Bigg Boss Kannada 11: ಬಿಗ್ ಬಾಸ್ ಸೀಸನ್ 11 ರ 10ನೇ ವಾರದ ಕ್ಯಾಪ್ಟನ್ ಆದ ಧನ್ರಾಜಾ , ಕ್ಯಾಪ್ಟಿನ್ಸಿ ಟಾಸ್ಕ್ ನಲ್ಲಿ ಆಯ್ತು ದೊಡ್ಡ ಮೋಸ, Eliminated Contestant

Bigg Boss Kannada 11, ಬಿಗ್ ಬಾಸ್ ಸೀಸನ್ 11 ರ 10ನೇ ವಾರದ ಕ್ಯಾಪ್ಟನ್ ಆದ ಧನ್ರಾಜಾ , ಕ್ಯಾಪ್ಟಿನ್ಸಿ ಟಾಸ್ಕ್ ನಲ್ಲಿ ಆಯ್ತು ದೊಡ್ಡ ಮೋಸ, Eliminated Contestant, BBK11

ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಸೀಸನ್ 11 ರ 9 ನೇ ವಾರದ ಕ್ಯಾಪ್ಟನ್ಸಿ ಟಾಸ್ಕ್ ಮುಗಿದಿದ್ದು ಈಗ ಬಿಗ್ ಬಾಸ್ 10 ನೆ ವಾರದ ಹೊಸ ಕ್ಯಾಪ್ಟನ್ ಆಗಿ ಧನ್ರಾಜ್ ಅವರು ಆಯ್ಕೆ ಆಗಿರುತ್ತಾರೆ, ಹೌದು ಈ ವಾರದ ಬಿಗ್ ಬಾಸ್ ಸಾಮ್ರಾಜ್ಯದಲ್ಲಿ ಮಂಜು ಮಹಾರಾಜ ಹಾಗೂ ಮೋಕ್ಷಿತಾ ಯುವರಾಣಿ ಆಗಿದ್ದು, ಇವರು ಎರಡು ತಂಡಗಳಾಗಿ ಸಹ ವಿಭಜನೆ ಮಾಡಲಾಗಿತ್ತು .ಅದರಲ್ಲಿ ಮಂಜು ತಂಡದಲ್ಲಿ ಗೌತಮಿ, ತ್ರಿವಿಕ್ರಮ್, ಐಶ್ವರ್ಯ, ಗೋಲ್ಡ್ ಸುರೇಶ್ , ಭವ್ಯ, ಧನ್ರಾಜಾ ಅವರು ಇದ್ದು ಮೋಕ್ಷಿತಾ ಅವರ ತಂಡದಲ್ಲಿ ರಜತ್, ಶೋಭಾ ಶೆಟ್ಟಿ, ಹನುಮಂತ, ಚೈತ್ರ, ಶಿಶಿರ್ ಅವರು ಇದ್ದು , ಬಿಗ್ ಬಾಸ್ ನೀಡಿದ ಮೊದಲ ಟಾಸ್ಕ್ ನಲ್ಲಿ ಉಸ್ತುವರಿಗಳ ಹಾಗೂ ಮನೆಯ ಸದಸ್ಯರ ಬೇಜವಾಬ್ದಾರಿ ಇಂದ ಮಣ್ಣಿನ ಅಸ್ತ್ರ ತಯಾರಿಸುವ ಟಾಸ್ಕ್ ಅನ್ನ ರದ್ದು ಪಡಿಸಲಾಗಿತ್ತು . ಇದರಿಂದಾಗಿ ಆಟದ ಬೆಲೆ ಎಲ್ಲರಿಗೂ ತಿಳಿಯಲಿ ಎನ್ನುವ ಕಾರಣಕ್ಕಾಗಿ ಬಿಗ್ ಬಾಸ್ ಮಹಾರಾಜ ಮಂಜಣ್ಣ ಹಾಗೂ ಯುವರಾಣಿ ಮೋಕ್ಷಿತಾ ಗೆ ತಮ್ಮ ವಿರೋಧಿ ತಂಡದಿಂದ ಒಬ್ಬ ರನ್ನ ಕ್ಯಾಪ್ಟನ್ಸಿ ಟಾಸ್ಕ್ ನಿಂದ ಹೊರ ಇಡಬೇಕು ಎನ್ನುವ ಆದೇಶವನ್ನ ನೀಡುತ್ತಾರೆ ಈ ಬಳಿಕ ಮಂಜು ಅವರು ರಜತ್ ಅವರನ್ನ ಕ್ಯಾಪ್ಟನ್ಸಿ ಟಾಸ್ಕ್ ನಿಂದ ಹೊರ ಇಡುತ್ತಾರೆ ಹಾಗೆ ಮೋಕ್ಷಿತಾ ಅವರು ತ್ರಿವಿಕ್ರಮ್ ಅವರನ್ನ ಕ್ಯಾಪ್ಟನ್ಸಿ ಟಾಸ್ಕ್ ನಿಂದ ಹೊರ ಇಡುತ್ತಾರೆ ..ಈ ನಂತರ ಬಿಗ್ ಬಾಸ್ ಎರಡು ತಂಡಕ್ಕೂ ಮತ್ತೊಂದು ಟಾಸ್ಕ್ ನೀಡುತ್ತಾರೆ ಅದುವೇ ತಮ್ಮ ಮಹಾರಾಜ ಹಾಗೂ ಯುವರಣಿಯನ್ನ ಬಂಧನದಿಂದ ಬಿಡಿಸಿಕೊಳ್ಳುವುದು ಈ ಟಾಸ್ಕ್ ನಲ್ಲಿ ಮಂಜು ಅವರ ತಂಡ ಟಾಸ್ಕ್ ಗೆದ್ದು ಕ್ಯಾಪ್ಟನ್ಸಿ ಟಾಸ್ಕ್ ಗೆ ಆಯ್ಕೆಯಾಗುತ್ತಾರೆ.

ಇನ್ನು ಬಿಗ್ ಬಾಸ್ ನ ಒಂಬತ್ತನೇ ವಾರ ಆರಂಭವಾಗಿದ್ದು, ಒಂಬತ್ತನೇ ವಾರದಲ್ಲಿ ಯಾವೆಲ್ಲ ಸ್ಪರ್ಧಿಗಳು ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ ಎಂದು ನೋಡುವುದಾದರೆ.

ಬಿಗ್ ಬಾಸ್ 11ರ 9ನೇ ವಾರ ನಾಮಿನೇಟ್ ಆದ ಸ್ಪರ್ಧಿಗಳು: 

ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಿ
VoteResults
×
ಕ್ಯಾಪ್ಟನ್ಸಿ ಟಾಸ್ಕ್ :

ಮಂಜು ಅವರ ಟೀಮ್ ನಕ್ಷೆಯನ್ನ ಜೋಡಿಸಿ ನಕ್ಷೆಯಲ್ಲಿರುವ ಸ್ಥಳದಲ್ಲಿರುವ ಕೀಲಿಯನ್ನ ಹುಡುಕಿ ಬಂಧನದಲ್ಲಿದ್ದ ಮಹಾರಾಜ ಮಂಜು ಅವರನ್ನ ಮೊದಲು ಬಚಾವ್ ಮಾಡುವ ಮೂಲಕ ಮಂಜು ಅವರ ತಂಡ ಕ್ಯಾಪ್ಟನ್ಸಿ ಟಾಸ್ಕ್ ಗೆ ಆಯ್ಕೆ ಆಗುತ್ತಾರೆ. ಹೌದು ಮಂಜು ಟೀಮ್ ನಲ್ಲಿದ್ದ ಗೌತಮಿ, ಐಶ್ವರ್ಯ, ಧನ್ರಾಜ್ , ಭವ್ಯ , ಮಂಜು, ಹಾಗೂ ಗೋಲ್ಡ್ ಸುರೇಶ್ ಈ 6 ಜನ ಕ್ಯಾಪ್ಟನ್ಸಿ ಟಾಸ್ಕ್ ಗೆ ಆಯ್ಕೆ ಆಗಿರುತ್ತಾರೆ, ಇನ್ನು ಬಿಗ್ ಬಾಸ್ ನೀಡಿದ್ದ ಕ್ಯಾಪ್ಟನ್ಸಿ ಟಾಸ್ಕ್ ಪ್ರಕಾರ ಈ 6 ಸದಸ್ಯರ ಡಬ್ಬಿಯಲ್ಲಿ ಯಾರ ಡಬ್ಬಿಯಲ್ಲಿ ನೀರು ಕಡಿಮೆ ಇರುತ್ತದೋ ಆ ಸದಸ್ಯ ಈ ವಾರದ ಕ್ಯಾಪ್ಟನ್ ಆಗಿ ಆಯ್ಕೆ ಆಗುತ್ತಾರೆ ಎಂದು ಹೇಳಿದ್ದರು, ಇನ್ನು ಉಳಿದ ಸದಸ್ಯರು ತಮಗೆ ಈ ವಾರ ಯಾರನ್ನು ಕ್ಯಾಪ್ಟನ್ ಆಗಿ ನೋಡಲು ಇಸ್ಟ ಇಲ್ಲವೋ ಆ ಸದಸ್ಯನ ಡಬ್ಬಿ ಯಲ್ಲಿ ನೀರು ತುಂಬಿಸುವ ಮೂಲಕ ಆ ಸದಸ್ಯರನ್ನ ಕ್ಯಾಪ್ಟನ್ಸಿ ಟಾಸ್ಕ್ ನಿಂದ ಹೊರ ಇಡಬೇಕು , ಅದೇ ರೀತಿ ಎಲ್ಲರೂ ಸೇರಿ ಮೊದಲಿಗೆ ಗೌತಮಿ ಅವರನ್ನ ಟಾಸ್ಕ್ ನಿಂದ ಹೊರ ಹಾಕುತ್ತಾರೆ ಇದೆ ರೀತಿ ಮಂಜು, ಭವ್ಯ, ಐಶ್ವರ್ಯ, ಹಾಗೂ ಗೋಲ್ಡ್ ಸುರೇಶ್ ಅವರನ್ನ ಕ್ಯಾಪ್ಟನ್ಸಿ ಟಾಸ್ಕ್ ನಿಂದ ಹೊರ ಹಾಕಿದ ಬಳಿಕ ಧನ್ರಾಜ್ ಡಬ್ಬಿಯಲ್ಲಿ ಕಡಿಮೆ ನೀರು ಇರುವುದರಿಂದ ಧನ್ರಾಜ್ ಅವರು ಬಿಗ್ ಬಾಸ್ ಸೀಸನ್ 11 ರ 10 ನೇ ವಾರದ ಕ್ಯಾಪ್ಟನ್ ಆಗುತ್ತಾರೆ, ಧನ್ರಾಜ್ ಅವರು ಕ್ಯಾಪ್ಟನ್ ಆಗಬೇಕು ಎನ್ನುವ ಕಾರಣಕ್ಕಾಗಿ ಹನುಮಂತ ಅವರು ತುಂಬಾನೇ ಕಷ್ಟ ಪಟ್ಟು ಆಡಿರುತ್ತಾರೆ

ಕ್ಯಾಪ್ಟನ್ ಧನ್ರಾಜ್ :

ಬಿಗ್ ಬಾಸ್ ಸೀಸನ್ 11 ರ 10 ನೇ ವಾರದ ಕ್ಯಾಪ್ಟನ್ ಧನ್ರಾಜ್ ಅವರು ಆಗಿದ್ದು , ಇಬ್ಬರ ಜಗಳದಲ್ಲಿ ಮೂರನೇ ಬಾರಿಗೆ ಲಾಭ ಎನ್ನುವ ರೀತಿಯಲ್ಲಿ ಮೋಕ್ಷಿತಾ, ಮಂಜು , ಗೌತಮಿ ಜಗಳದಲ್ಲಿ ಎಲ್ಲೋ ಧನ್ರಾಜ್ ಗೆ ಕ್ಯಾಪ್ಟನ್ಸಿ ಟಾಸ್ಕ್ ಗೆಲ್ಲಲು ಸುಲಭ ಆಯ್ತು ಎನ್ನುವುದು ಕೆಲವರ ಅನಿಸಿಕೆ

Recent Post:

9ನೇ ವಾರದ ಕಳಪೆ ಹಾಗೂ ಉತ್ತಮ :

ಈ ವಾರ ಉತ್ತಮ ಹಾಗೂ ಕಳಪೆ ಯಾರು ಎಂದು ನಿರ್ಧರಿಸುವ ಅಧಿಕಾರ ಬಿಗ್ ಹೊಸ ಕ್ಯಾಪ್ಟನ್ ಆಗಿರುವ ಧನ್ರಾಜ್ ಅವರಿಗೆ ನೀಡಿದ್ದು ಉಳಿದ ಮನೆಯ ಸದಸ್ಯರು ಯಾರು ಉತ್ತಮ ಹಾಗೂ ಕಳಪೆ ನೋಡುವಂತಿಲ್ಲ, ಇನ್ನು ಧನ್ರಾಜ್ ಅವರು ಈ ವಾರದ ಕಳಪೆ ಯನ್ನ ಶೋಭಾ ಶೆಟ್ಟಿ ಅವರಿಗೆ ನೀಡಿರುತ್ತಾರೆ. ಹೌದು ಶೋಭಾ ಶೆಟ್ಟಿ ಅವರಿಗೆ ಈ ವಾರದ ಅಷ್ಟೊಂದು ಟಾಸ್ಕ್ ಆಡಲು ಸಿಕ್ಕಿಲ್ಲ ಹಾಗೆ ಆಟದಲ್ಲಿ ಅವರ ಇಂವೊಲಿಮೆಂಟ್ ಅಷ್ಟೊಂದು ಇರಲಿಲ್ಲ ಎನ್ನುವ ಕಾರಣಕ್ಕಾಗಿ ಧನ್ರಾಜ್ ಅವರು ಶೋಭಾ ಶೆಟ್ಟಿ ಅವರಿಗೆ ಕಳಪೆ ಕೊಟ್ಟಿರುತ್ತಾರೆ.ಇನ್ನು ಉತ್ತಮ ವನ್ನ ಧನ್ರಾಜ್ ಅವರು ನೀಡಿರುತ್ತಾರೆ. ಹೌದು

9ನೇ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗುತ್ತಿರುವ ಸ್ಪರ್ಧಿ ಯಾರು.?

9ನೇ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು 7 ಸ್ಪರ್ಧಿಗಳು ನಾಮಿನೇಟ್ ಆಗಿದ್ದು, ನಾಮಿನೇಟ್ ಆದ ತ್ರಿವಿಕ್ರಮ್, ಐಶ್ವರ್ಯ, ಶಶಿರ್, ಚೈತ್ರ ಕುಂದಾಪುರ, ಶೋಭಾ ಶೆಟ್ಟಿ, ಗೋಲ್ಡ್ ಸುರೇಶ್, ಹಾಗೂ ಭವ್ಯ ಈ 7 ಸ್ಪರ್ದಿಗಳಲ್ಲಿ ಯಾರು ಈ ವಾರ ಬಿಗ್ ಬೋಸ್ ಮನೆಯಿಂದ ಹೊರ ಹೋಗಬಹುದು ಎಂದು ನೋಡುವುದಾದರೆ, ಈ ವಾರದ ಐಶ್ವರ್ಯ ಹಾಗೂ ಗೋಲ್ಡ್ ಸುರೇಶ್ ಅವರು ಡೇಂಜರ್ ಜೋನ್ ನಲ್ಲಿ ಇದ್ದು ಈ ಎರಡು ಸ್ಪರ್ಧಿ ಗಳಲ್ಲಿ ಒಬ್ಬರು ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗೋದು ಖಂಡಿತ.

Bigg Boss Kannada 11, ಬಿಗ್ ಬಾಸ್ ಸೀಸನ್ 11 ರ 10ನೇ ವಾರದ ಕ್ಯಾಪ್ಟನ್ ಆದ ಧನ್ರಾಜಾ , ಕ್ಯಾಪ್ಟಿನ್ಸಿ ಟಾಸ್ಕ್ ನಲ್ಲಿ ಆಯ್ತು ದೊಡ್ಡ ಮೋಸ, Eliminated Contestant, BBK11

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.
ಧನ್ಯವಾದಗಳು..!

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment