ನಮಸ್ಕಾರ ಸ್ನೇಹಿತರೇ,
ಗೃಹಲಕ್ಷ್ಮೀ ಯೋಜನೆಯ 11 ಹಾಗೂ 12ನೇ ಕಂತು ಜಮಾ ಆಗಿದೆ. ಪಾಲನುಭವಿಯ ಖಾತೆಗೆ ಒಟ್ಟಿಗೆ 2 ತಿಂಗಳ ಕಂತು ಅಂದ್ರೆ ₹4,000 ಜಮಾ ಆಗಲಿದೆ. ಹೌದು ಇನ್ನು ನಿಮ್ಮ ಖಾತೆಗೆ ಹಣ ಜಮಾ ಆಗಿಲ್ಲ ಅಂದ್ರೆ ಯಾಕೆ ಜಮಾ ಆಗಿಲ್ಲ ಅನ್ನೋದನ್ನ ಇದರಲ್ಲಿ ಗೊತ್ತಾಗುತ್ತೆ. ಇಲ್ಲಿ ಕೆಲವರ ಖಾತೆಗೆ ಹಣ ಜಮಾ ಆಗಿದ್ರೆ. ಇನ್ನು ಕೆಲವರ ಹಣ ಜಮಾ ಆಗಿಲ್ಲ. ಯಾಕೆ ಜಮಾ ಆಗಿಲ್ಲ ಅನ್ನೋದನ್ನ ನೋಡೋದಾದ್ರೆ,
ಕಾಂಗ್ರೆಸ್ ನ 5 ಗ್ಯಾರಂಟೀ ಯೋಜನೆಗಳಲ್ಲಿ ಗೃಹಲಕ್ಷ್ಮೀ ಯೋಜನೆ ಕೂಡ ಒಂದು. ಈ ಯೋಜನೆಯ ಮೂಲಕ ಮನೆಯ ಯಜಮಾನಿಗೆ ಪ್ರತಿ ತಿಂಗಳು ಅವರವರ ಖಾತೆಗೆ 2000 ಹಣ ಜಮಾ ಆಗಲಿದೆ. ಈ ಯೋಜನೆಯ ಮೂಲಕ ಮನೆ ನಡೆಸಿಕೊಂಡು ಹೋಗುತ್ತಿರುವ ಯಜಮಾನಿಯ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ₹2000ರೂ ಡಿಬಿಟಿ ಮೂಲಕ ವರ್ಗಾವಣೆಯಾಗುತ್ತಿತ್ತು. ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಈ ಯೋಜನೆಯಡಿ ಸುಮಾರು 1.18 ಕೋಟಿ ಮಹಿಳೆಯರು ಹೆಸರು ನೋಂದಾಯಿಸಿ ಕೊಂಡಿದ್ದಾರೆ. ಕಳೆದ 10 ತಿಂಗಳುಗಳಿಂದ ಈ ಯೋಜನೆಯ ಹಣ ಬಹುತೇಕ ಮಹಿಳೆಯರನ್ನು ತಲುಪಿದೆ. ಹೌದು ಇಲ್ಲಿಯವರೆಗೆ ಒಟ್ಟಾರೆ 10 ಕಂತುಗಳು ಅಂದ್ರೆ 20,000 ಅವರ ಖಾತೆಗೆ ಜಮಾ ಆಗಿದೆ.
ಟೈಲರಿಂಗ್ ಉದ್ಯಮ ಸ್ಟಾರ್ಟ್ ಮಾಡುವವರಿಗೆ ಇಲ್ಲಿದೆ ಉತ್ತಮ ಅವಕಾಶ, Government Scheme, ಉಚಿತ ಟೈಲರಿಂಗ್ ತರಬೇತಿ ಜೊತೆಗೆ ಉಚಿತ ಹೊಲಿಗೆ ಯಂತ್ರ, Free Sewing Machine Scheme
ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್, 30,000 ದಿಂದ 50,000 ವರೆಗೆ ಸಿಗಲಿದೆ, Good news For all Karnataka Womens, ಅರ್ಜಿ ಸಲ್ಲಿಸಿದ್ರೆ ಮಾತ್ರ ಸಿಗಲಿದೆ, Government New Scheme.
ಇನ್ನು ಗೃಹಲಕ್ಷ್ಮೀ ಯೋಜನೆ ಜೂನ್ ತಿಂಗಳಿನ 11ನೇ ಕಂತು ಹಾಗೂ ಜುಲೈ ತಿಂಗಳಿನ 12ನೇ ಕಂತಿನ ಹಣ ಇನ್ನು ಸಹ ಮಹಿಳೆಯರ ಖಾತೆಗೆ ಜಮೆಯಾಗಿಲ್ಲ. ರಾಜ್ಯದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣದಿಂದ ಹಣ ಜಮಾ ಆಗಲು ವಿಳಂಬವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಏಪ್ರಿಲ್ ತಿಂಗಳಿನಲ್ಲಿ ಲೋಕಸಭಾ ಚುನಾವಣೆ ನಡೆದು, ಮೇ ತಿಂಗಳಿನಲ್ಲಿ ಫಲಿತಾಂಶ ಸಹ ಹೊರಬಂದಿತು. ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ 11 ಮತ್ತು 12ನೇ ಕಂತಿನ ಹಣ ಬಿಡುಗಡೆ ಆಗುವುದರಲ್ಲಿ ತಡವಾಗಿದೆ ಅಂತಾ ಹೇಳಲಾಗಿದೆ
ಆದರೆ ಇದೀಗ ಗೃಹ ಲಕ್ಷ್ಮೀ ಯೊಜನೆ ಹಣ 2 ಕಂತು ಪಾಲನುಭವಿಗಳಿಗೆ ಜಮಾ ಆಗಿದೆ. ಇನ್ನು ತುಂಬಾ ಜನರ ಖಾತೆಗೆ ಹಣ ಇನ್ನು ಕೂಡ ಜಮಾ ಆಗಿಲ್ಲ. ಯಾಕೆ ಜಮಾ ಆಗಿಲ್ಲ ಅನ್ನೋದನ್ನ ನೋಡೋದಾದ್ರೆ
ಸಚಿವೇ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿರುವಂತೆ ಗೃಹ ಲಕ್ಷ್ಮೀ ಯೋಜನೆಯನ್ನ 3 ಹಂತದಲ್ಲಿ ವರ್ಗಾಹಿಸಲಾಗಿದೆ.
ಮೊದಲ ಹಂತದಲ್ಲಿ ಕೆಲ ಜಿಲ್ಲೆಗಳ ಪಲನುಭವಿಗಳಿಗೆ ಹಣವನ್ನ ನೀಡಲಾಗುತ್ತದೆ.
ಇನ್ನು ಎರಡನೇ ಹಂತದಲ್ಲಿ ಇನ್ನೂ ಕೆಲ ಜಿಲ್ಲೆಗಳ ಪಲನುಭವಿಗಳಿಗೆ ಯೋಜನೆ ಹಣವನ್ನ ನೀಡಲಾಗುತ್ತದೆ.
ಇನ್ನು ಮೂರನೇ ಹಂತದಲ್ಲಿ ಬಾಕಿ ಉಳಿದ ಜಿಲ್ಲೆಗಳ ಪಲನುಭವಿಗಳಿಗೆ ಗೃಹ ಲಕ್ಷ್ಮೀ ಯೋಜನೆಯ ಹಣವನ್ನ ನೀಡಲಾಗುತ್ತದೆ.
ಹೀಗೆ ಮೂರು ಹಂತಗಳಲ್ಲಿ 11 ಹಾಗೂ 12ನೇ ಕಂತನ್ನ ನೀಡಲಾಗುತ್ತಿದೆ. ಇನ್ನು ನಿಮಗೆ ಯೋಜನೆಯ ಹಣ ಬಂದಿದ್ಯೋ ಇಲ್ಲವೊ ಎಂಬುದನ್ನ Comment ಮಾಡಿ ತಿಳಿಸಿ ಹಾಗೂ ನಿಮ್ಮ ಜಿಲ್ಲೆ ಯಾವುದನ್ನ Comment ಮೂಲಕ ತಿಳಿಸಿ.
ಇನ್ನು ಒಂದು ವೇಳೆ ನಿಮ್ಮ ಗೃಹ ಲಕ್ಷ್ಮೀ ಖಾತೆಯಲ್ಲಿ ಯಾವುದಾದರೂ ಸಮಸ್ಯೆ ಇದ್ದಲ್ಲಿ ಯೋಜನೆಯ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.
ಇನ್ನು ಗೃಹ ಲಕ್ಷ್ಮೀ ಯೋಜನೆ ಬಗ್ಗೆ ಇನ್ನಷ್ಟು ಮಾಹಿತಿ ಬೇಕಾದಲ್ಲಿ 1902 ಟೋಲ್ ಫ್ರೀ ನಂಬರ್ ಗೆ ಕರೆ ಮಾಡಿ ಮಾಹಿತಿ ತಿಳಿಯಬಹುದು. ಇನ್ನು 8277000555 or 8147500500 ಈ ಎರಡು whats app number ಗೆ ಮೆಸೇಜ್ ಮಾಡಬಹುದು.
Gruhalaxmi Scheme Update, Government Scheme, Gruhalaxmi Scheme 4000, Congress, Karnataka Government Scheme