ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭವಾಗಿದ್ದು, ಸ್ವರ್ಗ ಹಾಗು ನರಕ ಎನ್ನುವ ಕಾನ್ಸೆಪ್ಟ್ ನ ಮೂಲಕ ವಿಭಿನ್ನವಾಗಿ ತಂದಿದ್ದಾರೆ. ಇನ್ನು ಬಿಗ್ ಬಾಸ್ ನ ಮೊದಲ ವಾರ ಮನೆಯಿಂದ ಹೊರ ಬರುತ್ತಿರುವ ಸ್ಪರ್ಧಿ ಯಾರು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
Bigg Boss Kannada, Bigg Boss 1st Week Eliminated Contestants, ಮೊದಲ ವಾರವೇ ಬಿಗ್ ಬಾಸ್ ಮನೆಯಿಂದ ಹೊರ ಬಂದ ಕಂಟೆಸ್ಟಂಟ್, BBK11, kiccha, 1st Week Eliminated Contestants Bigg Boss 11
ಬಿಗ್ ಬಾಸ್ ಕನ್ನಡ ಒಟ್ಟಾರೆಯಾಗಿ ಇಲ್ಲಿಯವರೆಗೆ 10 ಸೀಸನ್ ಗಳನ್ನ, ಒಂದು ಮಿನಿ ಸೀಸನ್ ಹಾಗು ಒಂದು OTT ಸೀಸನ್ ಅನ್ನ ಮುಗಿಸಿರುವ ಬಿಗ್ ಬಾಸ್ ತಂಡ ಕಿಚ್ಚನ ಸಾರಥ್ಯದ ಮೇರೆಗೆ 11 ನೇ ಸೀಸನ್ ನಡೆಸಿಕೊಂಡು ಬರುತ್ತಿದೆ. ಇನ್ನು ಬಿಗ್ ಬಾಸ್ ನ ಮೊದಲ ವಾರ ಬಿಗ್ ಬಾಸ್ ಮನೆಯಲ್ಲಿ ನಡೆದ ಎಲ್ಲಾ ವಿಚಾರಗಳ ಚರ್ಚೆ ಕಿಚ್ಚನ ಪಂಚಾಯ್ತಿಯಲ್ಲಿ ನಡೆಸಲಾಯಿತು.
ಈ ವಾರ ಎಲಿಮಿನೇಟ್ ಆಗಿದ್ದು ಯಾರು?
ಬಿಗ್ ಬಾಸ್ ಮೊದಲ ವಾರ ಯಾರು ಎಲಿಮಿನೇಟ್ ಆಗಿದ್ದಾರೆ ಎನ್ನುವುದನ್ನ ನೋಡೋದಾದ್ರೆ ನಾವು ಒಂದು ವೋಟಿಂಗ್ ಪೊಲ್ ಅನ್ನ ಕ್ರಿಯೇಟ್ ಮಾಡಿದ್ವಿ. ಅದರ ಅನುಸಾರ ಅತಿ ಕಡಿಮೆ ವೋಟ್ ಬಂದಿದ್ದು ಯಮುನಾ ಹಾಗೂ ಹಂಸರವರಿಗೆ. ಅದರ ಅನುಸಾರ ನಮ್ಮ ಒಂದು ಅಂದಾಜಾಗಿರುತ್ತದೆ. ಆ ಆರ್ಟಿಕಲ್ ಅನ್ನು ಈ ಕೆಳಗೆ ನೀಡಿದ್ದೇನೆ. ಒಮ್ಮೆ ಅದನ್ನ ನೋಡಿ.
https://myeduupdatekannada.com/bigg-boss-kannada-1st-week-nomination-bbk11-bigg-boss-kannada-bigg-boss-11-voting-bigg-boss-kannada-1st-week-voting/
Bigg Boss 1St Week Eliminated Contestant:
ಬಿಗ್ ಬಾಸ್ 11ರ ಮೊದಲವಾರ ಹೊರಬರುತ್ತಿರುವ ಸ್ಪರ್ಧಿ ಯಾರೆಂದರೆ ಯಮುನಾ ಶ್ರೀನಿಧಿ. ಹೌದು ಈ ವಾರ ಬಿಗ್ ಬಾಸ್ 11ರಲ್ಲಿ ಎಲಿಮಿನೇಟ್ ಆದ ಮೊದಲ ಕಂಟೆಸ್ಟಂಟ್. ಇದರ ಬಗ್ಗೆ ನಿಮ್ಮ ಅಭಿಪ್ರಾಯ ಕಮೆಂಟ್ ಮಾಡಿ.
ಕಿಚ್ಚ ಮೊದಲ ಪಂಚಾಯ್ತಿ:
ಬಿಗ್ ಬಾಸ್ ನ ಮೊದಲ ದಿನದಿಂದ ವಾರದ ಅಂತ್ಯದ ವರೆಗೆ ಎನೆಲ್ಲ ನಡೆಯಿತು ಅದರ ಬಗ್ಗೆ ಕಿಚ್ಚನ ಪಂಚಾಯ್ತಿ ಯಲ್ಲಿ ಮಾತು ಕತೆಗಳು ನಡೆಯಿತು.
ಇನ್ನು ಬಿಗ್ ಬಾಸ್ ನ ಮೊದಲ ವಾರ ಯಾರ್ಯಾರು ನಾಮಿನೇಟ್ ಆಗಿದ್ದರು ಅಂದ್ರೆ ಗೌತಮಿ ಜಾಧವ್, ಚೈತ್ರಾ ಕುಂದಾಪುರ, ಯಮುನಾ, ಹಂಸ, ಶಿಶೀರ್, ಮೋಕ್ಷಿತಾ ಪೈ, ಮಾನಸ, ಭವ್ಯಾ ಗೌಡ, ಉಗ್ರಂ ಮಂಜು ಹಾಗೂ ಲಾಯರ್ ಜಗದೀಶ್ ಒಟ್ಟಾರೆಯಾಗಿ 10 ಜನ ನಾಮಿನೇಟ್ ಆಗಿದ್ದರು. ಇನ್ನು ಬಿಗ್ ಬಾಸ್ ಈ ಸ್ವರ್ಗ ನಿವಾಸಿಗಳಿಗೆ ನಾಮಿನೇಷನ್ ನಿಂದ ಪಾರಾಗಲು ಒಂದು ಟಾಸ್ಕ್ ಅನ್ನ ನೀಡಿತ್ತು. ಬಿಗ್ ಬಾಸ್ ನೀಡಿದ ಆ ಟಾಸ್ಕ್ ನಲ್ಲಿ ಉಗ್ರಂ ಮಂಜು ರವರು ಗೆದ್ದು ನಾಮಿನೇಷನ್ ನಿಂದ ಪಾರಾಗುತ್ತಾರೆ. ಆದ್ದರಿಂದ ಬಿಗ್ ಬಾಸ್ ನ ಮೊದಲ ವಾರ 9 ಜನ ನಾಮಿನೇಟ್ ಆಗಿರುತ್ತಾರೆ.
ಲಾಯರ್ ಜಗದೀಶ್ ಗೆ ಕಿಚ್ಚನ ಶನಿವಾರದ ಕ್ಲಾಸ್:
ಬಿಗ್ ಬಾಸ್ ನಲ್ಲಿ ಕಂಟೆಸ್ಟಂಟ್ ಆಗಿ ಬಂದ ಲಾಯರ್ ಜಗದೀಶ್ ರವರು ಮೊದಲ ದಿನದಿಂದ ಒಂದಲ್ಲಾ ಒಂದು ವಿಚಾರಕ್ಕೆ ಸ್ಪರ್ಧಿಗಳ ನಡುವೆ ಜಗಳಗಳು ಶುರುವಾಗಿತ್ತು. ಮನೆಯ 16 ಸ್ಪರ್ಧಿಗಳ ನಡುವೆ ಜಗಳಗಳು ಆರಂಭವಾಗಿತ್ತು. ಇನ್ನು ಇದರ ಜೊತೆಗೆ ಸ್ವತಃ ಬಿಗ್ ಬಾಸ್ ಜೊತೆ ಕೂಡ ಜಗಳವನ್ನ ಆಡಿದ್ರು. `ನಾನು ಬಿಗ್ ಬಾಸ್ ನಿಂದ ಹೊರ ಹೋಗುತ್ತೇನೆ, ಬಿಗ್ ಬಾಸ್ ನನ್ನ ಮನೆಯಿಂದ ಆಚೆ ಕಳುಹಿಸಿ, ನಿಮ್ಮನ ( ಬಿಗ್ ಬಾಸ್) ಹೊರ ಹೋದ ನಂತರ Expose ಮಾಡುತ್ತೇನೆ, ನಿಮ್ಮ ಬಣ್ಣವನ್ನು ನಾನು ತೆಗೆಯುತ್ತೇನೆ. ನನ್ನ ಎದುರಾಕೊಂಡು ಹೇಗೆ ಈ ಬಿಗ್ ಬಾಸ್ ಅನ್ನ ನಡೆಸುತ್ತಿರಾ ಅನ್ನೋದನ್ನ ನಾನು ನೋಡುತ್ತೇನೆ.’ ಹೀಗೆ ಬಿಗ್ ಬಾಸ್ ಬಗ್ಗೆ ಮಾತನ್ನ ಆಡಿದ್ರೂ. ಈ ವಿಚಾರವಾಗಿ ವಾರದ ಕಥೆಯ ಪಂಚಾಯ್ತಿಯಲ್ಲಿ ಮಾತನಾಡಿದ ನಿರೂಪಕ ಕಿಚ್ಚ ಸುದೀಪ್ ರವರು ಪ್ರತಿಯೊಂದನ್ನೂ ಎಳೆ ಎಳೆ ಯಾಗಿ ಬಿಚ್ಚಿಟ್ಟರು. ನಂತರ ಜಗದೀಶ್ ರವರು ತಾನು ಮಾತನಾಡಿರುವುದರ ಬಗ್ಗೆ ಕ್ಷಮೆಯನ್ನ ಕೇಳಿದ್ರು.
ಈ ವಾರ ಬಿಗ್ ಬಾಸ್ ನಿಂದ ಹೊರ ಹೋಗಲು ಸೇಫ್ ಆದ ಸ್ಪರ್ಧಿಗಳು:
ಬಿಗ್ ಬಾಸ್ ಮೊದಲ ವಾರ ಬಿಗ್ ಬಾಸ್ ನಿಂದ ಹೊರ ಹೋಗಲು 9 ಜನ ನಾಮಿನೇಟ್ ಆಗಿರುತ್ತಾರೆ. ಅವರೇ ಗೌತಮಿ ಜಾಧವ್, ಚೈತ್ರಾ ಕುಂದಾಪುರ, ಯಮುನಾ, ಹಂಸ, ಶಿಶೀರ್, ಮೋಕ್ಷಿತಾ ಪೈ, ಮಾನಸ, ಭವ್ಯಾ ಗೌಡ ಹಾಗೂ ಲಾಯರ್ ಜಗದೀಶ್. ಇದೀಗ ಇವರಲ್ಲಿ 3 ಜನ ಕಂಟೆಸ್ಟಂಟ್ ಗಳು ಸೇಫ್ ಆಗುತ್ತಾರೆ. ಅವರಲ್ಲಿ ಮೊದಲನೆಯದಾಗಿ ನಟಿ ಭವ್ಯ ಗೌಡ. ಹೌದು ಭವ್ಯ ಗೌಡ ಈ ವಾರ ಸೇಫ್ ಆದ ಮೊದಲ ಕಂಟೆಸ್ಟಂಟ್ ಇವರಾಗಿರುತ್ತಾರೆ. ಇನ್ನು ಸೇಫ್ ಆಗುತ್ತಿರುವ ಎರಡನೇ ಕಂಟೆಸ್ಟಂಟ್ ಗೌತಮಿ ಜಾಧವ್. ಹೌದು ಕಿಚ್ಚ ಸುದೀಪ್ ರವರು ಭವ್ಯ ಗೌಡ ನಂತರ ಸೇಫ್ ಮಾಡಿದ ಎರಡನೇ ಕಂಟೆಸ್ಟಂಟ್ ಗೌತಮಿ ಜಾಧವ್. ಇನ್ನು ಸೇಫ್ ಆದ 3ನೇ ಕಂಟೆಸ್ಟಂಟ್ ತುಕಾಲಿ ಸಂತುರವರ ಪತ್ನಿ ಮಾನಸ ಸಂತು. ಹೌದು ಕಿಚ್ಚ ಸುದೀಪ್ ರವರು ಮನಸಾ ಸಂತು ರವರನ್ನ ನಾಮಿನೇಷನ್ ನಿಂದ ಸೇಫ್ ಮಾಡಿದ್ದಾರೆ. ಇನ್ನು ಸೇಫ್ ಆದ 4ನೇ ಕಂಟೆಸ್ಟಂಟ್ ಮೋಕ್ಷಿತಾ ಪೈ. ಇನ್ನು ಸೇಫ್ ಆದ 5ನೇ ಕಂಟೆಸ್ಟಂಟ್ ಶಿಶೀರ್. ನಂತರ ಲಾಯರ್ ಜಗದೀಶ್ ರವರು ಸೇಫ್ ಆಗುತ್ತಾರೆ. ಅನಂತರ ಚೈತ್ರಾ ಕುಂದಾಪುರ ನಾಮಿನೇಷನ್ ನಿಂದ ಸೇಫ್ ಆಗುತ್ತಾರೆ. ಇನ್ನು ಕೊನೆಯಲ್ಲಿ ಡೇಂಜರ್ ಜೋನ್ ನಲ್ಲಿ ಇದ್ದ ಸ್ಪರ್ಧಿಗಳು ಹಂಸ ಹಾಗೂ ಯಮುನಾ. ಇನ್ನು ಇವರಿಬ್ಬರಲ್ಲಿ ಎಲಿಮಿನೇಟ್ ಆದ ಸ್ಪರ್ಧಿ ಯಮುನಾ ಶ್ರೀನಿಧಿಯವರು ಬಿಗ್ ಬಾಸ್ ನಿಂದ ಎಲಿಮಿನೇಟ್ ಆಗುತ್ತಾರೆ.
ಇನ್ನು ಈ ಬಾರಿಯ ಬಿಗ್ ಬಾಸ್ 11ರ ಮೊದಲ ಕಾಪ್ಟನ್ ಆಗಿ ಹಂಸರವರು ಆಯ್ಕೆಯಾಗಿದ್ದಾರೆ. ಇನ್ನು ಇವರು ಕ್ಯಾಪ್ಟನ್ ಆಗಿ ಹೇಗೆ ಮನೆಯನ್ನ ನಡೆಸಿಕೊಂಡು ಹೋಗುತ್ತಾರೆ ಎನ್ನುವುದನ್ನ ಕಾದು ನೋಡಬೇಕಾಗಿದೆ.
ಇನ್ಮುಂದೆ ಎಲ್ಲಾ ಮಹಿಳೆಯರಿಗೆ ಸಿಗಲ್ಲ 2000 ಹಣ Gruhalaxmi Scheme 12 ಹಾಗು 13ನೇ ಕಂತಿನಲ್ಲಿ ಬಿಗ್ ಶಾಕ್ Gruhalaxmi Scheme Update, Annabhagya and Gruhalaxmi Schemeಮಹಿಳೆಯರಿಗೆ ಭರ್ಜರಿ
ಗುಡ್ ನ್ಯೂಸ್, 30,000 ದಿಂದ 50,000 ವರೆಗೆ ಸಿಗಲಿದೆ, Good news For all Karnataka Womens, ಅರ್ಜಿ ಸಲ್ಲಿಸಿದ್ರೆ ಮಾತ್ರ ಸಿಗಲಿದೆ, Government New Scheme.
ಇದು ನನ್ನ ಅಭಿಪ್ರಾಯ:
ಇನ್ನು ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎನ್ನುವುದನ್ನ ನೋಡೋದಾದ್ರೆ ಕೆಲವು ಮಾಹಿತಿಗಳ ಪ್ರಕಾರ, ಒಂದು ಅನಿಸಿಕೆಯ ಮೇರೆಗೆ ಯಮುನಾರವರು ಎಲಿಮಿನೇಟ್ ಆಗುವ ಸಾಧ್ಯತೆ ಹೆಚ್ಚಿದೆ. ನಿಮ್ಮ ಪ್ರಕಾರ ಯಾರು ಎಲಿಮಿನೇಟ್ ಆಗುತ್ತಾರೆ ಎನ್ನುವುದರ ಅಭಿಪ್ರಾಯ ಕಾಮೆಂಟ್ ಮಾಡಿ ತಿಳಿಸಿ.
Bigg Boss Kannada, Bigg Boss 1st Week Eliminated Contestants, ಮೊದಲ ವಾರವೇ ಬಿಗ್ ಬಾಸ್ ಮನೆಯಿಂದ ಹೊರ ಬಂದ ಕಂಟೆಸ್ಟಂಟ್, BBK11, kiccha, Bigg Boss Eliminated Contestant