ನಮಸ್ಕಾರ ಸ್ನೇಹಿತರೇ, ರಾಜ್ಯದಲ್ಲಿ ಲಕ್ಷಾಂತರ ಜನ ಹೊಸ ಬಿಪಿಎಲ್ ರೇಷನ್ ಕಾರ್ಡ್ ಗಾಗಿ ಕಾಯುತ್ತಿದ್ದಾರೆ. ಇನ್ನು ಈ ಬಗ್ಗೆ ಆಹಾರ ಇಲಾಖೆಯಿಂದ ಒಂದು ಮಹತ್ವದ ಆದೇಶ ಒಂದು ಹೊರ ಬಂದಿದೆ.
BPL Ration Card ವಿತರಣೆ, 2.86ಲಕ್ಷ ಹೊಸ ಬಿಪಿಎಲ್ ರೇಷನ್ ಕಾರ್ಡ್ ವಿತರಣೆ, ಆಹಾರ ಇಲಾಖೆಯ ಮಹತ್ವದ ಮಾಹಿತಿ, BBL Ration Card Update 2025
ರಾಜ್ಯದಲ್ಲಿ ಹೊಸ ಬಿಪಿಎಲ್ ಕಾರ್ಡ್ ಗಾಗಿ ಲಕ್ಷಾಂತರ ಜನ ಕಾಯುತ್ತಿದ್ದಾರೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಮಹತ್ವದ ಮಾಹಿತಿ ಪ್ರಕಾರ ಇಲ್ಲಿಯವರೆಗೆ ಸಲ್ಲಿಕೆಯಾದ ಅರ್ಜಿಗಳೆಷ್ಟು? ಅರ್ಹ ಅರ್ಜಿಗಳು ಎಷ್ಟು? ಅರ್ಹರಿಗೆ ಬಿಪಿಎಲ್ ಕಾರ್ಡ್ ವಿತರಣೆ ಯಾವಾಗ ಎಂಬುದರ ಎಲ್ಲಾ ಮಾಹಿತಿಯನ್ನು ಇದೀಗ ನೋಡೋಣ.
ಆಹಾರ ಇಲಾಖೆ ನೀಡಿರುವ ಅರ್ಜಿಗಳ ಮಾಹಿತಿ:
ಆಹಾರ ಇಲಾಖೆ ಮಾಹಿತಿಯ ಪ್ರಕಾರ, ಎಪ್ರಿಲ್ 3 2025 ರ ತನಕ ರಾಜ್ಯಾದ್ಯಂತ 11.36 ಲಕ್ಷ ಹೊಸ ಬಿಪಿಎಲ್ ಕಾರ್ಡ್ ಗಳ ಅರ್ಜಿಗಳು ಸಲ್ಲಿಕೆಯಾಗಿದೆ. ಇನ್ನು ಈ ಪೈಕಿ, 9.18 ಲಕ್ಷ ಅರ್ಜಿ ಸ್ವೀಕೃತಿಗೊಂಡಿದೆ. ಅಂದರೆ ಇವರು ಪ್ರಾಥಮಿಕ ಹಂತದಲ್ಲಿ ಅಂಗೀಕಾರವಾಗಿದೆ. ಇನ್ನು 5.76 ಲಕ್ಷ ಅರ್ಜಿಗಳು ಇನ್ನೂ ಪರಿಶೀಲನಾ ಹಂತದಲ್ಲಿದೆ. ಇವರ ಪಾಲಿತಾಂಶ ಹೊರಬರುವುದಕ್ಕೆ ಇನ್ನು ಸಮಯ ಬೇಕಾಗಿದೆ. ಸರಿಯಾದ ಮಾಹಿತಿ ಇರದೇ ಇರುವುದಕ್ಕೆ, ದಾಖಲೆಗಳ ಅಭಾವ ಅಥವಾ ಅರ್ಹತಾ ಕೊರತೆ ಇತ್ಯಾದಿ ಕಾರಣದಿಂದ 2.24 ಲಕ್ಷ ಅರ್ಜಿಗಳು ಕ್ಯಾನ್ಸಲ್ ಆಗಿದೆ.
ಇನ್ನು ಬಿಪಿಎಲ್ ಕಾರ್ಡ್ ಪಡೆಯುವ ಅರ್ಹತೆ ಇಲ್ಲದ ಕಾರಣದಿಂದ ಅಥವಾ ವೈಯಕ್ತಿಕ ಕಾರಣಗಳಿಂದ 47,000 ಅರ್ಜಿದಾರರು ತಮ್ಮ ಅರ್ಜಿಗಳನ್ನು ಸ್ವಯಂ ಹಿಂಪಡೆದಿದ್ದಾರೆ ಅಂದರೆ ಕ್ಯಾನ್ಸಲ್ ಮಾಡಲಾಗಿದೆ. ಆದ್ದರಿಂದ 2.86 ಲಕ್ಷ ಅರ್ಜಿಗಳು ಸಂಪೂರ್ಣವಾಗಿ ಅರ್ಹ ಎಂದು ಗುರುತಿಸಲಾಗಿದೆ. ಇದರಿಂದಾಗಿ ಬಿಪಿಎಲ್ ಕಾರ್ಡ್ ವಿತರಣೆ ಮಾಡುವ ಕೆಲಸ ಆರಂಭವಾಗಲಿದೆ.
ಹೊಸ ಬಿಪಿಎಲ್ ಕಾರ್ಡ್ ವಿತರಣೆ ಯಾವಾಗ?
ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ.ಎಚ್. ಮುನಿಯಪ್ಪ ಅವರು ಹೊಸ ಬಿಪಿಎಲ್ ಅರ್ಜಿ ಸ್ವೀಕಾರವನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳ ಪರಿಶೀಲನೆ ಪೂರ್ಣಗೊಂಡ ನಂತರವೇ ಮಾತ್ರ ಮುಂದಿನ ಹಂತದ ತೀರ್ಮಾನವನ್ನು ಸರ್ಕಾರ ತೆಗೆದುಕೊಳ್ಳಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
Recent Post:
Pradhan Mantri Shram Yogi Maandhan, ಮೋದಿ ಸರ್ಕಾರದಿಂದ ಸಿಗಲಿದೆ ತಿಂಗಳಿಗೆ 3000 ಪಿಂಚಣಿ, PM-SYM Scheme ಬಂಪರ್ ಯೋಜನೆ
Candence Scholorahip Applicatio 2025-26, ಕ್ಯಾಡೆನ್ಸ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ, 15000 Scholorship for a Student, ವಿದ್ಯಾರ್ಥಿಗಳಿಗೆ ಸಿಗಲಿದೆ 15,000 ವಿದ್ಯಾರ್ಥಿವೇತನ
ಅತೀ ಹೆಚ್ಚು ಅರ್ಜಿ ಸಲ್ಲಿಕೆಯಾದ ಜಿಲ್ಲೆಗಳು:
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗ್ಯಾರಂಟಿ ಯೋಜನೆಗಳನ್ನು ತರಲಾಗುತ್ತದೆ. ಇನ್ನು ಈ ಗ್ಯಾರಂಟೀ ಯೋಜನೆಗಳ ಅನುಷ್ಠಾನಕ್ಕೆ ರೇಷನ್ ಕಾರ್ಡ್ ಬೇಕೆ ಬೇಕು. ರಾಜ್ಯಾದ್ಯಂತ ಲಕ್ಷಾಂತರ ಜನ ಹೊಸ ರೇಷನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಕೆ ಮಾಡುತ್ತಿದ್ದಾರೆ. ಈ ಪೈಕಿ ಬೆಳಗಾವಿ (35,823), ಕಲಬುರ್ಗಿ (32,178), ವಿಜಯಪುರ (21,237), ಬೆಂಗಳೂರು ಗ್ರಾಮಾಂತರ (17,186) ಹಾಗೂ ರಾಯಚೂರು (16,225) ಜಿಲ್ಲೆಗಳಲ್ಲಿ ಅತೀ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ.
ಹೊಸ ಅರ್ಜಿಗಳನ್ನು ಆಹ್ವಾನಿಸುವ ಪ್ರಕ್ರಿಯೆ ನಿಲ್ಲಿಸಲಾಗಿದೆ. ಈಗಾಗಲೇ ಅರ್ಜಿ ಸಲ್ಲಿಸಿರುವ ಅರ್ಜಿದಾರರಲ್ಲಿ ಅರ್ಹತೆ ಪಡೆದವರಿಗೆ ಮೊದಲಿಗೆ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಸರ್ಕಾರದಿಂದ ಮುಂದಿನ ತೀರ್ಮಾನ ಬಂದ ನಂತರ ಮತ್ತೆ ಹೊಸ ಅರ್ಜಿ ಆಹ್ವಾನ ಆರಂಭವಾಗುವ ಸಾಧ್ಯತೆ ಇದೆ.
ಈ ಫಲಾನುಭವಿಗಳಿಗೆ ಮೊದಲಿಗೆ ಕಾರ್ಡ್ ವಿತರಣೆ:
ಸದ್ಯಕ್ಕೆ ಈಗಾಗಲೇ ಸಲ್ಲಿಕೆಯಾಗಿರುವ 11.36 ಲಕ್ಷ ಅರ್ಜಿಗಳ ಪೈಕಿ 2.86 ಲಕ್ಷ ಅರ್ಜಿಗಳು ಅರ್ಹವಾಗಿವೆ. ಮೊದಲಿಗೆ ಈ ಅರ್ಹ ಫಲಾನುಭವಿಗಳಿಗೆ ಕಾರ್ಡ್ ವಿತರಣೆ ಮಾಡಲಿದ್ದು ನಂತರ ಬಾಕಿ ಉಳಿದಿರುವ ಹೊಸ ಅರ್ಜಿ ಪ್ರಕ್ರಿಯೆ ಆರಂಭಿಸುವುದಾಗಿ ಆಹಾರ ಇಲಾಖೆಯಿಂದ ತಿಳಿದುಬಂದಿದೆ.
ಬಿಪಿಎಲ್ ಕಾರ್ಡ್‌ಗಳು ಸಮಾಜದ ದುರ್ಬಲ ವರ್ಗದವರು ಸರ್ಕಾರದ ಸಹಾಯಧನವನ್ನು ಪಡೆಯಲು ನೀಡಿರುವುದಾಗಿರುತ್ತದೆ. ಈ ಹಿನ್ನೆಲೆಯಲ್ಲಿ 11.36 ಲಕ್ಷ ಅರ್ಜಿಗಳ ಸಂಖ್ಯೆ ಸ್ವತಃ ಎಷ್ಟು ಜನರು ಆರ್ಥಿಕವಾಗಿ ಸಂಕಷ್ಟದಲ್ಲಿರುವುದನ್ನು ತೋರಿಸುತ್ತದೆ. ಅರ್ಹ ಬಿಪಿಎಲ್ ಫಲಾನುಭವಿಗಳಿಗೆ ಸೂಕ್ತ ಸಮಯದಲ್ಲಿ ಕಾರ್ಡ್‌ಗಳ ವಿತರಣೆಯಾಗುವ ನಿರೀಕ್ಷೆಯಿದೆ.
ಇನ್ನು ಇದರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಬಂದಲ್ಲಿ ಇನ್ನಷ್ಟು ಮಾಹಿತಿಯನ್ನು ನೀಡುತ್ತೇನೆ.
BPL Ration Card ವಿತರಣೆ, 2.86ಲಕ್ಷ ಹೊಸ ಬಿಪಿಎಲ್ ರೇಷನ್ ಕಾರ್ಡ್ ವಿತರಣೆ, ಆಹಾರ ಇಲಾಖೆಯ ಮಹತ್ವದ ಮಾಹಿತಿ, BBL Ration Card Update 2025, How to apply BPL Ration Card