ನಮಸ್ಕರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭವಾಗಿ 3 ವಾರಗಳು ಕಳೆದಿದ್ದು, ಇದೀಗ 4ನೇ ವಾರಕ್ಕೆ ಕಾಲಿಟ್ಟಿರುವ Bigg Boss, ಇನ್ನು 3ನೇ ವಾರದಲ್ಲಿ ಜಗದೀಶ್ ಹಾಗೂ ರಂಜಿತ್ ಕುಮಾರ್ ಅವರು ಬಿಗ್ ಬಾಸ್ ನಿಂದ ಎಲಿಮಿನೇಟ್ ಆಗಿದ್ದಾರೆ. ಇನ್ನು 4ನೇ ವಾರದ ಆಟ ಶುರುವಾಗುತ್ತಿದ್ದಂತೆ, ಸರಿಗಮಪ ಸಿಂಗರ್ ಹನುಮಂತಪ್ಪರವರು ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ. ಹೌದೂ ಇದೀಗ ಹನುಮಂತಪ್ಪರವರು ಬಿಗ್ ಬಾಸ್ ಮನೆಗೆ ಬಂದಿರುವ ಸುದ್ದಿ ಎಲ್ಲೆಡೆ ಚರ್ಚೆ ಆಗುತ್ತಿದೆ. ನಿಜವಾಗ್ಲೂ ಹನುಮಂತಪ್ಪ ಕಂಟೆಸ್ಟಂಟ್ ಆಗಿ ಎಂಟ್ರಿ ಕೊಟ್ಟಿದ್ದಾರೋ? ಅಥವಾ ಹನುಮಂತಪ್ಪ ಕೇವಲ ಗೆಸ್ಟ್ ಆಗಿ ಎಂಟ್ರಿ ಕೊಟ್ಟಿದ್ದಾರೋ ಎನ್ನುವ ಚರ್ಚೆ ಎಲ್ಲಡೆ ಚರ್ಚೆಯಾಗುತ್ತಿದೆ. ಇನ್ನು ಈ ಸಂಶಯ ಬರಲು ಒಂದು ಕಾರಣ ಕೂಡ ಇದೆ. ಎನು ಎಂಬುದರ ಸಂಪೂರ್ಣ ಮಾಹಿತಿ ತಿಳಿಯೋಣ.
Bigg Boss Kannada, Hanumantappa in Bigg Boss Season 11, Bigg Boss Season 11 Update, BBK11, Bigg Boss Kannada 4th Week Elimination
ಹೌದು, ಬಿಗ್ ಬಾಸ್ ಮನೆಗೆ ಹನುಮಂತಪ್ಪ ಎಂಟ್ರಿ ಕೊಟ್ಟಿರುವುದು ಸತ್ಯ. ಆದರೆ ಇವರು ಕಂಟೆಸ್ಟಂಟ್ ಆಗಿ ಬಂದಿದ್ದಾರೋ ಅಥವಾ ಅತಿಥಿಯಾಗಿ ಬಂದಿದ್ದಾರೋ ಎನ್ನುವ ಚರ್ಚೆ ಶುರು
ವಾಗಿದೆ. ಯಾಕೆಂದರೆ ಕಲರ್ಸ್ ಕನ್ನಡದ ಸೋಷಿಯಲ್ ಮೀಡಿಯಾದಲ್ಲಿ ಯಾರಾದರೂ ಸ್ಪರ್ಧಿ ಎಂಟ್ರಿ ಕೊಟ್ಟಿದ್ರೆ ಅವರ ಪೋಸ್ಟ್ ಅನ್ನು ಶೇರ್ ಮಾಡಿಕೊಳ್ಳುತ್ತಿದ್ದರು. ಅವರ ಫೋಟೋದೊಂದಿಗೆ New Wild card ಕಂಟೆಸ್ಟಂಟ್ ಎಂದು ಶೇರ್ ಮಾಡಿಕೊಳ್ಳುತ್ತಿದ್ದರು. ಆದರೆ ಕಲರ್ಸ್ ಕನ್ನಡ ಆಫೀಸಿಯಲ್ ಪೇಜ್ ನಲ್ಲಿ ಅದರ ಬಗ್ಗೆ ಮಾಹಿತಿ ಹಂಚಿಕೊಂಡಿಲ್ಲ. ಇನ್ನು ಇವರು ಎಂಟ್ರಿ ಕೊಟ್ಟ ಕೂಡಲೇ ಬಿಗ್ ಬಾಸ್ ಕೂಡ ಇವರನ್ನ ನೇರವಾಗಿ ಈ ವಾರದ ಕ್ಯಾಪ್ಟನ್ ಆಗಿ ಇವರನ್ನೇ ಆಯ್ಕೆ ಮಾಡಿದ್ದರು. ಮನೆಯ ಸದಸ್ಯರಿಗೆ ನೇರವಾಗಿ ಕ್ಯಾಪ್ಟೇನ್ಸಿ ನೀಡಿರಲಿಲ್ಲ. ಅದರೆ ಹನುಮಂತಪ್ಪರವರಿಗೆ ಕ್ಯಾಪ್ಟನ್ ಅಧಿಕಾರ ಬಿಗ್ ಬಾಸ್ ನೀಡುತ್ತೆ.
ಇನ್ನು ಇದನ್ನ ನೋಡುತ್ತಿದ್ದ ಬಿಗ್ ಬಾಸ್ ಅಭಿಮಾನಿಗಳು ಇವರನ್ನ ನೇರವಾಗಿ ಕ್ಯಾಪ್ಟನ್ ಮಾಡಿದ್ದೂ ಸರಿಯಲ್ಲ ಎಂದು ಹೇಳುತ್ತಿದ್ದಾರೆ. ಬಿಗ್ ಬಾಸ್ ನ ಮೊದಲ ಕ್ಯಾಪ್ಟನ್ ಹಂಸ ರವರು ಆಗಿದ್ದರು. ಹಾಗೂ ಎರಡನೇಯ ಕ್ಯಾಪ್ಟನ್ ಶಿಶಿರ ಆಗಿದ್ದರು. ಆದರೆ ಈ ವಾರ ಬಿಗ್ ಬಾಸ್ ಮನೆಯ 3ನೇ ಕ್ಯಾಪ್ಟನ್ ಆಗಿ ಹನುಮಂತಪ್ಪರವರು ಆಯ್ಕೆ ಆಗಿದ್ದಾರೆ.
ಬಿಗ್ ಬಾಸ್ ಸೀಸನ್ 11ನೇ 3 ವಾರಗಳು ಮುಕ್ತಾಯ ವಾಗಿ 4ನೇ ವಾರಕ್ಕೆ ಕಾಲಿಟ್ಟಿದೆ. ಇನ್ನು 4ನೇ ವಾರದ ಮೊದಲ ದಿನದಲ್ಲಿ ಬಿಗ್ ಬಾಸ್ ಒಂದು ಟಾಸ್ಕ್ ಅನ್ನ ಆಡಿಸುತ್ತಾರೆ. 1 ರಿಂದ 14 ವರೆಗೆ ಬೋಲ್ಡ್ ಗಳ ಸಂಖ್ಯೆಯನ್ನು ಇಟ್ಟಿರುತ್ತಾರೆ. ಇಲ್ಲಿ ಬಿಗ್ ಬಾಸ್ ಹನುಮಂತರವರಿಗೆ ಹೇಳಿರುತ್ತಾರೆ, ಯಾವ ಸ್ಪರ್ಧಿ ಯಾವ ನಂಬರ್ ಗೇ ಸೂಕ್ತ ಎನ್ನುವುದನ್ನ. ಹಾಗೆ ಹನುಮಂತರವರು ಸ್ಪರ್ಧಿಗಳನ್ನ ಆಯ್ಕೆ ಮಾಡಿ, ಯಾವ ಸ್ಪರ್ಧಿ ಯಾವ ನಂಬರ್ ಗೆ ಸೂಕ್ತ ಎನ್ನುವುದನ್ನ ತಮ್ಮ ಅಭಿಪ್ರಾಯವನ್ನ ತಿಳಿಸುತ್ತಾರೆ. ಆದರೆ ಇಲ್ಲಿ ಸ್ಪರ್ಧಿಗಳು ಹನುಮಂತನ ಮೇಲೆ ರೊಚ್ಚಿಗೆಳುತ್ತಾರೆ. ಹನುಮಂತನವರು ಕೊಟ್ಟಿರುವ ನಂಬರ್ ಗಳನ್ನ ಸ್ಪರ್ಧಿಗಳು ಸ್ವೀಕರಿಸುವುದಿಲ್ಲ. ನನಗೆ ಈ ನಂಬರ್ ಸೂಕ್ತವಲ್ಲ. ನಿಮ್ಮ ತೀರ್ಮಾನಗಳು ತಪ್ಪಾಗಿದೆ. ಸರಿಯಾದ ಕಾರಣಗಳನ್ನ ನೀಡಿ, ನಂತರ ತೀರ್ಮಾನಗಳನ್ನ ತೆಗೆದುಕೊಳ್ಳಿ ಎನ್ನುತ್ತಾರೆ. ಮನೆಯ ಎಲ್ಲಾ ಸದಸ್ಯರು ಹನುಮಂತನ ವಿರುಧ್ಧ ಮಾತನಾಡಲು ಶುರು ಮಾಡುತ್ತಾರೆ.
ನಂತರ ಹನುಮಂತ ಕೆಲವು ಕಾರಣಗಳನ್ನ ನೀಡುತ್ತಾನೆ. ನಾನು ಸುಮ್ನೆ ನಿಮಗೆ ಕೊಟ್ಟೆ, ನನಗೆ ಅನಿಸಿತು ಅದಿಕ್ಕೆ ಕೊಟ್ಟೆ ಎನ್ನುವ ತಮಾಷೆ ಕಾರಣಗಳನ್ನು ಕೊಡುತ್ತಾನೆ. ಇದಕ್ಕೆ ಮನೆ ಮಂದಿಯಲ್ಲ ಅಸಮಾದಾನ ವ್ಯಕ್ತಪಡಿಸುತ್ತಾರೆ. ನನಗೆ ಜಗಳ ಆಗುವುದಾದರೆ ಬಿಗ್ ಬಾಸ್ ಮನೆಗೆ ಬರುತ್ತಿರಲಿಲ್ಲ, ನಾನು ಕ್ಯಾಪ್ಟನ್ ಆಗುವುದಿಲ್ಲ ಎಂದು ಹೇಳುತ್ತಾನೆ.
- Gruhalaxmi 2000 Yojane: ಇನ್ಮುಂದೆ ಎಲ್ಲಾ ಮಹಿಳೆಯರಿಗು ಸಿಗಲ್ಲ 2000 ಹಣ, 11ನೇ ಕಂತಿನಲ್ಲಿ ಬಿಗ್ ಶಾಕ್, Gruhalaxmi Scheme Update
- ಟೈಲರಿಂಗ್ ಉದ್ಯಮ ಸ್ಟಾರ್ಟ್ ಮಾಡುವವರಿಗೆ ಇಲ್ಲಿದೆ ಉತ್ತಮ ಅವಕಾಶ, Government Scheme, ಉಚಿತ ಟೈಲರಿಂಗ್ ತರಬೇತಿ ಜೊತೆಗೆ ಉಚಿತ ಹೊಲಿಗೆ ಯಂತ್ರ, Free Sewing Machine Scheme
ಈ ರೀತಿಯ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಬೇಕಾ?
ಟಿವಿ ಮಾಧ್ಯಮಗಳಲ್ಲಿ ಅತ್ಯಂತ ದೊಡ್ದ ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ ಪ್ರಥಮ ಸ್ಥಾನ ಪಡೆದಿದೆ. ಇನ್ನು ಈ ಬಿಗ್ ಬಾಸ್ ರಿಯಾಲಿಟಿ ಶೋ ಕೇವಲ ವ್ಯಕ್ತಿಗತವಲ್ಲ. ಆತನ ವ್ಯಕ್ತಿತ್ವವನ್ನು ಜನರೆದುರು ಪರಿಚಯಿಸುತ್ತೆ. ಈ ರಿಯಾಲಿಟಿ ಶೋ ಮೂಲಕ ಸಾಮಾನ್ಯ ಜನರು ಜನಪ್ರಿಯರಾಗಿದ್ದಾರೆ. ಇನ್ನು ಕೆಲವು ಸೆಲೆಬ್ರಿಟಿಗಳು ಕಾಣೆಯಾಗಿದ್ದಾರೆ. ಅವರನ್ನ ಇಷ್ಟ ಪಡುತ್ತಿದ್ದ ಕಂಟೆಸ್ಟಂಟ್ ಈ ಶೋ ಗೆ ಬಂದ ನಂತರ ಆವರ ಜನಪ್ರಿಯತೆ ಕೂಡ ಹಾಳಾಗಿದೆ. ಅವರ ವ್ಯಕ್ತಿತ್ವ ಇಷ್ಟವಿಲ್ಲ ಎಂದು ಕೂಡ ಹೇಳಿದ್ದಾರೆ. ಆದ್ದರಿಂದ ಈ ರಿಯಾಲಿಟಿ ಶೋ ಒಳಗೆ ಹೋದ ಕಾಂಟೆಸ್ಟಂಟ್ ಗಳಿಗೆ ಎಷ್ಟು ಉಪಯುಕ್ತವೋ ಅಷ್ಟೇ ಮಾರಕ ಕೂಡ ಹೌದು.
ಕೇವಲ ಇದೊಂದೇ ಅಲ್ಲ. ಅನೇಕ ರಿಯಾಲಿಟಿ ಶೋ ಕೂಡ ಹಾಗೆಯೇ. ಕೆಲವು ರಿಯಾಲಿಟಿ ಶೋ ಗಳಲ್ಲಿ ಸಾಮಾನ್ಯ ಜನರನ್ನ ಕರೆತಂದು ಅವರನ್ನ ಸೆಲೆಬ್ರಿಟಿಗಳನ್ನಾಗಿ ಮಾಡಿಬಿಡುತ್ತಾರೆ. ನಂತರ ಅವರು ಆ ಸೆಲೆಬ್ರಿಟಿ ಪಟ್ಟವನ್ನ ಸರಿಯಾಗಿ ನಿಬಾಯಿಸಲಾಗದೆ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಹಾಗೂ ಅವರುಗಳು ತುಂಬಾ ಹೀನಾಯ ಪರಿಸ್ಥಿತಿಗೆ ಹೋಗಿದ್ದಾರೆ. ನೀವು ರಾಜೇಶ್ ಎನ್ನುವ ನಟನ ಬಗ್ಗೆ ಕೇಳಿರುತ್ತೀರಿ ಎಂದುಕೊಂಡಿದ್ದೇನೆ. ಈತ ಹಳ್ಳಿ ಹೈದ ಪ್ಯಾಟೆಗ್ ಬಂದ ಎನ್ನುವ ರಿಯಾಲಿಟಿ ಶೋ ಮೂಲಕ ಗುರುತಿಸಿಕೊಂಡಿದವ. ಅದರಲ್ಲಿ ಇತ ವಿನ್ನರ್ ಆಗಿ, ನಂತರ ಒಂದು ಸಿನಿಮಾ ಕೂಡ ಮಾಡಿದ್ದಾನೆ. ಆದರೆ ನಂತರ ಆತ ಹೇಗೆ ಸಾವನ್ನಪ್ಪಿದ ಎನ್ನುವುದು ನಿಮಗೆ ತಿಳಿದಿರುತ್ತಿನಿ ಎಂದು ಕೊಂಡಿದ್ದೇನೆ.
ಹನುಮಂತ ಬಿಗ್ ಬಾಸ್ ಮನೆಗೆ ಗೆಸ್ಟ್ ಆಗಿ ಬಂದಿದ್ದಾನಾ? ಕಂಟೆಸ್ಟಂಟ್ ಆಗಿ ಬಂದಿದ್ದಾನಾ?
ಬಿಗ್ ಬಾಸ್ ಸೀಸನ್ 11ಕ್ಕೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿರುವ ಹನುಮಂತ ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಬಂದಿದ್ದಾನಾ ಅಥವಾ ಕಂಟೆಸ್ಟಂಟ್ ಆಗಿ ಬಂದಿದ್ದಾನಾ ಎನ್ನುವ ಕುತೂಹಲ ಹೆಚ್ಚಾಗಿದೆ. ಹೌದು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ಹನುಮಂತ ಕೇವಲ ಗೆಸ್ಟ್ ಆಗಿ ಬಂದಿದ್ದಾರೆ ಎನ್ನುವ ಮಾಹಿತಿ ಕೆಲವು ಕಡೆಗಳಲ್ಲಿ ಕೇಳಿ ಬರುತ್ತಿದೆ. ಆದರೆ ಯಾವುದು ಸತ್ಯ ಅಸತ್ಯ ಎನ್ನುವುದನ್ನ ಎಪಿಸೋಡ್ ನೋಡಿದಾಗಲೇ ಗೊತ್ತಾಗುತ್ತೆ. ಇನ್ನು ಹನುಮಂತರವರು ನಾನು ಕ್ಯಾಪ್ಟನ್ ಆಗುವುದಿಲ್ಲ ಎಂದಾಗ ಒಂದು ಟಾಸ್ಕ್ ಆಡಿಸುವ ಮೂಲಕ ಬಿಗ್ ಬಾಸ್ ಇನ್ನೊಬ್ಬ ಅರ್ಹ ಮನೆಯ ಕ್ಯಾಪ್ಟನ್ ನನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
ಈಗ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ಸಿಂಗರ್ ಹನುಮಂತಪ್ಪ, ಈ ಸೀಸನ್ ನಲ್ಲಿ ಯಾವ ರೀತಿಯ ಕಮಾಲ್ ಮಾಡುತ್ತಾನೆ ಎನ್ನುವುದನ್ನ ಮುಂದಿನ ಎಪಿಸೋಡ್ ಗಳಲ್ಲಿ ನೋಡೋಣ.
ಈ ವಾರ ಎಲಿಮಿನೇಟ್ ಆಗೋದು ಯಾರು?
Bigg Boss Kannada Season 11 ಇದೀಗ 3 ವಾರಗಳು ಮುಕ್ತಾಯ ಆಗಿದೆ. ಇನ್ನು ಬಿಗ್ ಬಾಸ್ ಮನೆಯಿಂದ 3 ಜನ ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಅವರುಗಳು ಯಮುನಾ, ಜಗದೀಶ, ರಂಜಿತ್ ಕುಮಾರ್. ಇನ್ನು 4ನೇ ವಾರಕ್ಕೆ ಕಾಲಿಟ್ಟಿರುವ ಬಿಗ್ ಬಾಸ್, ಈ ವಾರ ಯಾರು ಎಲಿಮಿನೇಟ್ ಆಗ್ತಾರೆ ಎನ್ನುವುದರ ಅಭಿಪ್ರಾಯ ನೀವು ಕಾಮೆಂಟ್ ನಲ್ಲಿ ತಿಳಿಸಿ.
Bigg Boss Kannada, ಹನುಮಂತನಿಗೆ ಎನಾಯ್ತು ಬಿಗ್ ಬಾಸ್ ಮನೆಯಲ್ಲಿ, Hanumantappa in Bigg Boss Season 11, Bigg Boss Season 11 Update, BBK11Bigg Boss Kannada 4th Week Elimination