ನಮಸ್ಕರ ಸ್ನೇಹಿತರೇ,
ಸರ್ಕಾರವು ಬಡವರಿಗೆ ಮಿಸಲಿಟ್ಟ ಪಡಿತರ ಚೀಟಿಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿರುವವರ ವಿರುಧ್ಧ ಕ್ರಮ ಕೈಗೊಳ್ಳುತ್ತಿದ್ದಾರೆ. ಕಾರು ಹಾಗು ಬೈಕ್ ವಾಹನಗಳನ್ನು ಹೊಂದಿರುವವರು ಆರ್ಥಿಕವಾಗಿ ಸಬಲರಾಗಿರುವುದರಿಂದ ಅವರಿಗೆ ರೇಷನ್ ಕಾರ್ಡ್ ಅಗತ್ಯವಿಲ್ಲ ಎಂದು ತಿಳಿದು ಸರ್ಕಾರ ಅನೇಕ ಜನರ ರೇಷನ್ ಕಾರ್ಡ್ ಗಳನ್ನ ಕ್ಯಾನ್ಸಲ್ ಮಾಡುತ್ತಿದ್ದಾರೆ. ಇದರ ಪರಿಣಾಮವಾಗಿ 22 ಲಕ್ಷಕ್ಕೂ ಹೆಚ್ಚು ಅನರ್ಹ ಫಲಾನುಭವಿಗಳ ರೇಷನ್ ಕಾರ್ಡ್ ಗಳನ್ನ ರದ್ದು ಮಾಡುತ್ತಿದ್ದಾರೆ. ಸರ್ಕಾರ ಕೆಲ ಕಾರ್ಯ ತಂತ್ರಾಂಶದಿಂದ ನಡೆಸುತ್ತಿದ್ದು, ಬಡವರಿಗೆ ಸಿಗಬೇಕಾದ ಸೌಲಭ್ಯಗಳು ನಿಜವಾದ ಅರ್ಹರಿಗೆ ಸಿಗುವಂತೆ ಮಾಡಿಕೊಳ್ಳುತ್ತಿದೆ. ಇನ್ನು ಯಾರ ರೇಷನ್ ಕಾರ್ಡ್ ಗಳು ಕ್ಯಾನ್ಸಲ್ ಆಗಲಿದೆ ಎನ್ನುವುದನ್ನ ನೋಡೋಣ.
Ration Card Cancel, ರೇಷನ್ ಕಾರ್ಡ್ ಇದ್ದವರಿಗೆ ಶಾಕಿಂಗ್ ಸುದ್ದಿ, BPL Ration Card Canceled, Congress, ಬೈಕ್ ಕಾರ್ ಇದ್ದವರ ರೇಷನ್ ಕಾರ್ಡ್ ಇನ್ಮುಂದೆ ಕ್ಯಾನ್ಸಲ್, Congress, Government Guarantee Scheme, Annabhagya
ನಮ್ಮ ದೇಶದಲ್ಲಿ ಬಡವರಿಗೆ ಸಹಾಯವಾಗಲು ಸರ್ಕಾರ ಬಿಪಿಎಲ್ ಕಾರ್ಡ್ ಹಾಗೂ ಎಪಿಎಲ್ ಕಾರ್ಡ್ ಅನ್ನ ಸರ್ಕಾರ ವಿತರಣೆಯನ್ನ ಮಾಡಿತ್ತು. ಬಿಪಿಎಲ್ ರೇಷನ್ ಕಾರ್ಡ್ ಅಂದ್ರೆ ಬಡತನ ರೇಖೆಗಿಂತ ಕೆಳಗೆ ಇರುವ ಜನರು ( BPL- below Poverty Line ), ಎಪಿಎಲ್ ರೇಷನ್ ಕಾರ್ಡ್ ಅಂದ್ರೆ ಬಡತನ ರೇಖೆಗಿಂತ ಮೇಲಿರುವ ಜನರು ( APL – Above Poverty Line). ಇನ್ನು ಇಲ್ಲಿ ಮುಖ್ಯವಾಗಿ ಬಿಪಿಎಲ್ ರೇಷನ್ ಕಾರ್ಡ್ ಕುಟುಂಬಗಳಿಗೆ ಸರ್ಕಾರದಿಂದ ಸಹಾಯವಾಗಿ ಪಡಿತರ ಅಂಗಡಿಗಳಲ್ಲಿ ರೇಷನ್ ಲಭ್ಯವಾಗುತ್ತಿತ್ತು. ಉಚಿತ ಅಕ್ಕಿ, ಬೇಳೆಕಾಳು ಹಾಗೂ ಧಾನ್ಯಗಳು ಜನರಿಗೆ ಈ ಕಾರ್ಡ್ ಹೊಂದಿದವರಿಗೆ ಸಿಗುತ್ತಿತ್ತು. ಆದರೆ ಇದೀಗ ಸರ್ಕಾರ ಅನರ್ಹ ಫಲಾನುಭವಿಗಳ ಬಿಪಿಎಲ್ ರೇಷನ್ ಕಾರ್ಡ್ ಗಳನ್ನ ಕ್ಯಾನ್ಸಲ್ ಮಾಡಿದ್ದಾರೆ.
ರೇಷನ್ ಕಾರ್ಡ್ ಅನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳ ಲಾಭಾವನ್ನ ಪಡೆಯಲು ಪ್ರಮುಖ ದಾಖಲೆಯ ಪಾತ್ರವಾಗಿರುತ್ತದೆ. ಆದರೆ ಇಲ್ಲಿ ಹೆಚ್ಚಾಗಿ ಅರ್ಹರಿಗಿಂತ ಅನರ್ಹರು ಇದರ ಲಾಭವನ್ನು ಪಡೆಯುತ್ತಿದ್ದಾರೆ. ಇದರ ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆ ಸರ್ಕಾರ ಕಠಿಣ ಕ್ರಮಗಳನ್ನ ಕೈಗೊಳ್ಳಲು ಆರಂಭಿಸಿದೆ. ಇದೀಗ ಬಂದಿರುವಂತ ಮಾಹಿತಿಗಳ ಪ್ರಕಾರ 22,62,413 ಅನರ್ಹ ಪಡಿತರ ಬಿಪಿಎಲ್ ಕಾರ್ಡುಗಳು ಹಾಗು ಅಂತ್ಯೋದ್ಯಮ ಕಾರ್ಡುಗಳನ್ನ ಸರ್ಕಾರ ಕ್ಯಾನ್ಸಲ್ ಮಾಡುವ ಸಾಧ್ಯತೆ ಇದೆ.
ಸರ್ಕಾರವು ಆಯ್ಕೆಯಾದ ಆದಾಯ ತೆರಿಗೆ ಹಾಗೂ ಆಸ್ತಿ ತೆರಿಗೆಯ ಮಿತಿ ಮೀರಿ, ತಪ್ಪು ಮಾಹಿತಿಗಳನ್ನ ನೀಡಿ ಮಾಡಿಸಿಕೊಂಡ ಬಿಪಿಎಲ್ ರೇಷನ್ ಕಾರ್ಡ್ ಗಳು ಹೀಗೆ ಅನೇಕ ಮೂಲಗಳಿಂದ ಪತ್ತೆ ಹಚ್ಚಲಾಗಿದೆ. ಹೀಗೆ ಅನೇಕ ತಂತ್ರಾಂಶ ಗಳ ಮೂಲದಿಂದ ಮಾಹಿತಿಯನ್ನ ಕಲೆಹಾಕಿ 22ಲಕ್ಷಕ್ಕೂ ಅಧಿಕ ರೇಷನ್ ಕಾರ್ಡ್ ಗಳನ್ನ ಪತ್ತೆ ಹಚ್ಚಿ ಆಹಾರ ಇಲಾಖೆಯ ಜಂಟಿ ನಿರ್ದೇಶಕರು ಮತ್ತು ಉಪ ನಿರ್ದೇಶಕರಿಗೆ ಇನ್ನು ಕೆಲವೇ 10 ದಿನಗಳೊಳಗೆ ಈ ಪಡಿತರ ಚೀಟಿಗಳನ್ನು ರದ್ದು ಮಾಡಲು ಸೂಚನೆ ನೀಡಲಾಗಿದೆ.
ಟೈಲರಿಂಗ್ ಉದ್ಯಮ ಸ್ಟಾರ್ಟ್ ಮಾಡುವವರಿಗೆ ಇಲ್ಲಿದೆ ಉತ್ತಮ ಅವಕಾಶ, Government Scheme, ಉಚಿತ ಟೈಲರಿಂಗ್ ತರಬೇತಿ ಜೊತೆಗೆ ಉಚಿತ ಹೊಲಿಗೆ ಯಂತ್ರ, Free Sewing Machine Scheme
ಇನ್ಮುಂದೆ ಎಲ್ಲಾ ಮಹಿಳೆಯರಿಗೆ ಸಿಗಲ್ಲ 2000 ಹಣ Gruhalaxmi Scheme 12 ಹಾಗು 13ನೇ ಕಂತಿನಲ್ಲಿ ಬಿಗ್ ಶಾಕ್ Gruhalaxmi Scheme Update, Annabhagya and Gruhalaxmi Scheme
ರೇಷನ್ ಕಾರ್ಡುಗಳು ರದ್ದು ಮಾಡಲು ಕಾರಣ:
ಇದು ಕೇವಲ ಅರ್ಹ ಪಾಲಾನುಭವಿಗಳಿಗೆ ಮಾತ್ರವಲ್ಲದೆ, ಅನರ್ಹ ಫಲಾನುಭವಿಗಳು ಇದರ ಲಾಭವನ್ನ ಪಡೆಯುತ್ತಿದ್ದಾರೆ. ಇನ್ಮುಂದೆ ಅಂತವರ ರೇಷನ್ ಕಾರ್ಡ್ ಗಳನ್ನ ಕ್ಯಾನ್ಸಲ್ ಮಾಡಲಾಗುತ್ತಿದೆ. ಯಾವ ಕಾರಣಕ್ಕೆ ಕ್ಯಾನ್ಸಲ್ ಮಾಡಲಾಗುತ್ತಿದೆ ಎನ್ನುವುದನ್ನ ನೋಡೋದಾದ್ರೆ,
- 1.20 ಲಕ್ಷ ರೂಪಾಯಿ ಗಿಂತ ಹೆಚ್ಚು ಆದಾಯ ಗಳಿಸುವ ಕುಟುಂಬಗಳ ರೇಷನ್ ಕಾರ್ಡ್ ಕ್ಯಾನ್ಸಲ್ ಆಗಲಿದೆ.
- ಆದಾಯ ತೆರಿಗೆಯ ಪಾವತಿದಾರರು.
- ನೀರಾವರಿ ಅಥವಾ ಒಣಭೂಮಿಯನ್ನ ಹೊಂದಿರುವ ಕುಟುಂಬಗಳು.
- ನೊಂದಾಯಿತ ಗುತ್ತಿಗೆದಾರರು ಹಾಗು ಕೋಶಿತ ಕೈಗಾರಿಕೆಗಳಲ್ಲಿ ಕೆಲಸ ಮಾಡುವವರು.
- ಸ್ವಂತ ಮನೆ ಹಾಗು ಆಸ್ತಿ ಹೊಂದಿರುವವರು.
- ಹೆಚ್ಚಿನ ಶ್ರೇಣಿಯ ವಾಹನಗಳ ಮಾಲೀಕರು: 100 ಸಿ ಸಿ ದ್ವಿಚಕ್ರ, ಕಾರು ಅಥವಾ ತ್ರಿಚಕ್ರ ವಾಹನಗಳ ಮಾಲಿಕರು.
ಬಿಪಿಎಲ್ ಕಾರ್ಡುಗಳು ಕ್ಯಾನ್ಸಲ್ ಆದ ಪರಿಣಾಮ:
ಈ ಒಂದು ಕ್ರಮವು ಸರ್ಕಾರ ಬಾರಿ ಬಂಡವಾಳವನ್ನು ಸದುಪಯೋಗ ಪಡಿಸಿಕೊಳ್ಳಲು, ಈ ರೀತಿಯ ಕ್ರಮಗಳನ್ನ ಕೈಗೊಳ್ಳಲಿದೆ. ಈ ಒಂದು ತಾಂತ್ರಿಕ ತಪಾಸಣೆಯ ಮೂಲಕ ಕೆಲ ತಪ್ಪುಗಳನ್ನ ಕಂಡುಹಿಡಿದು, ಈ ಯೋಜನೆಯನ್ನ ಅರ್ಹ ಫಲಾನುಭವಿಗಳಿಗೆ ನೀಡಲಾಗುತ್ತಿದೆ.
Ration Card Cancel, BPL Ration Card Canceled, Congress, Government Guarantee Scheme, Annabhagya