೆ ಬಾಳುವ ಚಿನ್ನದ ಆಭರಣ ಧರಿಸುವ ಗೋಲ್ಡ್ ಸುರೇಶ್ ಅವರು ಒಬ್ಬ ಸೋಶಿಯಲ್ ವರ್ಕರ್ ಸಹ ಆಗಿದ್ದು, ಈಗ ಇವರು ಬಿಗ್ ಬಾಸ್ ನ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
- ಗೌತಮಿ ಜಾಧವ್: ಸತ್ಯ ಧಾರಾವಾಹಿ ಮೂಲಕ ಖ್ಯಾತಿಗಳಿಸಿರುವ ಗೌತಮಿ ಅವರು 2018 ರಲ್ಲಿ ಕಿನಾರೆ ಎನ್ನುವ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
- ತೂಕಾಲಿ ಮಾನಸ: ತುಕಾಲಿ ಸಂತೋಷ್ ಅವರ ಪತ್ನಿ ಆಗಿರುವ ಮಾನಸ ಅವರು ಸದ್ಯ ಗಿಚ್ಚಿ ಗಿಲಿಗಿಲಿ ಶೋನಲ್ಲಿ ಭಾಗವಹಿಸಿ ಅದರಲ್ಲಿ ರನ್ನರ್ ಅಫ್ ಸಹ ಆಗಿದ್ದು ಈಗ ಇವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
- ಯಮುನಾ ಶ್ರೀನಿಧಿ: ಡ್ಯಾನ್ಸರ್ ಹಾಗೂ ನಟಿ ಆಗಿರುವ ಯಮುನಾ ಅವರು ಸಹ ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟಿದ್ದು, ಇವರು ಬಿಗ್ ಬಾಸ್ ನ ಮನೆಗೆ ಕಾಲಿಟ್ಟಿದ್ದಾರೆ.
- ತ್ರಿವಿಕ್ರಮ್: ಪದ್ಮಾವತಿ ಧಾರಾವಾಹಿ ಮೂಲಕ ಖ್ಯಾತರಾಗಿರುವ ತ್ರಿವಿಕ್ರಮ್ ಅವರು ನಂತರ ತೆಲುಗು ಸೀರಿಯಲ್ ಗಳಲ್ಲಿ ಸಹ ಅಭಿನಯಿಸಿದ್ದು ಈಗ ಇವರು ಬಿಗ್ ಬಾಸ್ ನ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
- ರಂಜಿತ್ ಕುಮಾರ್: ಶನಿ ಧಾರಾವಾಹಿ ಮೂಲಕ ಗುರುತಿಸಿ ಕೊಂಡಿರುವ ಇವರು ನಂತರ ಕೆಲವು ಸಿನಿಮಾಗಳಲ್ಲಿ ಸಹ ಅಭಿನಯಿಸಿದ್ದು ಈಗ ಇವರು ಬಿಗ್ ಬಾಸ್ ನ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
- ಮೊಕ್ಷಿತಾ ಪೈ: ಪಾರು ಧಾರಾವಾಹಿ ಮೂಲಕ ಖ್ಯಾತಿಗಳಿಸಿರುವ ಮೊಕ್ಷಿತ ಪೈ ಅವರು ನಂತರ ತಮಿಳಿನ ಮೀನಾಕ್ಷಿ ಪೊನ್ನುಂಗ ಎನ್ನುವ ಧಾರಾವಾಹಿಯಲ್ಲಿ ಸಹ ಅಭಿನಯಿಸಿದ್ದು ಈಗ ಇವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
- ಉಗ್ರಂ ಮಂಜು: ಕನ್ನಡದ ಖ್ಯಾತ ಖಳನಟ ಹಾಗೂ ಪೋಷಕ ನಟನಾಗಿರುವ ಉಗ್ರಂ ಮಂಜು ಅವರು ಸಹ ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟಿದ್ದಾರೆ.
- ಹಂಸ: ಕನ್ನಡದಲ್ಲಿ ಹಲವಾರು ಸಿನಿಮಾ ಹಾಗೂ ಸೀರಿಯಲ್ ಗಳಲ್ಲಿ ನಟಿಸಿದ್ದು ಸದ್ಯ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸಹ ನಟಿಸುತ್ತಿದ್ದು ಈಗ ಅವರು ಬಿಗ್ ಬಾಸ್ ನ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
- ಶಿಶಿರ ಶಾಸ್ತ್ರಿ: ಸೇವಂತಿ, ಪುಟ್ಟ ಗೌರಿ ಮದುವೆ, ಕುಲವಧು ಇನ್ನು ಮುಂತಾದ ಸೀರಿಯಲ್ ಗಳಲ್ಲಿ ನಟಿರುವ ಇವರು ಕೆಲವು ಸಿನಿಮಾಗಳಲ್ಲಿ ಸಹ ನಟಿಸಿದ್ದು ಈಗ ಇವರು ಬಿಗ್ ಬಾಸ್ ನ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
- ಧರ್ಮ ಕೀರ್ತಿರಾಜ್: ಕನ್ನಡದ ಖ್ಯಾತ ಖಳನಾಯಕ ಕೀರ್ತಿರಾಜ್ ಅವರ ಮಗನಾಗಿರುವ ಧರ್ಮ ಕೀರ್ತಿರಾಜ್ ಅವರು ಕಡಕ್, ಚಾಣಾಕ್ಷ, ನವಗ್ರಹ ಇನ್ನು ಮುಂತಾದ ಸಿನಿಮಾಗಳಲ್ಲಿ ಸಹ ಅಭಿನಯಿಸಿದ್ದು ಈಗ ಇವರು ಬಿಗ್ ಬಾಸ್ ನ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
- ಅನುಷಾ ರೈ: ಮಹಾನುಬಾವರು, ಕಡಕ್ ಎನ್ನುವ ಸಿನಿಮಾದಲ್ಲಿ ಸಹ ನಟಿಸಿದ್ದು ಈಗ ಅವರು ಬಿಗ್ ಬಾಸ್ ನ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
- ಐಶ್ವರ್ಯ ಸಿಂಧೋಗಿ: ರಣತಂತ್ರ, ಸಪ್ನೋಕಿ ರಾಣಿ, ಸಂಯುಕ್ತ, ಶಾಂಭವಿ, ಮಂಗಳ ಗೌರಿ ಮದುವೆ ಇನ್ನು ಮುಂತಾದ ಸಿನಿಮಾಗಳಲ್ಲಿ ಹಾಗೂ ಸೀರಿಯಲ್ ಗಳಲ್ಲಿ ಅಭಿನಯಿಸಿರುವ ಐಶ್ವರ್ಯ ಅವರು ಸಹ ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟಿದ್ದಾರೆ.
ಇದಿಷ್ಟು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳ ವಿವರವಾಗಿರುತ್ತದೆ.
ಸ್ವರ್ಗ ಮತ್ತು ನರಕ:
ಈ ಬಾರಿ ಬಿಗ್ ಬಾಸ್ ಕಾರ್ಯಕ್ರಮವು ಸ್ವರ್ಗ ಮತ್ತು ನರಕ ಎನ್ನುವ ಕಾನ್ಸೆಪ್ಟ್ ಮೂಲಕ ಎಂಟ್ರಿ ಕೊಟ್ಟಿದ್ದು. ಬಿಗ್ ಬಾಸ್ ನ 10 ಸೀಸನ್ ಗಿಂತ ಈ ಸೀಸನ್ ತುಂಬಾನೇ ವಿಶೇಷ ವಾಗಿರಲಿದೆ. ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ತುಂಬಾ ಬದಲಾವಣೆ ಇರುತ್ತದೆ. ಹೌದು ಮೊಟ್ಟ ಮೊದಲ ಬಾರಿಗೆ ಬಿಗ್ ಬಾಸ್ ನಲ್ಲಿ ಎರಡು ಮನೆಗಳಿರುತ್ತದೆ. ಸ್ಪರ್ಧಿಗಳನ್ನು ಸ್ವರ್ಗಕ್ಕೆ ಹಾಗೂ ಇನ್ನುಳಿದ ಸ್ಪರ್ದಿಗಳನ್ನ ನರಕ್ಕೆ ಕಳುಹಿಸಲಾಗಿದೆ.
ವೋಟ್ ಮಾಡೋದು ಹೇಗೆ?
ವಾರದ ಕೊನೆಯಲ್ಲಿ ಎಲಿಮಿನೇಷನ್ ಇರುವುದರಿಂದ ನಮ್ಮ ನೆಚ್ಚಿನ ಸ್ಪರ್ಧಿಗಳ ಉಳಿಸಿಕೊಳ್ಳುವ ಸಲುವಾಗಿ ಅವರಿಗೆ ವೋಟ್ ಮಾಡಿ ಉಳಿಸಿಕೊಳ್ಳಬೇಕಾಗುತ್ತದೆ.
ಹಾಗಾದರೆ ವೋಟ್ ಮಾಡೋದು ಹೇಗೆ? ಎಲ್ಲಿ ವೋಟ್ ಮಾಡ್ಬೇಕು ಅನ್ನೋದನ್ನ ನೋಡೋದಾದ್ರೆ.
- ಮೊದಲಿಗೆ ನೀವು Jio Cinema ಅಪ್ಲಿಕೇಶನ್ ನಲ್ಲಿ ವೋಟ್ ಮಾಡಬಹುದಾಗಿರುತ್ತದೆ.
- ಅದಕ್ಕಾಗಿ ಮೊದಲು Jio Cinema ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
- Jio Cinema ಅಪ್ಲಿಕೇಶನ್ ನಲ್ಲಿ ನೀವು ರಿಜಿಸ್ಟರ್ ಆಗಿಬೇಕು.
- ನಂತರ ನೀವು ಲಾಗಿನ್ ಆಗಬಹುದು.
- ಲಾಗಿನ್ ಆದ ಬಳಿಕ Search bar ನಲ್ಲಿ Bigg Boss Kannada Season 11 ಎಂದು ಸರ್ಚ್ ಮಾಡಿ.
- ನಂತರ ಅಲ್ಲಿ ನಿಮಗೆ Bigg Boss Kannada Vote ಎನ್ನುವ Option ಸಿಗುತ್ತದೆ.
ಅಲ್ಲಿ ನಿಮ್ಮ ನೆಚ್ಚಿನ ಸ್ಪರ್ದಿಗೆ ನೀವು ವೋಟ್ ಮಾಡುವ ಮೂಲಕ ಅವರನ್ನ ಉಳಿಸಬಹುದು. ಅಲ್ಲಿ ನಿಮಗೆ 99 ಸಲ ವೋಟ್ ಮಾಡುವ ಅವಕಾಶ ಇರುತ್ತದೆ. ಅದ್ದರಿಂದ ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಅನ್ನು ಉಳಿಸಲು 99 ವೋಟ್ ಗಳನ್ನ ಮಾಡಬಹುದು.
Bigg Boss 11 Contestants List, Bigg Boss 11 Update, BBK11, Bigg Boss Kannada, Kiccha Sudeep