Bigg Boss Kannada: ಬಿಗ್ ಬಾಸ್ ಆರಂಭಕ್ಕೆ ಮುಹೂರ್ತ ಫಿಕ್ಸ್ , ಯಾವೆಲ್ಲ ಸ್ಪರ್ಧಿಗಳು ಈ ಬಾರಿಯ ಬಿಗ್ ಬಾಸ್ ಸೀಸನ್ 11 ರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಗೊತ್ತೇ.? Biggboss season 11, BBK1

ಬಿಗ್ ಬಾಸ್ ಸೀಸನ್ 11 ಯಾವಾಗ್ ಆರಂಭ, ಈ ಬಾರಿ ಬಿಗ್ ಬಾಸ್ ಕಾರ್ಯಕ್ರಮವನ್ನು ಯಾರು ನಡೆಸಿಕೊಡಲಿದ್ದಾರೆ, ಯಾವೆಲ್ಲ ಸ್ಪರ್ಧಿಗಳು ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದನ್ನ ತಿಳಿಯೋಣ ಬನ್ನಿ.

ನಮಸ್ಕಾರ ಸ್ನೇಹಿತರೇ,

ಕಳೆದ 10 ಸೀಸನ್ ಗಳನ್ನ ಕಿಚ್ಚ ಸುದೀಪ್ ಅವರೇ ಯಶಸ್ವಿಯಾಗಿ ನಡೆಸಿಕೊಡುತ್ತಿದ್ದು, ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮವನ್ನು ಯಾರು ನಡೆಸಿಕೊಡುತ್ತಾರೆ? ಈ ಬಾರಿ ಕಿಚ್ಚ ಸುದೀಪ್ ನಿರೂಪಣೆ ಮಾಡುತ್ತಾರೋ? ಇಲ್ಲವೋ? ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು ಆದರೆ ಈ ಬಾರಿಯೂ ಸಹ ಕಿಚ್ಚ ಸುದೀಪ್ ಅವರೇ ನಿರೂಪಣೆ  ಮಾಡಲಿದ್ದು ಇದು ಅವರ ಅಭಿಮಾನಿಗಳಿಗೆ ಸಂತಸ ತರುವ ಸುದ್ದಿಯಾಗಿದೆ.

Bigg Boss Kannada: ಬಿಗ್ ಬಾಸ್ ಆರಂಭಕ್ಕೆ ಮುಹೂರ್ತ ಫಿಕ್ಸ್ , ಯಾವೆಲ್ಲ ಸ್ಪರ್ಧಿಗಳು ಈ ಬಾರಿಯ ಬಿಗ್ ಬಾಸ್ ಸೀಸನ್ 11 ರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಗೊತ್ತೇ.? Biggboss season 11, BBK1, Bigg Boss 11, BBK11 Contestants List, Bigg Boss 11 Updates, BBK11 Voting Results
ಬಿಗ್ ಬಾಸ್ ಸೀಸನ್ 11 ಯಾವಾಗ ಆರಂಭ : 

ಬಿಗ್ ಬಾಸ್ ಸೀಸನ್ 11 ರ ಪ್ರೋಮೋ ರಿಲೀಸ್ ಆಗುತ್ತಿದಂತೆ ಬಿಗ್ ಬಾಸ್ ಯಾವಾಗ ಆರಂಭ ಎನ್ನುವ ಕುತೂಹಲ ಎಲ್ಲರಲ್ಲೂ ಆರಂಭವಾಗಿದೆ. ಹೌದು ಬಿಗ್ ಬಾಸ್ ತನ್ನ 10 ಸೀಸನ್ ಗಳನ್ನು ಯಶಸ್ವಿಯಾಗಿ ಮುಗಿಸಿದ್ದು, ಈಗ ತನ್ನ 11ನೆ ಸೀಸನ್ ನ ಆರಂಭಕ್ಕೆ ಅದ್ದೂರಿ ತಯಾರಿ ನಡೆಸಿದೆ. ಇನ್ನು ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮವು ಹಲವು ವಿಶೇಷತೆಗಳಿಂದ ಕೂಡಿರಲಿದೆ ಎನ್ನುವ ಮಾಹಿತಿ ಸಹ ಇದೆ. ಇನ್ನು ಬಿಗ್ ಬಾಸ್ ಯಾವಾಗ ಆರಂಭವಾಗಲಿದೆ ಎನ್ನುವ ಕುತೂಹಲ ಎಲ್ಲರಲ್ಲೂ ಇದ್ದು ಇದೆ ಬರುವ ಸೆಪ್ಟೆಂಬರ್ 29 ರಿಂದ ಅಥವಾ ಅಕ್ಟೋಬರ್ ಮೊದಲ ವಾರದಿಂದ ಬಿಗ್ ಬಾಸ್ ಆರಂಭವಾಗುವ ಸಾಧ್ಯತೆ ಇದೆ

Bigg Boss Kannada, Bigg Boss Season 11, BBK11, Kiccha Sudeep, Kiccha Boss, Bigg Boss 11 Update BBK11 Update, Trending, Trending Update, BBK11 Trending update, My edu Update Kannada,
ಬಿಗ್ ಬಾಸ್ ಸ್ಪರ್ಧಿಗಳ ವಿವರ:

ನಟಿ ಪ್ರೇಮಾ : ” ಓಂ”ಸಿನಿಮಾಗಳಂತಹ ಹಿಟ್ ಸಿನಿಮಾಗಳಲ್ಲಿ ನಟಿಸುವ ಮೂಲಕ ಗುರುತಿಸಿಕೊಂಡಿರುವ ನಟಿ ಪ್ರೇಮಾ ಅವರು ಕನ್ನಡ ಮಾತ್ರವಲ್ಲದೆ  ತೆಲುಗು, ಮಲೆಯಾಳಂ, ಹಾಗೂ ತಮಿಳು ಸಿನಿಮಾಗಳಲ್ಲಿ ಸಹ ನಟಿಸುವ ಮೂಲಕ ಸೈ ಎನಿಸಿಕೊಂಡಿದ್ದು. ತಮ್ಮ ಮದುವೆಯ ಬಳಿಕ ಸಿನಿಮಾ ರಂಗದಿಂದ ದೂರವಿದ್ದ ಇವರು ಸದ್ಯ ಟಿವಿ ಶೋ ಗಳ ಮೂಲಕ ಕಿರುತೆರೆ ಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರು ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ

 ಮುಕಲ್ಯಪ್ಪ ( ಖಾಜಾ): ಯೂಟ್ಯೂಬರ್ ಆಗಿರುವ ಖಾಜಾ ಅವರು ಮುಕಲ್ಯಪ್ಪ ಯೂಟ್ಯೂಬ್ ಚಾನಲ್ ನಲ್ಲಿ ಕಾಮಿಡಿ ವಿಡಿಯೋ ಗಳನ್ನ ಮಾಡುವ ಮೂಲಕ ಖ್ಯಾತಿಗಳಿಸಿರುತ್ತಾರೆ.

ವರುಣ್ ಆರಾಧ್ಯ: ರೀಲ್ಸ್ ಹಾಗೂ ಯೂಟ್ಯೂಬ್ ವಿಡಿಯೋಗಳ ಮೂಲಕ ಗುರುತಿಸಿಕೊಂಡ ವರುಣ್ ಅವರು ನಂತರ ಬೃಂದಾವನ ಎನ್ನುವ ಸೀರಿಯಲ್ ನಲ್ಲಿ ಸಹ ನಟಿಸಿದ್ದು, ಇವರು ಸಹ ಅತಿ ಹೆಚ್ಚು ಫಾಲೋವರ್ಸ್ ಗಳನ್ನ ಹೊಂದಿರುವ ಕಾರಣ ಇವರು ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬರುವ ಸಾಧ್ಯತೆ ಇದೆ

ಮೋಕ್ಷಿತಾ ಪೈ: ಪಾರು ಸೀರಿಯಲ್ ಮೂಲಕ ಗುರುತಿಸಿಕೊಂಡಿರುವ ಮೋಕ್ಷಿತ ಪೈ ಅವರು ಸಹ ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಲೇಖಿ ಗೋಸ್ವಾಮಿ: ಫೇಮಸ್ ಯೂಟ್ಯೂಬರ್ ಆಗಿರುವ ಲೆಖಿ ಗೋಸ್ವಾಮಿ ಅವರು ಸಹ ಬಿಗ್ ಬಾಸ್ ಸೀಸನ್ 11 ರಲ್ಲಿ ಕಾಣಿಸಿಕೊಳ್ಳಬಹುದು.

ರಾಗಿಣಿ ದ್ವಿವೇದಿ: ತುಪ್ಪಾ ಬೇಕಾ ತುಪ್ಪ ಹಾಡಿನ ಮೂಲಕ ಗುರುತಿಸಿಕೊಳ್ಳುವ ನಟಿ ರಾಗಿಣಿ ಮೊದಲು ತಮ್ಮ ಸಿನಿ ಪಯಣವನ್ನ ಆರಂಭಿಸಿದ್ದು ಕಿಚ್ಚ ಸುದೀಪ್  ವೊಂದಿಗಿನ ವೀರ ಮದಕರಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ರು. ಆ ಬಳಿಕ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡ ಇವರು ಸದ್ಯ ಸಿನಿಮಾಗಳಿಂದ ದೂರ ಉಳಿದಿದ್ದಾರೆ.

ರಾಘವೇಂದ್ರ: ಮಹಾಭಾರತ ಹಾಗೂ ಗಿಚ್ಚಿ ಗಿಲಿ ಗಿಲಿ ಶೋ ಮೂಲಕ ಖ್ಯಾತಿಗಳಿಸಿರುವ ರಾಘವೇಂದ್ರ ಸಹ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಆಶಾ ಭಟ್: ಸರಿಗಮಪ ಮೂಲಕ ಗುರುತಿಸಿಕೊಂಡಿರುವ ಆಶಾ ಭಟ್ ಸದ್ಯ ಕಾಮಿಡಿ ಕಿಲಾಡಿಗಳು ಶೋ ನಲ್ಲಿ ಸಹ ಕಾಣಿಸಿಕೊಂಡಿದ್ದಾರೆ.

ಪಂಕಜ್: ಬಾಲನಟನಾಗಿ ನಟನೆ ಆರಂಭಿಸಿದ ಇವರು ನಂತರ ನಟನಾಗಿ ಚೈತ್ರದ ಚಂದ್ರಮ, ಚಲುವಿನ ಚಿಲಿಪಿಲಿ, ದುಷ್ಠ ಇನ್ನು ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದು ಸದ್ಯ ಊರ್ಮಿಳಾ ಎನ್ನುವ ಧಾರಾವಾಹಿಯಲ್ಲಿ ನಟನಾಗಿ ನಟಿಸುತ್ತಿದ್ದಾರೆ.

ಶಶಿ ಕುಮಾರ್: ಕನ್ನಡ ಚಿತ್ರರಂಗದ ಹಿರಿಯ ನಟರಾಗಿರುವ ನಟ ಶಶಿ ಕುಮಾರ್ ಅವರ 19ರ ದಶಕದಲ್ಲಿ ಅತಿ ಬೇಡಿಕೆಯ ನಟರಾಗಿದ್ದು ಇವರು 1990 ರ ದಶಕದ ಹಿಟ್ ಸಿನಿಮಾದಲ್ಲಿ ನಟಿಸಿದ್ದಾರೆ. ಆದರೆ ಕಾರು ಅಪಘಾತದ ಬಳಿಕ ಇವರ ಬೇಡಿಕೆ ಕಡಿಮೆಯಾಗುತ್ತದೆ. ಈ ಬಳಿಕ ಇವರು ಸಹ ನಟ ಹಾಗೂ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ.

ಅಶ್ವಿತಿ/ ಅಧ್ವಿತಿ ಶೆಟ್ಟಿ: ಅವಳಿ ಸಹೋದರಿಯರಾಗಿರುವ ಇವರು Mr and Mrs ರಾಮಾಚಾರಿ, ಫ್ಯಾನ್, ಶುಗರ್ ಫ್ಯಾಕ್ಟರಿ ಇನ್ನು ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ವಿಕ್ಕಿ ಪೀಡಿಯಾ ( ವಿಕಾಸ್ ): ನಾನು ನಂದಿನಿ ಹಾಡಿನ ಮೂಲಕ ಜನರ ಗಮನ ಸೆಳೆದಿರುವ ವಿಕಾಸ್ ಅವರು ಸಿಂಗರ್ ಸಹ ಆಗಿದ್ದು. ಹಳೆ ಹಾಡುಗಳನ್ನ ತಮ್ಮದೇ ರೀತಿಯಲ್ಲಿ ಹೊಸದಾಗಿ ಹೇಳುವ ಮೂಲಕ ಫೇಮಸ್ ಆಗಿದ್ದಾರೆ.

ಶರ್ಮಿತಾ ಗೌಡ: ಗೀತಾ ಧಾರಾವಾಹಿಯಲ್ಲಿ ವಿಲನ್ ಪಾತ್ರದ ಮೂಲಕ ಗುರುತಿಸಿಕೊಂಡಿರುವ ಇವರು ಸದ್ಯ ತಮ್ಮ ಗ್ಲಾಮರಸ್ ಫೋಟೋಗಳ ಮೂಲಕ ಜನರ ಗಮನ ಸೆಳೆಯುತ್ತಿದ್ದಾರೆ.

ತ್ರಿವಿಕ್ರಮ: ಪದ್ಮಾವತಿ ಧಾರಾವಾಹಿ ಮೂಲಕ ಗುರುತಿಸಿಕೊಂಡಿರುವ ಇವರು ಸದ್ಯ ತೆಲುಗು ಸೇರಿಯಲ್ ಗಳಲ್ಲಿ ನಟಿಸುತ್ತಿದ್ದಾರೆ.

ಜ್ಯೋತಿ ರೈ: ಕನ್ನಡ ಕಿರುತೆರೆಯಲ್ಲಿ ಪೋಷಕ ಪಾತ್ರದ ಮೂಲಕ ಎಲ್ಲರ ಮೆಚ್ಚುಗೆ ಪಡೆದಿರುವ ನಟಿ ಜ್ಯೋತಿ ಅವರು ಸದ್ಯ ತಮ್ಮ ತೂಕ ಇಳಿಸಿಕೊಂಡು ಹರಯದ ಹುಡುಗಿಯ ರೀತಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ನಾಗರಾಜ್: ಯೂಟ್ಯೂಬರ್ ಆಗಿರುವ ಇವರು ಪ್ರಾಂಕ್ ಕನ್ನಡಿಗ ಎನ್ನುವ ಯೂಟ್ಯೂಬ್ ಚಾನಲ್ ಅಲ್ಲಿ ಟೆಡ್ಡಿ ಬೇರ್ ವೇಷಧರಿಸಿ ಪ್ರಾಂಕ್ ಮಾಡುವ ಹಾಗೂ ಮನರಾಜಿಸುವ ವಿಡಿಯೋ ಗಳನ್ನ ಮಾಡುವ ಮೂಲಕ ಫೇಮಸ್ ಆಗಿರುತ್ತಾರೆ.

ತನ್ವಿ ರಾವ್: ಡ್ಯಾನ್ಸರ್ ಹಾಗೂ ನಟಿ ಆಗಿರುವ ಇವರು ಬಾಲ್ಯದಿಂದಲೂ ಡ್ಯಾನ್ಸ್ ನಲ್ಲಿ ಆಸಕ್ತಿ ಹೊಂದಿದ್ದು, ಅದರಲ್ಲಿ ಹಲವಾರು ಪ್ರಶಸ್ತಿಗಳನ್ನು ಸಹ ಗೆದ್ದಿದ್ದಾರೆ. ಇನ್ನು ಸದ್ಯ ಇವರು ಲಕ್ಷ್ಮಿ ಬಾರಮ್ಮ ಎನ್ನುವ ಧಾರಾವಾಹಿಯಲ್ಲಿ ನಟಿಸುವ ಮೂಲಕ ಗುರುತಿಸಿಕೊಂಡಿದ್ದಾರೆ.

ಸುಕೃತಾ ನಾಗ್: ಅಗ್ನಿಸಾಕ್ಷಿ, ಲಕ್ಷಣ ಧಾರಾವಾಹಿ ಖ್ಯಾತಿಯ ಸುಕೃತಾ ನಾಗ್ ಅವರು ಕಿರುತೆರೆ ಮೂಲಕ ಗುರುತಿಸಿ ಕೊಂಡಿರುತ್ತಾರೆ.

 

 

ಇದಿಷ್ಟು ಈ ಬಾರಿಯ ಬಿಗ್ ಬಾಸ್ ಸೀಸನ್ 11 ಕ್ಕೆ ಬರಬಹುದಾದ ಸ್ಪರ್ಧಿಗಳ ವಿವರವಾಗಿರುತ್ತದೆ. ಇವರುಗಳು ಈ ಬಾರಿ ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಪರ್ದಿಗಳಾಗಿ ಬರಬಹುದು ಹಾಗು ಬರದೆ ಇರಬಹುದು. ಇನ್ನು ನಿಮ್ಮ ಪ್ರಕಾರ ಯಾರು ಈ ಬಾರಿಯ ಬಿಗ್ ಬಾಸ್ 11ರ ಮನೆಗೆ ಬರಬೇಕು ಎನ್ನುವುದನ್ನ ಕಮೆಂಟ್ ಮಾಡಿ ತಿಳಿಸಿ.

Bigg Boss Kannada, Bigg Boss 11, BBK11 Contestants List, Bigg Boss 11 Updates, BBK11 Voting Results

 

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.
ಧನ್ಯವಾದಗಳು..!

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment