ನಮಸ್ಕರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭವಾಗಿ 3 ವಾರಗಳು ಕಳೆದಿದ್ದು, ಇದೀಗ 4ನೇ ವಾರಕ್ಕೆ ಕಾಲಿಟ್ಟಿರುವ Bigg Boss, ಇನ್ನು 3ನೇ ವಾರದಲ್ಲಿ ಜಗದೀಶ್ ಹಾಗೂ ರಂಜಿತ್ ಕುಮಾರ್ ಅವರು ಬಿಗ್ ಬಾಸ್ ನಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದರು. ಇನ್ನು 4ನೇ ವಾರದ ಆಟ ಶುರುವಾಗುತ್ತಿದ್ದಂತೆ, ಸರಿಗಮಪ ಸಿಂಗರ್ ಹನುಮಂತಪ್ಪರವರು ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ.
Bigg Boss Kannada: ಮತ್ತೆ ರಿ ಎಂಟ್ರಿ ಕೊಡ್ತಾರ ಜಗ್ಗು ಹಾಗೂ ರಂಜಿತ್, Jagadessh and ranjith ri-entry in Bigg Boss 11, Bigg Boss Season 11 Update, BBK11, Jaggu re entry in Bigg Boss
ಜಗದೀಶ್ ಹಾಗೂ ರಂಜಿತ್ ಕುಮಾರ್ ಬಿಗ್ ಬಾಸ್ ನಿಂದ ಎಲಿಮಿನೇಟ್ ಆದ ನಂತರ ಒಂದು ವಿಚಾರ ಎಲ್ಲೆಡೆ ಚರ್ಚೆಯಾಗುತ್ತಿದೆ. ಅದುವೇ ಜಗದೀಶ್ ಹಾಗು ರಂಜಿತ್ ಕುಮಾರ್ ರವರ ರಿ ಎಂಟ್ರಿ. ಹೌದು ಇದೀಗ ಬಿಗ್ ಬಾಸ್ ಸೀಸನ್ 11ರ ಮನೆಗೆ ಮತ್ತೇ ರಿ ಎಂಟ್ರಿ ಕೊಡುತ್ತಿರುವ ಚರ್ಚೆ ಎಲ್ಲೆಡೆ ಸುದ್ದಿಯಾಗುತ್ತಿದೆ. ಯಾಕೆ ಈ ವಿಚಾರ ಎಲ್ಲೆಡೆ ಚರ್ಚೆಯಾಗುತ್ತಿದೆ ಎನ್ನುವುದರ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ.
ಬಿಗ್ ಬಾಸ್ ಸೀಸನ್ 11ರ ರಿಯಾಲಿಟಿ ಶೋನಲ್ಲಿ ಕಂಟೆಸ್ಟಂಟ್ ಆಗಿ ಎಂಟ್ರಿ ಕೊಟ್ಟಿರುವ ಜಗದೀಶ್ ಹಾಗು ರಂಜಿತ್ ಕುಮಾರ್ ರವರು ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದರು. ಜಗದೀಶ್ ರವರು ಬಿಗ್ ಬಾಸ್ ನ ಕೆಲ ರೂಲ್ಸ್ ಹಾಗು ಹೆಣ್ಣುಮಕ್ಕಳಿಗೆ ಕೆಲ ಅವಾಚ್ಯ ಶಬ್ದಗಳಿಂದ ನಿಂದಿಸಿದರು ಹಾಗೂ ಇನ್ನು ಕೆಲ ಕಾರಣದಿಂದ ಇವರು ಬಿಗ್ ಬಾಸ್ ನಿಂದ ಎಲಿಮಿನೇಟ್ ಆಗುತ್ತಾರೆ. ಇನ್ನು ರಂಜಿತ್ ಕುಮಾರ್ ರವರು ಮಾನ್ ಹಾಂಡಲಿಂಗ್ ಮಾಡಿ ಬಿಗ್ ಬಾಸ್ ನ ನಿಯಮ ಮೀರಿರುವ ಕಾರಣದಿಂದ ಇವರು ಕೂಡ ಬಿಗ್ ಬಾಸ್ ನಿಂದ ಆಚೆ ಬಂದಿರುತ್ತಾರೆ.
ಆದರೆ ಈಗ ಮತ್ತೆ ಇವರು ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ ಎನ್ನುವ ವಿಚಾರಗಳು ಕೇಳಿ ಬರುತ್ತಿದೆ. ಹೌದು ಜಗದೀಶ್ ಹಾಗು ರಂಜಿತ್ ಕುಮಾರ್ ರವರು ಬಿಗ್ ಬಾಸ್ ಮನೆಯಿಂದ ಆಚೆ ಬಂದ ನಂತರ ಇವರು ಮಾದ್ಯಮಗಳಲ್ಲಿ ಸಂದರ್ಶನವನ್ನ ನೀಡುತ್ತಾರೆ. ಈ ಸಮಯದಲ್ಲಿ ಸಂದರ್ಶಕರು ಒಂದು ಪ್ರಶ್ನೆ ಕೇಳುತ್ತಾರೆ. ನೀವು ಮತ್ತೆ ಬಿಗ್ ಬಾಸ್ ಮನೆಗೆ ಹೋಗುತ್ತೀರಾ ಎಂದು ಕೇಳಿದಾಗ ಜಗದೀಶ್ ರವರು ನಿಮಗೆ ಇನ್ನೊಂದು ಸರ್ಪ್ರೈಸ್ ಬರಲಿದೆ ಎನ್ನುವ ಮಾತನ್ನ ಹೇಳುತ್ತಾರೆ. ನಾವು ಈಗ ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದೇವೆ. ಆದರೆ ಈಗ ಬಿಗ್ ಬಾಸ್ ಅಭಿಮಾನಿಗಳಿಗೆ ಇನ್ನೊಂದು ದೊಡ್ಡ ಸರ್ಪ್ರೈಸ್ ಕಾಣಲಿದ್ದೀರಿ ಎನ್ನುವ ಮಾತನ್ನ ಜಗದೀಶ್ ರವರು ಹೇಳುತ್ತಾರೆ.
ಇದೀಗ ಹನುಮಂತಪ್ಪರವರು ಬಿಗ್ ಬಾಸ್ ಮನೆಗೆ ಬಂದಿರುವ ಸುದ್ದಿ ಎಲ್ಲೆಡೆ ಚರ್ಚೆ ಆಗುತ್ತಿದೆ. ನಿಜವಾಗ್ಲೂ ಹನುಮಂತಪ್ಪ ಕಂಟೆಸ್ಟಂಟ್ ಆಗಿ ಎಂಟ್ರಿ ಕೊಟ್ಟಿದ್ದಾರೋ? ಅಥವಾ ಹನುಮಂತಪ್ಪ ಕೇವಲ ಗೆಸ್ಟ್ ಆಗಿ ಎಂಟ್ರಿ ಕೊಟ್ಟಿದ್ದಾರೋ ಎನ್ನುವ ಚರ್ಚೆ ಎಲ್ಲಡೆ ಚರ್ಚೆಯಾಗುತ್ತಿದೆ. ಇನ್ನು ಈ ಸಂಶಯ ಬರಲು ಒಂದು ಕಾರಣ ಕೂಡ ಇದೆ. ಎನು ಎಂಬುದರ ಸಂಪೂರ್ಣ ಮಾಹಿತಿ ತಿಳಿಯೋಣ.
ಹೌದು ಬಿಗ್ ಬಾಸ್ ಮನೆಗೆ ಹನುಮಂತಪ್ಪ ಎಂಟ್ರಿ ಕೊಟ್ಟಿರುವುದು ಸತ್ಯ. ಆದರೆ ಇವರು ಕಂಟೆಸ್ಟಂಟ್ ಆಗಿ ಬಂದಿದ್ದಾರೋ ಅಥವಾ ಅತಿಥಿಯಾಗಿ ಬಂದಿದ್ದಾರೋ ಎನ್ನುವ ಚರ್ಚೆ ಶುರು
ವಾಗಿದೆ. ಯಾಕೆಂದರೆ ಕಲರ್ಸ್ ಕನ್ನಡದ ಸೋಷಿಯಲ್ ಮೀಡಿಯಾದಲ್ಲಿ ಯಾರಾದರೂ ಸ್ಪರ್ಧಿ ಎಂಟ್ರಿ ಕೊಟ್ಟಿದ್ರೆ ಅವರ ಪೋಸ್ಟ್ ಅನ್ನು ಶೇರ್ ಮಾಡಿಕೊಳ್ಳುತ್ತಿದ್ದರು. ಅವರ ಫೋಟೋದೊಂದಿಗೆ New Wild card ಕಂಟೆಸ್ಟಂಟ್ ಎಂದು ಶೇರ್ ಮಾಡಿಕೊಳ್ಳುತ್ತಿದ್ದರು. ಆದರೆ ಕಲರ್ಸ್ ಕನ್ನಡ ಆಫೀಸಿಯಲ್ ಪೇಜ್ ನಲ್ಲಿ ಅದರ ಬಗ್ಗೆ ಮಾಹಿತಿ ಹಂಚಿಕೊಂಡಿಲ್ಲ. ಇನ್ನು ಈ ವಿಚಾರ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ.
ಬಿಗ್ ಬಾಸ್ ಮನೆಗೆ ಜಗ್ಗು ಹಾಗು ರಂಜಿತ್ ಬರಲೇಬೇಕು.
ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನದಿಂದ 3 ವಾರದವರೆಗೆ ಕಮಾಲ್ ಮಾಡಿದ ಜಗದೀಶ್ ರವರು ಹೊರಗಿನ ಜನರ ಪ್ರೀತಿಯನ್ನ ಸಂಪಾದಿಸಿದ್ದಾರೆ. ಇನ್ನು ಬಿಗ್ ಬಾಸ್ ಮನೆಯಿಂದ ಆಚೆ ಬಂದ ನಂತರ ಜಗದೀಶ್ ರವರೆ ಅದನ್ನ ನೋಡಿದ್ದಾರೆ. ಇನ್ನು ಬಿಗ್ ಬಾಸ್ ಮನೆಯಿಂದ ಬಂದ ನಂತರ ಬಿಗ್ ಬಾಸ್ TRP ಕಮ್ಮಿ ಆಗಿದೆ. ನಮ್ಮ ಜಗ್ಗು TRP ಕಿಂಗ್ 👑 ಎಂದು ಹೇಳುತ್ತಿದ್ದಾರೆ. ಇನ್ನು ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಮತ್ತೆ ಬಿಗ್ ಬಾಸ್ ಮನೆಗೆ ಜಗದೀಶ್ ರವರು ಮತ್ತೆ ರಿ ಎಂಟ್ರಿ ಕೊಡಬೇಕು ಎಂದು ಅವರ ಫ್ಯಾನ್ಸ್ ಗಳು ಹೇಳುತ್ತಿದ್ದಾರೆ. ಇನ್ನು ಮಾದ್ಯಮಗಳು ನೀವು ಮತ್ತೆ ಬಿಗ್ ಬಾಸ್ ಮನೆಗೆ ಹೋಗ್ತೀರಾ ಎಂದು ಕೇಳಿದಾಗ ಖಂಡಿತ ನಾನು ಹೋಗುತ್ತೇನೆ. ಆದರೆ ನನ್ನನ್ನು ಕರೆದುಕೊಳ್ಳಿ ಎಂದು ನಾನು ಹೇಳಲ್ಲ, ನನಗೆ ಮತ್ತೆ ಆವಕಾಶ ಸಿಕ್ಕರೆ ಖಂಡಿತವಾಗಿ ನಾನು ಹೋಗುತ್ತೇನೆ ಎಂದರು.
- ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್, 30,000 ದಿಂದ 50,000 ವರೆಗೆ ಸಿಗಲಿದೆ, Good news For all Karnataka Womens, ಅರ್ಜಿ ಸಲ್ಲಿಸಿದ್ರೆ ಮಾತ್ರ ಸಿಗಲಿದೆ, Government New Scheme.
- ಟೈಲರಿಂಗ್ ಉದ್ಯಮ ಸ್ಟಾರ್ಟ್ ಮಾಡುವವರಿಗೆ ಇಲ್ಲಿದೆ ಉತ್ತಮ ಅವಕಾಶ, Government Scheme, ಉಚಿತ ಟೈಲರಿಂಗ್ ತರಬೇತಿ ಜೊತೆಗೆ ಉಚಿತ ಹೊಲಿಗೆ ಯಂತ್ರ, Free Sewing Machine Scheme
ಜಗ್ಗು ಹಾಗು ರಂಜಿತ್ ರಿ ಎಂಟ್ರಿ ಗೆ ಕಿಚ್ಚ ಹೇಳಿದ್ದೇನೂ.
ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಬಂದ ಜಗದೀಶ್ ಹಾಗು ರಂಜಿತ್ ರವರು ಮತ್ತೆ ಇವರುಗಳು ಬಿಗ್ ಬಾಸ್ ಮನೆಗೆ ಹೋಗಬೇಕು ಎನ್ನುತ್ತಿದ್ದಾರೆ. ಆದರೆ ಈ ಬಗ್ಗೆ ಕ್ಲಾರಿಫಿಕೇಷನ್ ಕೊಟ್ಟ ಕಿಚ್ಚ, ನಾವು ಅವರನ್ನ ಎಲಿಮಿನೇಟ್ ಮಾಡಿಲ್ಲ, ಅವರುಗಳು ಬಿಗ್ ಬಾಸ್ ಮನೆಯಿಂದ ಹೊರಹೋಗುವ ಹಾಗೇ ಅವರುಗಳು ಮಾಡಿಕೊಂಡಿದ್ದಾರೆ. ಈ ಹಿಂದೆ ಕೂಡ ಈ ರೀತಿಯ ಘಟನೆಗಳು ಆಗಿದೆ. ಆದರೆ ಅವರುಗಳನ್ನ ನಾವು ಮತ್ತೆ ರಿ ಎಂಟ್ರಿ ಕೊಟ್ಟಿರಲಿಲ್ಲ. ಈಗ ನಾವು ಜಗದೀಶ್ ಹಾಗೂ ರಂಜಿತ್ ರವರಿಗೆ ಮತ್ತೆ ಅವಕಾಶ ಕೊಡಬೇಕು ಅಂದ್ರೆ ಹುಚ್ಛ ವೆಂಕಟ್ ರವರಿಗೂ ಮತ್ತೆ ನಾವು ಆವಕಾಶ ಕೊಡಬೇಕು. ಎಲ್ಲಾರಿಗೂ ಒಂದೇ ನ್ಯಾಯ. ಇದು ಬಿಗ್ ಬಾಸ್ ಆಟ. ಈ ರೀತಿಯ ಘಟನೆಗೆ ಮತ್ತೆ ಆವಕಾಶ ನಾವು ಕೊಡುವುದಿಲ್ಲ ಎಂದು ಕಿಚ್ಚ ಸುದೀಪ್ ರವರು ಸ್ಪಷ್ಟನೆ ಕೊಟ್ಟಿದ್ದರೆ.
ಬಿಗ್ ಬಾಸ್ ಮನೆಗೆ ಜಗ್ಗು ಹಾಗೂ ರಂಜಿತ್ ಮತ್ತೇ ಬರ್ತಾರಾ?
ಬಿಗ್ ಬಾಸ್ ಕನ್ನಡಲ್ಲಿ ಮಾತ್ರವಲ್ಲ, ಬೇರೆ ಭಾಷೆಗಳಲ್ಲಿ ಕೂಡ ಈ ರೀತಿಯ ಘಟನೆಗಳು ಆಗಿದೆ. ಆದರೆ ಅಲ್ಲಿನ ಕಂಟೆಸ್ಟಂಟ್ ಗಳಿಗೆ ಇನ್ನೊಂದು ಅವಕಾಶ ಕೊಟ್ಟಿರಲಿಲ್ಲ. ಅದೇ ತರ ಕನ್ನಡದಲ್ಲಿಯೂ ಸಹ ಈ ರೀತಿಯಲ್ಲಿ ಘಟನೆಗೆ ಅವಕಾಶ ಕೊಡುವುದಿಲ್ಲ. ಆದರೆ ಜನರ ಬೆಂಬಲ ಅಧಿಕವಾಗಿರುವ ಕಾರಣದಿಂದ ಬಿಗ್ ಬಾಸ್ ತಂಡ ಎನು ಮಾಡ್ತಾರೆ ಎನ್ನುವುದನ್ನ ಕಾದು ನೋಡಬೇಕಾಗಿದೆ.
ನನ್ನ ಪ್ರಕಾರ ಜಗದೀಶ್ ಹಾಗೂ ರಂಜಿತ್ ಬಿಗ್ ಬಾಸ್ ಮನೆಗೆ ಮತ್ತೆ ಬರುವುದು ಡೌಟ್. ಇನ್ನು ನಿಮ್ಮ ಪ್ರಕಾರ ಇವರುಗಳು ಬರಬೇಕಾ? ಬೇಡ? ಎನ್ನುವುದನ್ನ ಕಾಮೆಂಟ್ ಮಾಡಿ ತಿಳಿಸಿ. ಇನ್ನು 4ನೇ ವಾರಕ್ಕೆ ಕಾಲಿಟ್ಟಿರುವ ಬಿಗ್ ಬಾಸ್, ಈ ವಾರ ಯಾರು ಎಲಿಮಿನೇಟ್ ಆಗ್ತಾರೆ ಎನ್ನುವುದರ ಅಭಿಪ್ರಾಯ ನೀವು ಕಾಮೆಂಟ್ ನಲ್ಲಿ ತಿಳಿಸಿ.
Bigg Boss Kannada, Jagadessh and ranjith ri-entry in Bigg Boss 11, Bigg Boss Season 11 Update, BBK11, Jaggu re entry in Bigg Boss