ನಮಸ್ಕಾರ ಸ್ನೇಹಿತರೇ, Gruhalaxmi Yojane 16ನೇ ಕಂತಿನ ಹಣ ಇನ್ನೇನು ಕೆಲವೇ ದಿನಗಳಲ್ಲಿ ಜಮಾ ಆಗುತ್ತೆ ಅಂತ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವರು ಹೇಳಿದ್ರು. ಆದರೆ ಇನ್ನು ಕೂಡ ಜಮಾ ಆಗಿಲ್ಲ. ಯಾವಾಗ ಜಮಾ ಆಗಲಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಇನ್ನು ತುಂಬಾ ಜನರಿಗೆ 13ನೇ ಕಂತಿನ ಹಣದ ವರೆಗೆ ಮಾತ್ರ ಬಂದಿದೆ. ಇನ್ನು ಕೂಡಾ ಬಾಕಿ ಬರಬೇಕಾದ ಹಣ ಯಾವಾಗ ಬರುತ್ತೆ, ಬಾಕಿ ಕಂತುಗಳನ್ನ ಪಡೆಯಲು ಎನು ಮಾಡಬೇಕು ಎನ್ನುವುದರ ಸಂಪೂರ್ಣ ಮಾಹಿತಿ ಇದೀಗ ತಿಳಿಯೋಣ.
Gruhalaxmi Scheme Update, ಗೃಹಲಕ್ಷ್ಮೀ ಯೋಜನೆ ಎಲ್ಲಾ ಬಾಕಿ ಹಣ ಜಮಾ, 16ನೇ ಕಂತಿನ 2000 ಬಂತು, Congress Guarantee Scheme, Gruhalaxmi Scheme 2000 Credited
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಾವು 5 ಗ್ಯಾರೆಂಟಿ ಯೋಜನೆಗಳನ್ನ ಜಾರಿಗೆ ತರುತ್ತೇವೆ ಅಂತಾ ಹೇಳಿದ್ರು. ಅವುಗಳೆಂದರೆ ಶಕ್ತಿ ಯೋಜನೆ, ಗೃಹಜ್ಯೋತಿ ಯೋಜನೆ, ಗೃಹಲಕ್ಷ್ಮೀ ಯೋಜನೆ, ಯುವನಿಧಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆ. ಈ 5 ಯೋಜನೆಗಳನ್ನ ನಮ್ಮ ಸರ್ಕಾರ ಬಂದ ನಂತರ ಜನರಿಗೆ ನೀಡುತ್ತೇವೆ ಅಂತ ಹೇಳಿದ್ರು. ಇದೀಗ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷಗಳಿಗೂ ಹೆಚ್ಚು ಕಾಲ ಕಳೆದಿವೆ. ಇನ್ನು ಅವರು ಹೇಳಿರುವ ಯೋಜನೆಗಳಲ್ಲಿ ಕೆಲವೊಂದಿಷ್ಟು ಬದಲಾವಣೆಯನ್ನ ಮಾಡಿ ಯೋಜನೆಯನ್ನ ಜನರಿಗೆ ತಲುಪಿಸುತ್ತಿದ್ದಾರೆ.
ಮುಖ್ಯವಾಗಿ ಗೃಹಲಕ್ಷ್ಮೀ ಯೋಜನೆ. ಈ ಯೋಜನೆ ಮೂಲಕ ಮನೆಯ ಯಜಮಾನಿಯ ಖಾತೆಗೆ ಪ್ರತಿ ತಿಂಗಳು 2000 ರೂ ಹಣವನ್ನ ಜಮಾ ಮಾಡಲಾಗುತ್ತಿತ್ತು. ಗೃಹಲಕ್ಷ್ಮೀ ಯೋಜನೆಯಲ್ಲಿ ಇಲ್ಲಿಯವರೇ 14 ಕಂತುಗಳನ್ನ ನೀಡಲಾಗಿತ್ತು. ಅಂದ್ರೆ ಒಟ್ಟಾರೆಯಾಗಿ 28,000 ರೂ ಈ ಯೋಜನೆ ಮೂಲಕ ಜನರಿಗೆ ತಲುಪಿದೆ. ಇನ್ನು ಈ ಯೋಜನೆ ಆರಂಭದ ದಿನಗಳಲ್ಲಿ ಪ್ರತಿ ತಿಂಗಳು ಜಮಾ ಆಗುತ್ತಿತ್ತು. ಆದರೆ ಕೆಲ ತಿಂಗಳುಗಳು ಈ ಯೋಜನೆ ನಿಲ್ಲಿಸಲಾಗಿತ್ತು. ಏಕೆಂದರೆ ಕೆಲ ತಾಂತ್ರಿಕ ಧೋಷಗಳ ಕಾರಣದಿಂದ ಯೋಜನೆ ಹಣವನ್ನ ಫಲಾನುಭವಿಗಳಿಗೆ ನೀಡಲಾಗುತ್ತಿರಲಿಲ್ಲ. ಆದರೆ ಇದರ ಬಗ್ಗೆ ಸ್ಪಷ್ಟಣೆ ಕೊಟ್ಟಂತಹ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಎಲ್ಲಾ ತಾಂತ್ರಿಕ ದೋಷಗಳನ್ನ ಪರಿಹರಿಸಿ, ಗೃಹಲಕ್ಷ್ಮೀ ಯೋಜನೆ ಹಣ ಯಾವಾಗ ಬಿಡುಗಡೆ ಆಗುತ್ತೇ ಎನ್ನುವ ಸ್ಪಷ್ಟನೆಯೊಂದನ್ನ ನೀಡಿದ್ರು. ಇನ್ನು ಕೆಲವರಿಗೆ 15ನೇ ಕಂತಿನ ಹಣದ ವರೆಗೆ ಜಮಾ ಮಾಡಲಾಗಿದೆ. ಅಂದೇ 30,000 ವರೆಗೆ. ಇನ್ನು ಕೆಲವರಿಗೆ 13ನೇ ಕಂತಿನ ತನಕ ಬರಬೇಕಾಗಿದೆ. ಅವರುಗಳಿಗೆ 14, 15 ಹಾಗೂ 16ನೇ ಕಂತು ಬರಬೇಕಾಗಿದೆ. ಇನ್ನೂ e ಹಣಗಳು ಬಿಡುಗಡೆ ಮಾಡುವುದಾಗಿ ಹಾಗೂ ಬಾಕಿ ಉಳಿದಿರುವ ಕಂತಿನ ಹಣದ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವರು ಕೆಲವು ಮಾಹಿತಿಗಳನ್ನ ನೀಡಿದ್ದಾರೆ.
16ನೇ ಕಂತಿನ ಹಣ ಯಾವಾಗ ಬರುತ್ತೆ:
ಸರ್ಕಾರದಿಂದ ಗೃಹಲಕ್ಷ್ಮೀ ಯೋಜನೆ ಹಣ ಕೆಲವರ ಖಾತೆಗಳಿಗೆ ಜಮಾ ಆಗುತ್ತಿದೆ. ಅಂದ್ರೆ 15 ಕಂತುಗಳು ಬಂದಿದೆ. ಒಟ್ಟು 30,000 ವರೆಗೆ ಈ ಯೋಜನೆ ಮೂಲಕ ಬಂದಿದೆ. ಇನ್ನು ಇವರುಗಳಿಗೆ ಬರಬೇಕಾಗಿದ್ದು, 16ನೇ ಕಂತು. ಇದರ ಬಗ್ಗೆ e ಹಿಂದೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವರು ಸ್ಪಷ್ಟನೆಯೊಂದನ್ನ ನೀಡಿದ್ರು. ಜನವರಿ ತಿಂಗಳ 3ನೇ ವಾರ ಬಿಡುಗಡೆ ಆಗಲಿದೆ ಎಂದು, ಆದರೆ ಆ ಹಣ ಇನ್ನು ಕೂಡ ಜಮಾ ಆಗಿಲ್ಲ. ಕೆಲ ತಾಂತ್ರಿಕ ದೋಷಗಳ ಕಾರಣದಿಂದ ಹಣ ಬಿಡುಗಡೆ ಮಾಡಲು ಆಗಿರಲಿಲ್ಲ. ಆದರೆ ಫೆಬ್ರವರಿ 3ನೇ ತಾರೀಖಿನ ನಂತರ ಅಂದ್ರೆ ಫೆಬ್ರವರಿ ಮೊದಲ ವಾರದಂದು ಬಿಡುಗಡೆ ಆಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
Recent Post:
Bigg Boss Kannada 11 Winner, ಬಿಗ್ ಬಾಸ್ ನ ಫಿನಲೇ ವಾರದ ವೋಟಿಂಗ್, Bigg Boss Kannada Finale, BBK11
Government Free Sewing Machine Scheme, ಮಹಿಳೆಯರಿಗೆ ಸಿಗುತ್ತೆ ಸರ್ಕಾರದಿಂದ ಉಚಿತ ಹೊಲಿಗೆ ಯಂತ್ರ, ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ
ಗೃಹಲಕ್ಷ್ಮೀ 14, 15 ಹಾಗೂ 16ನೇ ಕಂತು ಯಾವಾಗ ಬರುತ್ತೆ:
ರಾಜ್ಯದಲ್ಲಿ ಕೆಲವರಿಗೆ 15ನೇ ಕಂತಿನ ವರೆಗೆ ಬಂದರೆ, ಇನ್ನು ಕೆಲವರಿಗೆ 13ನೇ ಕಂತಿನ ವರೆಗೆ ಮಾತ್ರ ಬಿಡುಗಡೆ ಆಗಿದೆ. ಅಂದ್ರೆ 3 ಕಂತುಗಳು, ಒಟ್ಟಾರೆಯಾಗಿ 6,000 ಹಣ ಬಿಡುಗಡೆ ಮಾಡಬೇಕಾಗಿದೆ. ಇನ್ನೂ ಇವರಿಗೆ ಯಾವಾಗ ಹಣ ವರ್ಗಾವಣೆ ಆಗಲಿದೆ ಎನ್ನುವುದನ್ನ ನೋಡುವುದಾದರೆ ಫೆಬ್ರವರಿ 3ನೇ ತಾರೀಖಿನ ನಂತರ 1 ಕಂತು ಹಾಗೂ ಫೆಬ್ರವರಿ 2ನೇ ವಾರದ ನಂತರ 2 ಕಂತು ಒಟ್ಟಿಗೆ ಬಿಡುಗಡೆ ಮಾಡುವುದರ ಬಗ್ಗೆ ಕೆಲ ಮಾಹಿತಿ ಕೇಳಿ ಬಂದಿದೆ. ಅಂದ್ರೆ ಫೆಬ್ರವರಿ ತಿಂಗಳಲ್ಲಿ 3 ಕಂತು ಒಟ್ಟಿಗೆ ವರ್ಗಾವಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಗೃಹಲಕ್ಷ್ಮೀ ಯೋಜನೆ ಹಣ ಬಂದಿಲ್ಲ ಅಂದ್ರೆ ಎನು ಮಾಡೋದು:
ಗೃಹಲಕ್ಷ್ಮೀ ಯೋಜನೆ ಹಣ ಬಂದಿಲ್ಲ ಅಂದ್ರೆ ಯಾವುದೇ ರೀತಿಯಲ್ಲಿ ಮತ್ತೆ ಯೋಜನೆಗೆ ಅರ್ಜಿ ಸಲ್ಲಿಸುವ ಹಾಗಿಲ್ಲ. ಕೆಲವು ಕಡೆಗಳಲ್ಲಿ ಗೃಹಲಕ್ಷ್ಮೀ ಯೋಜನೆ ಹಣ ಪಡೆಯಲು ಹತ್ತಿರದ ಸೈಬರ್ ಸೆಂಟರ್ ಗಳಿಗೆ ಹೋಗಿ ಒಂದು ಅರ್ಜಿ ಸಲ್ಲಿಸಬೇಕು ಎಂದು ಕೆಲ ಫೇಕ್ ನ್ಯೂಸ್ ಗಳು ಹರಿದಾಡುತ್ತಿದೆ. ಆ ರೀತಿಯಲ್ಲಿ ಸರ್ಕಾರ ಎಲ್ಲಿಯೂ ಕೂಡ ಅರ್ಜಿ ಸಲ್ಲಿಸಲು ಹೇಳಿಲ್ಲ. ಕೆಲವು ಕಡೆ ಈ ರೀತಿಯಲ್ಲಿ ಕೆಲ ಸುಳ್ಳು ಸುದ್ದಿಗಳು ಹರಿದಾಡುತ್ತಿದೆ. ಅದ್ದರಿಂದ ಇಂತಹ ಸುದ್ದಿಗಳನ್ನು ನಂಬಬೇಡಿ. ಕೆಲವರು ಈ ರೀತಿಯಲ್ಲಿ ಸುಳ್ಳು ಅರ್ಜಿಯನ್ನು ಸಲ್ಲಿಸುವ ಮೂಲಕ ಹಣ ಸಂಪಾದನೆ ಮಾಡುತ್ತಿದ್ದಾರೆ. ಆದ್ದರಿಂದ ಇಂತಹ ಸುದ್ದಿಗಳನ್ನು ಯಾರು ಕೂಡ ನಂಬಬೇಡಿ.
ಗೃಹಲಕ್ಷ್ಮೀ ಯೋಜನೆ ಹಣ ಇನ್ನು ಬಂದಿಲ್ಲ:
ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳಿಗೆ 15ನೇ ಕಂತಿನ ಹಣದವರೆಗೆ ವರ್ಗಾವಣೆ ಮಾಡಲಾಗಿದೆ. ಆದರೆ ಕೆಲ ತಾಂತ್ರಿಕ ಧೋಷಗಳ ಕಾರಣದಿಂದ ಹಣ ವರ್ಗಾವಣೆ ಆಗಿಲ್ಲ, ಅದುವೇ ಈ ತಿಂಗಳಿನಲ್ಲಿ. ಇದರಿಂದ ನಾವು ಪ್ರತಿಯೊಂದನ್ನೂ ಪರೀಕ್ಷಿಸಿ ಬಿಡುಗಡೆ ಮಾಡುತ್ತಿದ್ದೇವೆ. ಇದರಿಂದ ಹಣ ತಲುಪಲು ಸ್ವಲ್ಪ ಕಾಲ ಹಿಡಿಯುತ್ತದೆ ಎಂದು ಹೇಳಿದ್ದಾರೆ. ಅದ್ದರಿಂದ ಹಣ ಬರುವುದು ಸ್ವಲ್ಪ ಲೇಟ್ ಆಗಬಹುದು. ಆದರೆ ನಾವು ಯೋಜನೆ ಹಣ ನೀಡುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
16ನೇ ಕಂತು ಯಾವಾಗ?
ಗೃಹಲಕ್ಷ್ಮೀ ಯೋಜನೆಯಲ್ಲಿ ಇಲ್ಲಿಯವರೇ 15 ಕಂತುಗಳನ್ನ ನೀಡಲಾಗಿತ್ತು. ಅಂದ್ರೆ ಒಟ್ಟಾರೆಯಾಗಿ 30,000 ರೂ ಈ ಯೋಜನೆ ಮೂಲಕ ಜನರಿಗೆ ತಲುಪಿದೆ. ಇನ್ನು 16ನೇ ಕಂತು ಯಾವಾಗ ಬರುತ್ತದೆ ಎನ್ನುವುದನ್ನ ನೋಡೋದಾದ್ರೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿರುವಂತೆ ನಾವು ಫೆಬ್ರವರಿ ಮೊದಲ ವಾರದಂದು ಬಿಡುಗಡೆ ಮಾಡುತ್ತಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ನಿಮಗೆ ಎಲ್ಲಿಯವರೆಗೆ ಈ ಹಣ ಬಂದಿದೆ ಹಾಗೂ ಯಾವ ತಿಂಗಳ ಕಂತು ಬರಬೇಕು ಎನ್ನುವುದನ್ನ ಕಮೆಂಟ್ ಮಾಡಿ ತಿಳಿಸಿ.
Gruhalaxmi Scheme Update, ಗೃಹಲಕ್ಷ್ಮೀ ಯೋಜನೆ ಎಲ್ಲಾ ಬಾಕಿ ಹಣ ಜಮಾ, 16ನೇ ಕಂತಿನ 2000 ಬಂತು, Congress Guarantee Scheme, Gruhalaxmi Scheme 2000 Credited