ನಮಸ್ಕಾರ ಸ್ನೇಹಿತರೇ, ರಿಲಯನ್ಸ್ ಜಿಯೋ ಇತ್ತೀಚಿಗೆ ಬಿಡುಗಡೆ ಮಾಡಿರುವ ಜಿಯೋ ಕಾಯಿನ್ ಹೆಚ್ಚು ಕುತೂಹಲವನ್ನು ಮೂಡಿಸುತ್ತಿದೆ. ಜಿಯೋ ಕಂಪನಿಯ ಓನರ್ ಆಗಿರುವ ಮುಕೇಶ್ ಅಂಬಾನಿ ಅವರು ಇದನ್ನ ಪರಿಚಯಿಸಲಿದ್ದಾರೆ. ಇದೀಗ ಎಲ್ಲರು ಕೇಳುತ್ತಿರುವುದು ನಾವು ಜಿಯೋ ಕಾಯಿನ್ ಹೇಗೆ earn ಮಾಡುವುದು? ಇನ್ನು ಜಿಯೋ ಕಾಯಿನ್ ನ ಬೆಲೆ ಎಷ್ಟು? ಎಲ್ಲದರ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಸಿಗಲಿದೆ. ಆದ್ದರಿಂದ ಈ ಲೇಖನವನ್ನು ಪೂರ್ತಿಯಾಗಿ ಓದಿ.
How to Earn Jio Coin? 1 ಜಿಯೋ ನಾಣ್ಯದ ಬೆಲೆ ಎಷ್ಟು? ಜಿಯೋ ಕಾಯಿನ್ ಗಳಿಸೋದು ಹೇಗೆ? Mukesh Ambani, JIO COIN EARN 2025
ರಿಲಯನ್ಸ್ ಜಿಯೋ ಇತ್ತೀಚಿಗೆ ಬಿಡುಗಡೆ ಮಾಡಿದ ಜಿಯೋ ಕಾಯಿನ್ ಬಗ್ಗೆ ಎಲ್ಲಡೆ ಚರ್ಚೆ ನಡೆಯುತ್ತಿದೆ. ಇನ್ನು ಕೆಲವರಿಗೆ ಇದರ ಬಗ್ಗೆ ಎಲ್ಲಿಯು ಮಾಹಿತಿ ಗೊತ್ತಿಲ್ಲ.
ಕ್ರಿಪ್ಟೋ ಕರೆನ್ಸಿ ಎನ್ನುವುದು ಡಿಜಿಟಲ್ ಕಾಯಿನ್ ಆಗಿರುತ್ತದೆ. ಇದ್ದಕ್ಕೆ ರೂಪ, ರೇಷೆ ಯಾವುದು ಇರುವುದಿಲ್ಲ. ಇನ್ನು ಇದರ ಮೌಲ್ಯ ಕೆಲವೊಮ್ಮೆ ಎರುತ್ತದೆ ಹಾಗೂ ಕೆಲವೊಮ್ಮೆ ಇಳಿಯುತ್ತದೆ. ಒಂದು ರೀತಿಯಲ್ಲಿ ಷೇರು ಮಾರುಕಟ್ಟೆಯ ತರಹ. ಉದಾಹರಣೆಗೆ ಹೇಳುವುದಾದರೆ ಬಿಟ್ ಕಾಯಿನ್ ಬಗ್ಗೆ ನಿಮಗೂ ಕೂಡ ಗೊತ್ತಿರುತ್ತದೆ. ಇನ್ನು 2022 ರಲ್ಲಿ ಒಂದು ಕಾಯಿನ್ ನ ಮೌಲ್ಯ 13,60,767 ರೂ. ಇತ್ತು. ಆದರೆ ಈಗಿನ ಒಂದು ಕಾಯಿನ್ ನ ದರ 84,12,030 ರೂ. ಆಗಿದೆ. ಅಂದ್ರೆ ಅದರ ದರ 397% ಅಷ್ಟು ಏರಿಕೆ ಆಗಿದೆ. ಅಂದ್ರೆ ಹೂಡಿಕೆ ಮಾಡಿದ 3 ವರ್ಷದಲ್ಲಿ ನೀವು ಮಾಡಿರುವ ಹೂಡಿಕೆ ಹಣದ ಜೊತೆಗೆ 70,51,263 ರೂ. ಸಿಗುತ್ತದೆ. ಇನ್ನು ಈ ರೀತಿಯಲ್ಲಿ ಇದು ಬಿಟ್ ಕಾಯಿನ್ ಒಂದೇ ಅಲ್ಲ. ಅನೇಕ ರೀತಿಯ ಕ್ರಿಪ್ತೋ ಕರೆನ್ಸಿಗಳಿವೆ. ಇದಕ್ಕೆ ರೀತಿಯ ರೂಪ ಇರುವುದಿಲ್ಲ. ಕೇವಲ ಡಿಜಿಟಲ್ ರೂಪದಲ್ಲಿ ಇರುತ್ತದೆ.
ಇದೀಗ ಹೊಸದಾಗಿ ದೇಶೀಯ ಕ್ರಿಪ್ಟೊ ಕರೆನ್ಸಿ ಎನ್ನುವ ರೀತಿಯಲ್ಲಿ ಜಿಯೋ ಸಂಸ್ಥೆಯಿಂದ ಹೊಸ ಕರೆನ್ಸಿ ಕಾಯಿನ್ ಒಂದನ್ನ ತರಲಾಗಿದೆ. ಭಾರತದ ಮೊಬೈಲ್ ಇಂಟರ್ನೆಟ್ ಕ್ಷೇತ್ರವನ್ನು ಪರಿವರ್ತಿಸಿದ ರಿಲಯನ್ಸ್ ಜಿಯೋ ಅಭಿವೃದ್ಧಿಪಡಿಸಿದ ಜಿಯೋ ಕಾಯಿನ್ ಸಾಕಷ್ಟು ಸದ್ದು ಮಾಡುತ್ತಿದೆ. ಇನ್ನು ಜಿಯೋ ಕಾಯಿನ್ ನ ಬೆಲೆ ಎಷ್ಟು ಎನ್ನುವುದನ್ನ ನೋಡೋಣ.
ಜಿಯೋ ಕಾಯಿನ್ ಬೆಲೆ ಎಷ್ಟು?
ಜಿಯೋ ಕಾಯಿನ್ ನ ಅಧಿಕೃತ ಬೆಲೆಯೂ ಇನ್ನು ಕೂಡ ಘೋಷಣೆ ಆಗಿಲ್ಲ. ಆದರೆ ವ್ಯವಹಾರದ ಆಧಾರದ ಮೇಲೆ ಒಂದು ಅಂದಾಜಿನ ಪ್ರಕಾರ ಇದೀಗ ಕೇಳಿಬರುತ್ತಿರುತ್ತಿರುವುದು, ಒಂದು ಜಿಯೋ ಕಾಯಿನ್ ಬೆಲೆ $0.50 ಅಂತಾ ತಿಳಿದುಬರುತ್ತಿದೆ. ಅಂದ್ರೆ ಭಾರತದ ಕರೆನ್ಸಿ ಪ್ರಕಾರ ₹43.30 ಆಗಿರುತ್ತದೆ. ಇದು ಅಧಿಕೃತವಾಗಿ ಇನ್ನು ಕೂಡ ಘೋಷಣೆ ಆಗಿಲ್ಲ. ಇದು ವ್ಯವಹಾರದ ಆಧಾರದ ಮೇಲೆ ಇದು ಕೇಳಿಬರುತ್ತಿದೆ.
ಜಿಯೋ ಕಾಯಿನ್ ಹೇಗೆ Earn ಮಾಡೋದು?
ಭಾರತದ ಡಿಜಿಟಲ್ ಕರೆನ್ಸಿ ಆಗಿರುವ ಜಿಯೋ ಕಾಯಿನ್ ಇನ್ನೇನು ಕೆಲವೇ ದಿನಗಳಲ್ಲಿ ಇದು ರಿಜಿಸ್ಟರ್ ಆಗಲಿದೆ. ಇದು ಭಾರತದ ಡಿಜಿಟಲ್ ಯುಗದಲ್ಲಿ ಹೊಸ ಯುಗವನ್ನೇ ಸೃಷ್ಟಿ ಮಾಡಲಿದೆ. ಯಾವ ರೀತಿ ಜಿಯೋ ಸಿಮ್ ಬಂದಾಗ ಇಂಟರ್ನೆಟ್ ಯುಗದಲ್ಲಿ ಯಾವ ರೀತಿಯ ಕ್ರಾಂತಿ ಉಂಟುಮಾಡಿತ್ತೊ ಅದೇ ರೀತಿಯಲ್ಲಿ ಇದೀಗ ಜಿಯೋ ಕಾಯಿನ್ ಡಿಜಿಟಲ್ ಯುಗದಲ್ಲಿ ಹೊಸದೊಂದು ಕ್ರಾಂತಿ ಉಂಟು ಮಾಡಲು ಹೊರಟಿದೆ. ಇನ್ನು ನೀವು ಜಿಯೋ ಕಾಯಿನ್ ಹೇಗೆ Earn ಮಾಡೋದು ಎನ್ನುವುದನ್ನ ನೋಡುವುದಾದರೆ, ಜಿಯೋ ಸಂಸ್ಥೆ ಕಡೆಯಿಂದ, ಜಿಯೋ ಮಾರ್ಟ್, ಜಿಯೋ ಪೆಟ್ರೋಲ್ ಬಂಕ್ ಹಾಗೂ ಇತರ ಪ್ರಮುಖ ಬ್ರಾಂಡ್ ಗಳು ಸೇರಿದಂತೆ ದೊಡ್ಡ ಪರಿಸರ ವ್ಯವಸ್ಥೆಯೊಂದಿಗೆ ಸಂಯೋಜಿಸಲ್ಪಟ್ಟಂತೆ ಜಿಯೋ ಕಾಯಿನ್‌ನ ಮೌಲ್ಯವು ಹೆಚ್ಚಾಗುವ ನಿರೀಕ್ಷೆಯಿದೆ.
Recent Post:
PM Kisan Samman Scheme 2025, ಪಿಎಂ ಕಿಸಾನ್ ಸಮ್ಮನ್ ಯೋಜನೆ ಸ್ಟೇಟಸ್ ಚೆಕ್ ಮಾಡೋದು ಹೇಗೆ? ಪ್ರಧಾನಮಂತ್ರಿ ಯೋಜನೆ 2025
ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಆಹ್ವಾನ, New Ration Card Apply Details, APL and BPL Ration Card
ಇನ್ನು ಜಿಯೋ ಕಾಯಿನ್ ಅನ್ನು ಬ್ಲಾಕ್ ಚೈನ್ ತಂತ್ರಜ್ಞಾನವನ್ನು ಜನಸಾಮಾನ್ಯರಿಗೆ ತಲುಪಿಸುವ ಒಂದು ಮಾರ್ಗವಾಗಿ ಮುಖೇಶ್ ಅಂಬಾನಿ ಅವರು ರೂಪಿಸಿದ್ದಾರೆ. ಜಿಯೋದ 450 ಮಿಲಿಯನ್‌ಗಿಂತಲೂ ಹೆಚ್ಚಿನ ಬಳಕೆದಾರರನ್ನು ಹೊಂದಿರುವ ಈ ಕ್ರಮವು ಗೇಮ್-ಚೇಂಜರ್ ಆಗಬಹುದು. ಅಂದರೆ ಈಗ ನೀವು ಜಿಯೋ ಮಾರ್ಟ್ ಹಾಗೂ ಇನ್ನಿತರ ಕೆಲವು ಬ್ರಾಂಡ್ ಗಳಲ್ಲಿ ನಿಮಗೆ ಈ ಜಿಯೋ ಕಾಯಿನ್ ಸಿಗುತ್ತವೆ. ಇನ್ನು ಆ ಜಿಯೋ ಕಾಯಿನ್ ಅನ್ನು ಉಪಯೋಗಿಸಲು ನೀವು ಮತ್ತೆ ಜಿಯೋ ಸಂಸ್ಥೆ ಸಂಯೋಜಿಸಲ್ಪಟ್ಟ ಅವರದೇ ಕೆಲವು ಸಂಸ್ಥೆ ಗಳಲ್ಲಿ ಅದನ್ನ ನೀವು ಉಪಯೋಗಿಸಬಹುದು. ಅಂದ್ರೆ ನೀವು ಒಂದಿಷ್ಟು ಜಿಯೋ ಕಾಯಿನ್ ಸಂಪಾದಿಸಿದರೆ, ಅದನ್ನು ನೀವು ಜಿಯೋ ಸಂಸ್ಥೆಯ ಜಿಯೋ ಮಾರ್ಟ್ ನಲ್ಲಿ ಅದನ್ನ ಉಪಯೋಗಿಸಿ ನಿಮಗೆ ಬೇಕಾಗಿರುವುದನ್ನು ತೆಗೆದುಕೊಳ್ಳಬಹುದು, ಜಿಯೋ ಪೆಟ್ರೋಲ್ ಬಂಕ್ ಅದನ್ನ ಉಪಯೋಗಿಸಬಹುದು. ಹಾಗೂ ನೀವು ರೀಚಾರ್ಜ್ ಮಾಡಿಸಲು ಕೂಡ ಇದನ್ನ ಉಪಯೋಗಿಸಬಹುದು. ಬ್ಲಾಕ್‌ಚೈನ್‌ಗೆ ಜಿಯೋ ಪ್ರವೇಶವು ವಿಕೇಂದ್ರೀಕೃತ ತಂತ್ರಜ್ಞಾನವನ್ನು ಹೆಚ್ಚು ಮುಖ್ಯವಾಹಿನಿ ಮತ್ತು ಹಿಂದೆಂದಿಗಿಂತಲೂ ಹೆಚ್ಚು ಪ್ರವೇಶಿಸಬಹುದಾದಂತೆ ಮಾಡಬಹುದು.
ಇನ್ನು ನೀವು ಜಿಯೋ ಕಾಯಿನ್ ಅನ್ನು ಎಲ್ಲಿ ಗಳಿಸುವುದು ಎಂದು ನೋಡುವುದಾದರೆ, ನೀವು ರೀಚಾರ್ಜ್ ಮಾಡಿಸಿಕೊಂಡ ನಂತರ ಕ್ಯಾಶ್ ಬಾಕ್ ರೀತಿಯಲ್ಲೂ ಜಿಯೋ ಕಾಯಿನ್ ಸಿಗುತ್ತೆ. ಹಾಗೂ ಇನ್ನು ಕೆಲ ಕಡೆಗಳಿಂದಲೂ ನೀವು ಜಿಯೋ ಕಾಯಿನ್ ಖರೀದಿಸಬಹುದು.
ಇನ್ನು ಜಿಯೋ ಕಾಯಿನ್ ಬಂದರೆ ಡಿಜಿಟಲ್ ಯುಗದಲ್ಲಿ ಜಾಗತಿಕ ಮಟ್ಟದಲ್ಲಿ ಹೊಸ ಯುಗವೊಂದನ್ನ ಸೃಷ್ಟಿಸಲು ಹೊರಟಿದೆ. ಇನ್ನು ಮುಂದಿನ ದಿನಗಳಲ್ಲಿ ಜಿಯೋ ಕಾಯಿನ್ earn ಮಾಡುವ ಬಗ್ಗೆ ಕೆಲವು ಟ್ರಿಪ್ಸ್ ಹಾಗೂ ಟ್ರಿಕ್ಸ್ ನ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡುತ್ತೇವೆ.
How to Earn Jio Coin? 1 ಜಿಯೋ ನಾಣ್ಯದ ಬೆಲೆ ಎಷ್ಟು? ಜಿಯೋ ಕಾಯಿನ್ ಗಳಿಸೋದು ಹೇಗೆ? Mukesh Ambani, JIO COIN EARN 2025