ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿದಿದ್ದು, ಇದೀಗ ಅಂತ್ಯ ಕಂಡಿದೆ. ಇನ್ನು ಈ ಸೀಸನ್ ನ ವಿನ್ನರ್ ಆಗಿ ಹನುಮಂತ ಆಯ್ಕೆಯಾಗಿದ್ದರೆ. ರನ್ನರ್ ಅಪ್ ಆಗಿ ತ್ರಿವಿಕ್ರಮ್ ಆಯ್ಕೆಯಾಗಿದ್ದರೆ. ಇನ್ನು ಕಿಚ್ಚ ಸುದೀಪ್ ರವರು 11 ಸೀಸನ್ ಗಳನ್ನ ನಿರೂಪಕರಾಗಿ ಬಿಗ್ ಬಾಸ್ ನಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಇನ್ನು ಮುಂದಿನ ಸೀಸನ್ ನ ಹೊಸ್ಟ್ ಯಾರಾಗಲಿದ್ದಾರೆ ಎನ್ನುವ ಚರ್ಚೆ ಎಲ್ಲೆಡೆ ನಡೆಯುತ್ತಿದೆ. ಯಾರು ಮುಂದಿನ ಬಿಗ್ ಬಾಸ್ ನಿರೂಪಣೆ ಯಾರು ನಡೆದುಕೊಡುತ್ತಾರೆ ಎನ್ನುವುದು ಇದೀಗ ನೋಡೋಣ.
ಬಿಗ್ ಬಾಸ್ ಕನ್ನಡ 12 ನಿರೂಪಣೆ ಮಾಡೋದು ಯಾರು? Bigg Boss Kannada 12th Season Host, ಕಲರ್ಸ್ ಕನ್ನಡ ಬಿಟ್ಟು ಕೊಟ್ಟ ಸುಳಿವೇನು?, BBK12, Bigg Boss Kannada Season 12 Update
ಬಿಗ್ ಬಾಸ್ ಸೀಸನ್ 12ನೇ ನಿರೂಪಣೆ ಯಾರು ಮಾಡ್ತಾರೆ.
ನಿಮ್ಮ ಪ್ರಕಾರ ಯಾರು ಮುಂದಿನ ಬಿಗ್ ಬಾಸ್ ಕನ್ನಡ ಸೀಸನ್ ನ ಹೋಸ್ಟ್ ಮಾಡಬೇಕು ಎನ್ನುವುದನ್ನ ನಿಮ್ಮ ಅಭಿಪ್ರಾಯ ತಿಳಿಸಿ.
ಬಿಗ್ ಬಾಸ್ ಸೀಸನ್ 11 ರಲ್ಲಿ ವೀಕ್ಷಕರು ಅಂದುಕೊಂಡಂತೆ ಹನುಮಂತ ಗೆದ್ದು ಬೀಗಿದ್ದಾನೆ. ಇತ್ತ ತ್ರಿವಿಕ್ರಮ್ ಅಭಿಮಾನಿಗಳಿಗೆ ಬೇಸರ ಆಗಿದ್ದರೂ, ರನ್ನರ್ ಅಪ್ ಆಗಿದ್ದಕ್ಕೆ ಖುಷಿಯಾಗಿದ್ದಾರೆ. ಎಲ್ಲರು ಖುಷಿ ಖುಷಿಯಾಗಿರುವಾಗಲೇ ಕಿಚ್ಚ ಸುದೀಪ್ ಅಭಿಮಾನಿಗಳು ಮಾತ್ರ ಬೇಸರದಲ್ಲಿದ್ದಾರೆ. ಅದಕ್ಕೇನು ಕಾರಣ ಎನೆನ್ನುವುದು ಪ್ರತ್ಯೇಕವಾಗಿ ಹೇಳಬೇಕಿಲ್ಲ.
ಹೌದು ಬಿಗ್ ಬಾಸ್ ಕನ್ನಡ ಸೀಸನ್ 11 ರ ವರೆಗೆ ಕಿಚ್ಚ ಸುದೀಪ್ ನಿರೂಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇನ್ನು ಮುಂದಿನ ಸೀಸನ್ ನಲ್ಲಿ ನಿರೂಪಣೆ ಮಾಡುವುದಿಲ್ಲ ಎನ್ನುವ ಮಾತುಗಳು ಕೇಳಿಬಂದಿವೆ. ಇನ್ನು ಮುಂದೆ ಕಿಚ್ಚ ಸುದೀಪ್ ಬಿಗ್ ಬಾಸ್ ನಿರೂಪಣೆ ಮಾಡುವುದು ಇದೇ ಕೊನೆ ಎಂದು ಈಗಾಗಲೇ ಹೇಳಿದ್ದಾರೆ. ಶೋ ಮುಗಿಯುವುದಕ್ಕೂ ಮುನ್ನವೇ ಮತ್ತೊಮ್ಮೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಒಂದನ್ನ ಅಪ್ಲೋಡ್ ಮಾಡಿದ್ದರು. ಇಷ್ಟೆಲ್ಲ ಹೇಳಿದ ಮೇಲೆ ಮತ್ತೆ ಬಿಗ್ ಬಾಸ್ ನಿರೂಪಣೆ ಮಾಡುವುದು ಅನುಮಾನ ಅನ್ನೋದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ಕಿಚ್ಚ ಸುದೀಪ್ ರವರ ಅಭಿಮಾನಿಗಳು ಸ್ವಲ್ಪ ಬೇಸರವನ್ನು ವ್ಯಕ್ತ ಪಡಿಸುತ್ತಿದ್ದಾರೆ.
Bigg Boss season 12 ರ ನಿರೂಪಣೆ?
ಇದೀಗ ಕಲರ್ಸ್ ಕನ್ನಡ ಫಿನಾಲೆಯಲ್ಲಿದ್ದ ಮೊದಲ ಮೂವರು ಸ್ಪರ್ಧಿಗಳನ್ನು ಇಟ್ಟುಕೊಂಡು ಒಂದು ಪತ್ರಿಕಾಗೋಷ್ಠಿಯನ್ನು ನಡೆಸಲಾಗಿತ್ತು. ಅದರಲ್ಲಿ ಮುಂದಿನ ಸೀಸನ್‌ಗೆ ಯಾರು ಹೋಸ್ಟ್ ಅನ್ನೋ ಚಿಕ್ಕದೊಂದು ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ. ಕಿಚ್ಚ ಸುದೀಪ್ ಬಿಟ್ಟು ಬಿಗ್ ಬಾಸ್ ವೇದಿಕೆ ಮೇಲೆ ಮತ್ತೆ ಇನ್ಯಾರನ್ನು ಊಹಿಸಿಕೊಳ್ಳುವುದಕ್ಕೆ ಸಾಧ್ಯ? ಮುಂದಿನ ಸೀಸನ್ ಬಗ್ಗೆ ಕಲರ್ಸ್ ಕನ್ನಡ ಕೊಟ್ಟಂತಹ ಸುಳಿವು ಎನು? ಅನ್ನುವುದನ್ನ ನೋಡುವುದಾರೆ.
ಕಿಚ್ಚ ಸುದೀಪ್ ಬಿಗ್ ಬಾಸ್‌ನ ಕಳೆದ 11 ಸೀಸನ್‌ಗಳನ್ನು ನಡೆಸಿಕೊಟ್ಟಿದ್ದಾರೆ. ಒಂದು OTT ಸೀಸನ್ ಹಾಗೂ ಒಂದು ಮಿನಿ ಸೀಸನ್ ಗಳನ್ನ ನಡೆಸಿಕೊಟ್ಟಿದ್ದಾರೆ. ಇದೂವರೆಗೂ ಈ ರಿಯಾಲಿಟಿ ಶೋ ನಿರೂಪಣೆಯನ್ನು ಸುದೀಪ್ ಬಿಟ್ಟರೆ ಬೇರೆ ಯಾರನ್ನೂ ನಡೆಸಿಕೊಟ್ಟಿಲ್ಲ. ಕಿರುತೆರೆ ವೀಕ್ಷಕರು ಕೂಡ ಕಿಚ್ಚ ಸುದೀಪ್ ಬಿಟ್ಟು ಬೇರೆ ಯಾರನ್ನೂ ಇದುವರೆಗೆ ಊಹಿಸಿಕೊಂಡಿಲ್ಲ. ಹೀಗಾಗಿ ಕಿಚ್ಚ ಸುದೀಪ್ ಸ್ಥಾನದಲ್ಲಿ ಯಾರು ಬರಬಹುದು? ಅನ್ನುವಂತಹ ಪ್ರಶ್ನೆಗೆ ಅಷ್ಟು ಸುಲಭಕ್ಕೆ ಉತ್ತರ ಸಿಗೋದೂ ಇಲ್ಲ.
Recent Post:
LIC ಯೋಜನೆ ಒಂದು ಸೂಪರ್ ಆಫರ್, ₹71 ಉಳಿತಾಯ ಮಾಡಿದ್ರೆ ಮೆಚ್ಯುರಿಟಿ ನಂತರ ₹48 ಲಕ್ಷ ಸಿಗುತ್ತೆ, New LIC Scheme 2025
ಸೆಂಟ್ರಲ್ ಬ್ಯಾಂಕ್ ನಲ್ಲಿ ಖಾಲಿ ಇರುವ 1000 ಹುದ್ದೆಗಳಿಗೆ ಅರ್ಜಿ ಆಹ್ವಾನ, Central Bank Credit Officer Recruitment 2025, Bank Job Update 2025
ಅಷ್ಟಕ್ಕೂ ಕಿಚ್ಚ ಸುದೀಪ್ ಬಿಗ್ ಬಾಸ್ ನಿರೂಪಣೆ ಮಾಡುವುದಿಲ್ಲ ಅಂತ ಹೇಳುತ್ತಿರುವುದು ಯಾಕೆ?
ಮುಂದಿನ ಸೀಸನ್ ನಿರೂಪಣೆ ಮಾಡೋದು ಯಾರು? ಈ ಎರಡು ಪ್ರಮುಖ ಪ್ರಶ್ನೆಗಳಿಗೆ ಕಲರ್ಸ್ ಕನ್ನಡದ ನಾನ್ ಫಿಕ್ಷನ್ ಹೆಡ್ ಪ್ರಕಾಶ್ ರವರು ಪತ್ರಿಕಾಗೋಷ್ಠಿಯಲ್ಲಿ ಉತ್ತರ ಕೊಟ್ಟಿದ್ದಾರೆ. ಕಿಚ್ಚ ಸುದೀಪ್ ಹತ್ತನೇ ಸೀಸನ್ ಮುಗಿಯುತ್ತಿದ್ದಂತೆ ಸಾಕು ಎಂದು ಕೊಂಡಿದ್ದರು. ಹತ್ತು ಸೀಸನ್ ಸಾಕು. ಕೆಲಸ ಒಂದೇ ತರ ಅನಿಸುತ್ತಿದೆ ಎಂದು ಹೇಳಿದ್ದರಂತೆ. ಆದರೆ, ಕಲರ್ಸ್ ಕನ್ನಡ ತಂಡವೇ ಅವರನ್ನು ಒಪ್ಪಿಸಿ ಸೀಸನ್ 11ಕ್ಕೆ ಕರೆದುಕೊಂಡಿದ್ದಾಗಿ ಸ್ವತಃ ಅವರೇ ಹೇಳಿದ್ದಾರೆ.
ಇನ್ನು ಬಿಗ್ ಬಾಸ್ ಕನ್ನಡ 12ನೇ ಸೀಸನ್‌ಗೆ ಮುಂದಿನ ಹೋಸ್ಟ್ ಯಾರು?
ಈ ಪ್ರಶ್ನೆಗೂ ಉತ್ತರ ಕೊಟ್ಟಿದ್ದಾರೆ. ಅದೇನು ಅಂತ ಕೇಳಿದರೆ ಕಿಚ್ಚ ಸುದೀಪ್ ಫ್ಯಾನ್ಸ್ ಗಳು ಥ್ರಿಲ್ ಆಗುವುದರಲ್ಲಿ ಅನುಮಾನವಿಲ್ಲ. “ಸುದೀಪ್ ಸರ್ ಅನ್ನು ಬಿಟ್ಟು ಬೇರೆ ಯಾರನ್ನಾದರೂ ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಇದೂವರೆಗೂ ಬೇರೆ ಯಾರ ಬಗ್ಗೆನೂ ಯೋಚನೆಯೂ ಮಾಡಿಲ್ಲ. ಅವರನ್ನು ಕನ್ವಿನ್ಸ್ ಮಾಡುವುದಕ್ಕೆ ಪ್ರಯತ್ನ ಮಾಡುತ್ತೇವೆ. ಬಿಗ್ ಬಾಸ್ ಸೀಸನ್ 12ಕ್ಕೆ ಅವರನ್ನು ಕರೆದುಕೊಂಡು ಬರುತ್ತೇವೆ ಎಂದು ಕಲರ್ಸ್ ಕನ್ನಡದ ನಾನ್ ಫಿಕ್ಷನ್ ಹೆಡ್ ಪ್ರಕಾಶ್ ಹೇಳಿದ್ದಾರೆ. ಹೌದು ಕಿಚ್ಚ ಸುದೀಪ್ ಅಷ್ಟು ಸ್ಪಷ್ಟವಾಗಿ ಮಾತಾಡೋರು ಕಾಣಿಸುತ್ತಿಲ್ಲ. ಸ್ಪರ್ಧಿಗಳಿಗೆ ಖಡಕ್ ಆಗಿ ಎಚ್ಚರಿಕೆ ಕೊಡೋರು, ತಪ್ಪನ್ನು ತಿದ್ದಿ ಹೇಳೋರು. ಸ್ಪರ್ಧಿಗಳು ಹಾದಿ ತಪ್ಪಿದಾಗ ಅವರನ್ನು ಸರಿ ದಾರಿಗೆ ತರೋರು, ಸ್ಪರ್ಧಿಗಳನ್ನು ನಗಿಸೋರು ಈ ಎಲ್ಲಾ ಪ್ಯಾಕೇಜ್‌ಗಳು ಒಟ್ಟಿಗೆ ಸಿಗೋದು ಸದ್ಯಕ್ಕಂತೂ ಕಷ್ಟ. ಇವೆಲ್ಲದರ ಮಧ್ಯೆ ಕಿಚ್ಚ ಸುದೀಪ್ ಕನ್ನಡದ ‘ಕೋಟ್ಯಾಧಿಪತಿ’ ಶೋ ನಡೆಸಿಕೊಡುತ್ತಾರೆ ಅನ್ನೋ ಮಾತು ಕೂಡ ಕೇಳಿ ಬರುತ್ತಿದೆ ನಿಮ್ಮ ಪ್ರಕಾರ ಎನು ಆಗುತ್ತೆ ಅಂತ ಪ್ರತಿಯೊಬ್ಬರೂ ಕೂಡ ಕಮೆಂಟ್ ಮಾಡಿ ತಿಳಿಸಿ.
ಬಿಗ್ ಬಾಸ್ ಕನ್ನಡ 12 ನಿರೂಪಣೆ ಮಾಡೋದು ಯಾರು? Bigg Boss Kannada 12th Season Host, ಕಲರ್ಸ್ ಕನ್ನಡ ಬಿಟ್ಟು ಕೊಟ್ಟ ಸುಳಿವೇನು, BBK12, Bigg Boss Kannada Season 12 Update