ನಮಸ್ಕಾರ ಸ್ನೇಹಿತರೇ, ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 11ರ ಐದು ವಾರಗಳು ಮುಗಿದಿದ್ದು, ಇದೀಗ ಆರನೇ ವಾರಕ್ಕೆ ಕಾಲಿಟ್ಟಿದೆ. ಇನ್ನು ಐದನೇ ವಾರದಲ್ಲಿ ಬಿಗ್ ಬಾಸ್ ಮನೆಯಿಂದ ತುಕಲಿ ಸಂತುರವರ ಪತ್ನಿ ಮಾನಸರವರು ಎಲಿಮಿನೇಟ್ ಆಗಿ ಆಚೆ ಬಂದಿರುತ್ತಾರೆ. ಹೌದು ಬಿಗ್ ಬಾಸ್ ಸೀಸನ್ 11 ರ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ತುಕಾಲಿ ಮಾನಸ ಅವರು ಈಗ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದು, ಬಿಗ್ ಬಾಸ್ ಮನೆಯಿಂದ ಹೊರಬಂದ ಮಾನಸ ಅವರಿಗೆ ಬಿಗ್ ಬಾಸ್ ಮನೆಯಿಂದ ಎಷ್ಟು ಸಂಭಾವನೆ ಸಿಕ್ಕಿದೆ ಎನ್ನುವ ಕುತೂಹಲ ಎಲ್ಲರಿಗೂ ಇರಬಹುದು, ಹೌದು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಪ್ರತಿ ಸ್ಪರ್ಧಿ ಗೆ ವಾರಕ್ಕೆ ಇಂತಿಷ್ಟು ಸಂಭಾವನೆ ಎಂದೂ ಮೊದಲೆ ನಿಗದಿ ಪಡಿಸಿರಲಾಗುರುತ್ತದೆ. ಅದೇ ರೀತಿ ತುಕಾಲಿ ಮಾನಸ ಅವರಿಗೂ ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಬಾರಿ ಮೊತ್ತದ ಸಂಭಾವನೆ ಸಿಕ್ಕಿದ್ದು, ಅವರಿಗೆ ಎಷ್ಟು ಸಂಭಾವನೆ ಸಿಕ್ಕಿದೆ ಎನ್ನುವುದನ್ನ ತಿಳಿಯೋಣ ಬನ್ನಿ.
Bigg Boss Kannada 11, Bigg Boss 11 Eliminated Contestant Manasa Salary, BBK11, Contestants Salary Details, Manasa Tukali Santu
ಬಿಗ್ ಬಾಸ್ ಸೀಸನ್ 11 ಕನ್ನಡ:
ಬಿಗ್ ಬಾಸ್ ಸೀಸನ್ 11 ರ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ತುಕಾಲಿ ಮಾನಸ ಅವರು ಈಗ ಒಟ್ಟು 5 ವಾರ ಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದು ಇಗ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ, ಹೌದು ಬಿಗ್ ಬಾಸ್ ಮನೆಯಲ್ಲಿರುವಷ್ಟು ಸಮಯ ಇವರು ಜಗಳ ಹಾಗೂ ತಮ್ಮ ಮಾತಿನಿಂದಾಗಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು, ತಮ್ಮದಲ್ಲದ ವಿಷಯಕ್ಕೆ ಮೂಗು ತೂರಿಸಿಕೊಂಡು ಹೋಗುತ್ತಿದ್ದರು. ಇದರಿಂದಾಗಿ ಹೆಚ್ಚಾಗಿ ಟ್ರೋಲ್ ಸಹ ಆಗುತ್ತಿದ್ದರು. ಹೌದು ಸೋಶಿಯಲ್ ಮೀಡಿಯಾದಲ್ಲಿ ಎಲ್ಲಿ ನೋಡಿದರೂ ಮಾನಸ ಅವರು ಬಿಗ್ ಬಾಸ್ ಮನೆಯಿಂದ ಹೊರ ಬರಬೇಕು ಎಂದುಕೊಳ್ಳುತ್ತಿದ್ದರು. ಅದೇ ರೀತಿ ಈಗ ಮಾನಸ ಅವರು 5 ನೇ ವಾರಕ್ಕೆ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ.
ತುಕಾಲಿ ಮಾನಸ Manasa Tukali Santu:
ಬಿಗ್ ಬಾಸ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದ ಮಾನಸ ಅವರು ಇದಕ್ಕೂ ಮೊದಲು ಜೋಡಿ No 1 ಎನ್ನುವ ಶೋ ನಲ್ಲಿ ಸಹ ಕಾಣಿಸಿಕೊಂಡಿದ್ದರು ಅಷ್ಟೇ ಅಲ್ಲದೆ ಗಿಚ್ಚಿ ಗಿಲಿ ಗಿಲಿ ಸೀಸನ್ 3 ನಲ್ಲಿ ಸ್ಪರ್ಧಿ ಯಾಗಿ ಸಹ ಭಾಗವಹಿಸಿದ್ದ ಇವರು, ಗಿಚ್ಚಿ ಗಿಲಿ ಗಿಲಿ ಸೀಸನ್ 3 ರ ರನ್ನರ್ ಅಫ್ ಸಹ ಆಗಿರುತ್ತಾರೆ , ಇನ್ನು ನಮಗೆಲ್ಲ ತಿಳಿದಿರುವ ಹಾಗೆ ಇವರು ಕಾಮಿಡಿ ಕಿಲಾಡಿಗಳು ಖ್ಯಾತಿಯ ತುಕಾಲಿ ಸಂತೂ ಅವರ ಪತ್ನಿ ಆಗಿರುತ್ತಾರೆ. ಇದರಿಂದ ಮಾನಸ ಅವರಿಗೆ ತುಕಾಲಿ ಮಾನಸ ಎನ್ನುವ ಹೆಸರು ಬಂದಿದ್ದು. ಇನ್ನು ಮಾನಸ ಅವರು ಮೂಲತಃ ಹಾಸನದವರಾಗಿದ್ದು, ಇವರು 2020 ರಲ್ಲಿ ತುಕಾಲಿ ಸಂತು ಅವರನ್ನ ಮದುವೆಯಾಗುತ್ತಾರೆ, ಇವರಿಬ್ಬರದ್ದು ಅರೇಂಜ್ ಮ್ಯಾರೇಜ್, ಸಂತು ಅವರು ಹುಡುಗಿ ನೋಡಲು ಹೋದಾಗ ಅವರು ದಪ್ಪ ಇದ್ದಾರೆ ಚೆನ್ನಾಗಿಲ್ಲ ಎಂದು ಮಾನಸ ಅವರನ್ನ ರಿಜೆಕ್ಟ್ ಮಾಡಿದ್ದರಂತೆ, ಆದರೆ 6 ತಿಂಗಳ ನಂತರ ಮತ್ತೆ ಬಂದು ಒಪ್ಪಿ ಇವರಿಬ್ಬರ ಮದುವೆ ಆಗಿತ್ತು.
Recent Post:
Bigg Boss Kannada 6th Week Nomination, Bigg Boss Season 11 Voting In Online, BBK11
Vishwakarma Scheme Update, ಸ್ವಂತ ಉದ್ಯಮ ಆರಂಭಿಸುವ Vishwakarna Yojane ಅರ್ಜಿ ಸಲ್ಲಿಸಿ, Government Scheme Update Kannada, Government Free Scheme
ಬಿಗ್ ಬಾಸ್ ಮನೆಯಿಂದ ಸಿಕ್ಕ ಸಂಭಾವನೆ Bigg Boss Contestants Salary:
5 ನೇ ವಾರಕ್ಕೆ ಬಿಗ್ ಬಾಸ್ ಮನೆಯಿಂದ ಹೊರ ಬಂದ ತುಕಾಲಿ ಮಾನಸ ಅವರಿಗೆ ಬಿಗ್ ಬಾಸ್ ಮನೆಯಿಂದ ಬಾರಿ ಮೊತ್ತದ ಸಂಭಾವನೆ ಸಿಕ್ಕಿರುತ್ತದೆ, ಹೌದು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಪ್ರತಿ ಸ್ಪರ್ದಿಗೂ ಅವರ ಪಾಪ್ಯುಲಾರಿಟಿ ಆದಾರದ ಮೇಲೆ ಹಾಗೂ ಅದಕ್ಕೆ ತಕ್ಕ ಹಾಗೆ ಸಂಭಾವನೆ ನೀಡಲಾಗುತ್ತದೆ. ಇನ್ನು ಆ ಸ್ಪರ್ಧಿ ಯಿಂದ TRP ಹೆಚ್ಚಾದಲ್ಲಿ ಹಾಗೂ ಸ್ಪಾನ್ಸರ್ ಗಳು ಸ್ಪಾನ್ಸರ್ ಮಾಡಿದ ಆಟದಲ್ಲಿ ಗೆದ್ದ ಹಣವನ್ನ ಸಹ ಆ ಸ್ಪರ್ಧಿಗೆ ನೀಡಲಾಗುತ್ತದೆ. ಅದೇ ರೀತಿ ಈಗ ಬಿಗ್ ಬಾಸ್ ಮನೆಯಲ್ಲಿ 5 ವಾರಗಳ ಕಾಲ ಇದ್ದು ಹೊರ ಬಂದಿರುವ ಮಾನಸ ಅವರಿಗೆ ಬಿಗ್ ಬಾಸ್ ಮನೆಯಿಂದ 5 ಲಕ್ಷ ರೂಪಾಯಿ ಸಂಭಾವನೆ ಸಿಕ್ಕಿರುತ್ತದೆ. ಇನ್ನು ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಸ್ಟೇಜ್ ಮೇಲೆ ಕಿಚ್ಚ ಸುದೀಪ ಅವರು ಬಿಗ್ ಬಾಸ್ ಸ್ಪಾನ್ಸರ್ ಗಳಾದ ಶ್ರೀ ಕೃಷ್ಣ ಹಳ್ಳಿ ತುಪ್ಪ ಅವರ ಕಡೆಯಿಂದ ಮಾನಸ ಅವರಿಗೆ 1 ಲಕ್ಷ ರೂಪಾಯಿ ಕ್ಯಾಶ್ ಪ್ರೈಸ್ ಅನ್ನ ನೀಡಿರುತ್ತಾರೆ. ಹಾಗೂ ಸಂಗೀತ ಮೊಬೈಲ್ಸ್ ಅವರ ಕಡೆಯಿಂದ 50,000 ರೂಪಾಯಿ ಬೆಲೆಬಾಳುವ ಗಿಫ್ಟ್ ವೌಚರ್ ಮತ್ತು ಎಕೊಪ್ಲಾನೆಟ್ ಎಲಿವೇಟರ್ಸ್ ( Ecoplanet Elevators ) ಕಡೆಯಿಂದ 50,000 ರೂಪಾಯಿ ಕ್ಯಾಶ್ ಪ್ರೈಸ್ ಸಿಕ್ಕಿರುತ್ತದೆ ಒಟ್ಟು ಮಾನಸ ಅವರಿಗೆ ಬಿಗ್ ಬಾಸ್ ವತಿಯಿಂದ 6,50,000 ರೂಪಾಯಿಗಳ ಕ್ಯಾಶ್ ಹಾಗೂ 50,000 ರೂಪಾಯಿ ಗಳ ಗಿಫ್ಟ್ ವೌಚರ ಸಿಕ್ಕಿರುತ್ತದೆ. ಗಿಫ್ಟ್ ವೌಚೆರ್ ಉಪಯೋಗಿಸಿಕೊಂಡು ಮಾನಸ ಅವರು ಸಂಗೀತಾ ಮೊಬೈಲ್ ನಲ್ಲಿ ಯಾವುದೇ 50,000 ಬೆಲೆಬಾಳುವ ವಸ್ತು ವನ್ನು ಖರೀದಿಸಬಹುದಾಗಿರುತ್ತದೆ.
ಇದು ಎಲಿಮಿನೇಟ್ ಆಗಿ ಬಂದ ಮನಸರವರಿಗೆ ಸಿಕ್ಕ ಸಂಭಾವನೆ ಆಗಿರುತ್ತದೆ. ಇನ್ನು ಬಿಗ್ ಬಾಸ್ ವಿನ್ನರ್ ಗೆ ಎಷ್ಟು ಸಂಭಾವನೆ ಸಿಗಬಹುದು ಹಾಗೂ ಯಾವೆಲ್ಲಾ ಸ್ಪೋನ್ಸರ್ ಗಳಿಂದ ಎಷ್ಟು ಸಂಭಾವನೆ ಸಿಗಬಹುದು ಎಂದು ನಿಮ್ಮ ಅಭಿಪ್ರಾಯ ಕಾಮೆಂಟ್ ನಲ್ಲಿ ತಿಳಿಸಿ.
ಈ ಸಲದ ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಯಾರು ಎನ್ನುವುದನ್ನ ಕಮೆಂಟ್ ಮಾಡಿ ತಿಳಿಸಿ.
Bigg Boss Kannada 11, Bigg Boss 11 Eliminated Contestant Manasa Salary, BBK11, Contestants Salary Details, Manasa Tukali Santu